ಆಶಿಶ್ ವಿದ್ಯಾರ್ಥಿ ಎರಡನೇ ಪತ್ನಿ ಯಾವ ಹೀರೋಹಿನ್‌ಗೂ ಕಮ್ಮಿ ಇಲ್ಲ ಸ್ವಾಮಿ;

 | 
Vji
ಬಹುಭಾಷಾ ನಟ, ಹಾಗೂ ಜನಪ್ರಿಯ ಫೂಡ್ ವ್ಲಾಗರ್ ಆಶಿಷ್ ವಿದ್ಯಾರ್ಥಿ ತಮ್ಮ 60ನೇ ವಯಸ್ಸಿನಲ್ಲಿ ಎರಡನೇ ಬಾರಿ ಮದುವೆಯಾಗಿದ್ದಾರೆ. ಅಸ್ಸಾಮಿ ಮೂಲದ ರೂಪಾಲಿ ಬರುವ ಎಂಬುವರನ್ನು ಸರಳವಾಗಿ ಆಶಿಷ್ ವಿದ್ಯಾರ್ಥಿ ವಿವಾಹವಾಗಿದ್ದಾರೆ. ಇಬ್ಬರು ಪರಸ್ಪರ ಹಾರಗಳನ್ನು ಬದಲಾಯಿಸಿಕೊಂಡಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.
 ಜೀವನದ ಈ ಹಂತದಲ್ಲಿ ರೂಪಾಲಿಯೊಟ್ಟಿಗೆ ವಿವಾಹವಾಗಿರುವುದು ಬಹಳ ಖುಷಿಯಾಗಿದೆ ಎಂದು ಆಶಿಷ್ ವಿದ್ಯಾರ್ಥಿ ಹೇಳಿಕೊಂಡಿದ್ದಾರೆ. ಗುವಾಹಟಿಯವರಾಗಿರುವ ರೂಪಾಲಿ ಬರುವ ಫ್ಯಾಷನ್ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೊಲ್ಕತ್ತದ ಅಪ್​ಸ್ಕೇಲ್ ಫ್ಯಾಷನ್ಸ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ರೂಪಾಲಿ ಹಾಗೂ ಆಶಿಷ್​ರ ವಿವಾಹ ಸಹ ಕೊಲ್ಕತ್ತದಲ್ಲಿ ನಡೆದಿದೆ. ಆಶಿಷ್ ವಿದ್ಯಾರ್ಥಿಗೆ ಇದು ಎರಡನೇ ಮದುವೆ ಈ ಹಿಂದೆ ನಟಿ ಶಕುಂತಲಾ ಅವರ ಪುತ್ರಿ ರಜೋಶಿ ಜೊತೆಗೆ ಆಶಿಷ್ ವಿದ್ಯಾರ್ಥಿ ವಿವಾಹವಾಗಿದ್ದರು. 
ಹಲವು ವರ್ಷಗಳ ದಾಂಪತ್ಯದ ಬಳಿಕ ಇಬ್ಬರೂ ದೂರಾದರು. ಈಗ ಆಶಿಷ್ ವಿದ್ಯಾರ್ಥಿ ರೂಪಾಲಿಯನ್ನು ವಿವಾಹವಾಗಿದ್ದಾರೆ. ಆಶಿಷ್ ವಿದ್ಯಾರ್ಥಿ ಭಾರತದ ಜನಪ್ರಿಯ ಪೋಷಕ ನಟ ಹಾಗೂ ವಿಲನ್​ಗಳಲ್ಲಿ ಒಬ್ಬರು. ಕನ್ನಡ ಸೇರಿದಂತೆ 11 ಭಾಷೆಗಳ ಸುಮಾರು 300 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ನಟನೆಗೆ ರಾಷ್ಟ್ರಪ್ರಶಸ್ತಿಯನ್ನೂ ಪಡೆದಿರುವ ಆಶಿಷ್ ವಿದ್ಯಾರ್ಥಿ ಕೋವಿಡ್ ಬಳಿಕ ವ್ಲಾಗಿಂಗ್ ಸಹ ಆರಂಭ ಮಾಡಿದ್ದಾರೆ.
ಹಲವು ನಗರಗಳಿಗೆ ತೆರಳಿ ಅಲ್ಲಿನ ಜನಪ್ರಿಯ ಖಾದ್ಯಗಳನ್ನು ಸವಿಯುತ್ತಾ ಫೂಡ್ ವ್ಲಾಗಿಂಗ್ ಸಹ ಮಾಡುತ್ತಿದ್ದಾರೆ. ಆಶಿಷ್ ವಿದ್ಯಾರ್ಥಿಯವರ ಫೂಡ್ ವ್ಲಾಗಿಂಗ್ ಬಹಳ ಜನಪ್ರಿಯ. ಇನ್ನು ರೂಪಾಲಿ ಕೂಡ ನಟಿ ನಾವು ಕೆಲವು ತಿಂಗಳುಗಳ ಮುಂಚೆ ಪರಸ್ಪರ ಭೇಟಿಯಾದೆವು. ಇಬ್ಬರಿಗೂ ಪರಸ್ಪರರ ವ್ಯಕ್ತಿತ್ವ ಇಷ್ಟವಾಯಿತು ಹಾಗಾಗಿ ನಮ್ಮ ಗೆಳೆತನವನ್ನು ಇನ್ನೊಂದು ಹಂತ ಮೇಲಕ್ಕೆ ಕೊಂಡೊಯ್ಯಲು ನಿಶ್ಚಿಯಿಸಿದೆವು. ಆದರೆ ನಮ್ಮ ಮದುವೆ ಸರಳವಾಗಿರಬೇಕೆಂದು ನಾವು ಮೊದಲೇ ನಿಶ್ಚಯ ಮಾಡಿದ್ದೆವು ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.