ಗಂಡನ ಸಿನಿಮಾದ ಹಾಡು ಕೇಳಿ ಕಣ್ಣೀರು ಸುರಿಸಿದ ಅಶ್ವಿನಿ ಮೇಡಂ

 | 
Huu

ಗೊಂಬೆ ಹೇಳುತೈತೆ ಹಾಡು ಕಿವಿಗೆ ಬಿದ್ದರೆ ಸಾಕು ಕನ್ನಡಿಗರು ಒಮ್ಮೆಯಾದರೂ ಆ ಹಾಡನ್ನ ಗುನುಗದೇ ಇರಲಾರರು. ಹೀಗೆ ಕನ್ನಡಿಗರ ಹೃದಯಲ್ಲಿ ಈ ಹಾಡು ಚಿರಂಜೀವಿ. ದಶಕಗಳ ಹಿಂದೆ ವರನಟ ಡಾ.ರಾಜ್‌ಕುಮಾರ್‌  ಹಾಡಿದ್ದ ಹಾಡಿನ ಮರುರೂಪ ರಾಜಕುಮಾರ ಸಿನಿಮಾದಲ್ಲಿ ಮೂಡಿಬಂದಿತ್ತು. ಈಗ ಅದೇ ಹಾಡನ್ನು ಹೊಸಪೇಟೆಯಲ್ಲಿ ಹಾಡಿ ಹಲವರ ಕಣ್ಣಲ್ಲಿ ಕಣ್ಣೀರು ತರಿಸಿದ್ದಾರೆ. ಹೌದು ಈ ಹಾಡಿಗೆ ಅಶ್ವಿನಿ ಪುನಿತ್ ರಾಜ್ ಕುಮಾರ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಯುವರಾಜಕುಮಾರ್ ತಮ್ಮ ಚಿತ್ರವನ್ನ ಪ್ರಮೋಟ್ ಮಾಡುತ್ತಿದ್ದಾರೆ. ಬೆಂಗೂರಿನಲ್ಲಿ ಪ್ರೆಸ್ ಮೀಟ್ ಮಾಡಿಯೇ ಚಿತ್ರದ ಎಲ್ಲ ವಿಷಯಗಳನ್ನ ಡೈರೆಕ್ಟರ್ ಸಂತೋಷ್ ಆನಂದ್‌ ರಾಮ್ ಜೊತೆಗೆ ಜೊತೆಗೇನೆ ಹಂಚಿಕೊಂಡಿದ್ದಾರೆ. ಇದೀಗ ಸಿನಿಮಾದ ಪ್ರೀ-ರಿಲೀಸ್ ಇವೆಂಟ್‌ಗೆ ಹೊಸಪೇಟೆಗೆ ಬಂದಿದ್ದಾರೆ.ಪವರ್ ಸ್ಟಾರ್‌ ಪುನೀತ್ ಫ್ಯಾನ್ಸ್ ಇಲ್ಲಿ ಸಿಕ್ಕಾಪಟ್ಟೆ ಇದ್ದಾರೆ. ಇವರ ಈ ಒಂದು ಫ್ಯಾನ್ಸ್ ಭೇಟಿ ಆಗಲು, ಯುವ ಇಲ್ಲಿಗೆ ಬರುತ್ತಿದ್ದಾರೆ. ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಕೂಡ ಇಲ್ಲಿಯೇ ಪ್ಲಾನ್ ಆಗಿತ್ತು ಅಲ್ಲಿ ವಿಜಯ್ ಸರ್ ಹಾಡು ಹೇಳಿದ್ದಾರೆ.

ಯುವ ರಾಜ್‌ಕುಮಾರ್ ಬಗ್ಗೆ ರಾಘಣ್ಣ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ಗಣ್ಯರು ವೇದಿಕೆ ಏರಿ ಮಾತಾಡುತ್ತಿದ್ದಂತೆ ಅಭಿಮಾನಿಗಳ ಹರ್ಷ ಮುಗಿಲು ಮುಟ್ಟಿತ್ತು. ರಾಘಣ್ಣನೇ ಯುವ ರಾಜ್‌ಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಬಗ್ಗೆ ಭಾವನಾತ್ಮಕವಾಗಿ ಮಾತಾಡಿದ್ದರು. ಯುವ ರಾಜ್‌ಕುಮಾರ್ ಅಪ್ಪು ಮಗನಿದ್ದಂತೆ ಎಂದು ಹೇಳಿದ್ದರು. ಆ ಬಳಿಕ ಮಾತಾಡಿದ ಯುವ ಹೊಸಪೇಟೆ ಜನರ ಹರ್ಷವನ್ನು ದುಪ್ಪಟ್ಟು ಮಾಡಿದ್ರು.

ಯುವ ರಾಜ್‌ಕುಮಾರ್ ಸಿನಿಮಾದಲ್ಲಿ ಇನ್ಮುಂದೆ ಅಪ್ಪು ನೋಡುತ್ತಾರೆ. ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾ ರಿಲೀಸ್ ಆಗುತ್ತೆ. ಹೀಗಾಗಿ ಪ್ರಿ ರಿಲೀಸ್ ಇವೆಂಟ್‌ನಲ್ಲಿ ಯುವ ತನ್ನ ಜರ್ನಿಯನ್ನೇ ತೆರೆದಿಟ್ಟಿದ್ದಾರೆ. ನಮ್ಮ ತಂದೆನೇ ಹೇಳ್ಬಿಟ್ರು ಅಪ್ಪು ಮಗ ಅಂತ. ಎಲ್ಲಾ ಕಡೆ ನಾನು ಹೋಗುತ್ತಿರುತ್ತೇನೆ. ಎಲ್ಲರೂ ಹೇಳ್ತಿರುತ್ತಾರೆ. ಅಪ್ಪು ಮಗ ಬಂದ. ಅಪ್ಪು ಮಗ ಬಂದ ಅಂತ. ನನಗೆ ಎಷ್ಟು ಸಂತೋಷ ಆಗುತ್ತೆ ಗೊತ್ತಾ? ಅಂದರೆ, ನಮ್ಮ ಚಿಕ್ಕಪ್ಪ ಇಲ್ಲೇ ಇದ್ದಾರೆ. ಅವರು ನನ್ನ ಶಕ್ತಿಯಾಗಿ ನಿಂತಿದ್ದಾರೆ. 

ಅವರು ನನ್ನ ಕೈ ಹಿಡಿದು ನಡೆಸುತ್ತಿದ್ದಾರೆ. ಇಲ್ಲಿವರೆಗೂ ಕರೆದುಕೊಂಡು ಬಂದು ನಿಮ್ಮ ಮಡಿಲಿಗೆ ಹಾಕಿದ್ದಾರೆ. ಇನ್ಮುಂದೆ ನೀವು ಹೇಗೆ ಹೇಳ್ತಿರೋ ಹಂಗೆ.ಎಂದು ಯುವ ವೇದಿಕೆ ಮೇಲೆ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.