ಚಾಮುಂಡಿ ಬೆಟ್ಟದಲ್ಲಿ ದೊಡ್ಡ ಮಗಳ ಬಗ್ಗೆ ಸಿಹಿಸುದ್ದಿ ಹಂಚಿಕೊಂಡ ಅಶ್ವಿನಿ ಪುನೀತ್, ಸಂಭ್ರಮದಲ್ಲಿ ಅಪ್ಪು ಅಭಿಮಾನಿಗಳು

ನಟ ಪುನೀತ್ ರಾಜ್ ಕನ್ನಡ ಚಿತ್ರ ರಂಗದ ಶ್ರೇಷ್ಠ ನಟ, ಸಿನಿಮಾ ರಂಗದಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನು ಪಡೆದು ಕೊಂಡ ನಟ, ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ ಅವರ ಸಾಕಷ್ಟು ಸಮಾಜ ಸೇವೆಗಳು ಮುನ್ನಲೆಗೆ ಬಂದಿದ್ದವು. ಅದೆಷ್ಟೊ ಆಶ್ರಮ ಗಳಿಗೆ,ಅನಾಥ ಮಕ್ಕಳಿಗೆ ಆಶ್ರಯ ನೀಡಿದ್ದರು, ಅದೆಷ್ಟೋ ಮಕ್ಜಳಿಗೆ ಶಿಕ್ಷಣ ನೀಡಿದ್ದರು, ಅದ್ರೆ ಅಂತಹ ಶ್ರೇಷ್ಠ ನಟನನ್ನು ಕಳೆದು ಕೊಳ್ಳ ಬೇಕಾಯಿತು, ಇದೀಗ ಪುನೀತ್ ರಾಜ್ ಕುಮಾರ್ ಬಗ್ಗೆ ಅವರ ಪತ್ನಿ ಅಶ್ವಿನಿ ಪುನೀತ್ ಮಾತನಾಡಿ, ಪುನೀತ್ ಗೆ ಈ ಒಂದು ಆಸೆ ಇತ್ತು ಅದು ಈಗ ನೆರವೇರುತ್ತಿದೆ ಎಂದಿದ್ದಾರೆ.
ಅಪ್ಪುವಿನ ಕನಸಿನ ಕೂಸು ಪಿಆರ್ ಕೆ ಪ್ರೊಡಕ್ಷನ್ಸ್ ಹೌಸ್ ಜವಾಬ್ದಾರಿಯನ್ನು ಹೊತ್ತು ನಿಭಾಯಿಸಿಕೊಂಡು ಹೋಗುತ್ತಿರುವ ಅಶ್ವಿನಿ ಅವರು ಇದೀಗ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಿದೇಶದಿಂದ ಮಗಳು ಧೃತಿ ಇನ್ನೇನು ವಿದ್ಯಾಭ್ಯಾಸ ಮುಗಿಸಿ ಬರಲಿದ್ದಾಳೆ. ಮುಂದಿನ ದಿನಗಳಲ್ಲಿ ಅವಳು ಪಿ ಆರ್ ಕೆ ಪ್ರೊಡಕ್ಷನ್ಸ್ ನ ಜವಾಬ್ದಾರಿಯನ್ನು ಹೊರಲಿದ್ದಾಳೆ. ಅವಳ ಬೆನ್ನೆಲುಬಾಗಿ ನಾನಿರುತ್ತೇನೆ. ಇನ್ನು ಚಿಕ್ಕ ಮಗಳು ವಂದಿತಾ ಕೂಡ ವಿದೇಶದಲ್ಲಿ ವ್ಯಾಸಂಗ ಮಾಡುವ ಆಸೆಯನ್ನು ಹೊಂದಿರುವ ಕಾರಣ ನಾನು ಎಲ್ಲ ಕಡೆಗಳ ಜವಾಬ್ದಾರಿಯನ್ನು ಹೊರಬೇಕಾಗಿದೆ ಎಂದಿದ್ದಾರೆ.
ಪುನೀತ್ ರಾಜಕುಮಾರ್ ಅವರೇ “ಆಚಾರ್ ಆ್ಯಂಡ್ ಕೋ’ ಮತ್ತು “ಓ2′ ಕಥೆಗಳನ್ನು ಕೇಳಿ, ಒಪ್ಪಿದ್ದರಂತೆ. ಇದೀಗ ಒಂದು ಸಿನಿಮಾ ರಿಲೀಸ್ಗೆ ರೆಡಿಯಿದೆ. “ಇವೆರಡು ಚಿತ್ರಗಳು ಅಪ್ಪು ಅವರಿದ್ದಾಗಲೇ ಫೈನಲ್ ಆಗಿತ್ತು. “ಓ2′ ಮೆಡಿಕಲ್ ಥ್ರಿಲ್ಲರ್ ಕಥೆಯಾಗಿದ್ದು ಆಶಿಕಾ ರಂಗನಾಥ್ ನಟಿಸಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಎರಡು& ಮೂರು ತಿಂಗಳಲ್ಲಿ ರಿಲೀಸ್ ಆಗಲಿದೆ’ ಎಂದು ಹೇಳಿಕೊಳ್ಳುತ್ತಾರೆ ಅಶ್ವಿನಿ ಅವರು.
ಪರಭಾಷೆಗಳಲ್ಲಿ ಸಿನಿಮಾ ನಿರ್ಮಿಸುವ ಬಗ್ಗೆ ಅಶ್ವಿನಿ, “ಬೇರೆ ಭಾಷೆಗಳಿಂದ ಸಿನಿಮಾ ಮಾಡಿ ಅಂತ ಯಾರೂ ಬಂದಿಲ್ಲ. ನಮ್ಮ ಕುಟುಂಬದಲ್ಲಿ ಅಪ್ಪಾಜಿ, ಅಮ್ಮ, ಅಪ್ಪು ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡಿಲ್ಲ. ಮುಂದೆ ಉತ್ತಮ ಕಥೆಗಳು, ದೊಡ್ಡ ಬ್ಯಾನರ್ಗಳು ಸಹ ನಿರ್ಮಾಣಕ್ಕೆ ಬಂದರೆ, ಕೈಜೋಡಿಸುವ ಬಗ್ಗೆ ಯೋಚಿಸುತ್ತೇವೆ’ ಎಂದಿದ್ದಾರೆ.
ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.