ಕಸ ಗುಡಿಸುವವಳ ಸಹಾಯ ಪಡೆದು ಜಿಮ್ ವರ್ಕೌಟ್ ಮಾಡಿದ ಅಸಾಮಿ, ಬೆ ಚ್ಚಿಬಿದ್ದ ಕನ್ನಡಿಗರು
| Jul 31, 2025, 18:25 IST
ಜಿಮ್ನಲ್ಲಿ ವರ್ಕೌಟ್ ಮಾಡುವುದು ಎಂದರೆ ಈಗಿನ ಜನರೇಷನ್ಗೆ ಫುಲ್ ಫ್ಯಾಶನ್. ಸಖತ್ ಆಗಿ ಜಿಮ್ ಮಾಡಿ ಬೈ ಚಿಪ್ಸ್, ಚೆಸ್ಟ್, ಶೋಲ್ಡರ್, ತೈಸ್ ಬಲಗೊಳಿಸಿ ನೋಡಲು ಆಕರ್ಷಣೆಯಾಗಿರಬೇಕು ಎನ್ನುವುದು ಯಂಗ್ಸ್ಟಾರ್ಸ್ಗಳ ಮಹಾದಾಸೆ. ಜಿಮ್ ಮಾಡುವುದೇನು ತಪ್ಪಿಲ್ಲ.. ಆದ್ರೆ ಕೆಲವೊಮ್ಮೆ ಇದು ಆರೋಗ್ಯದ ಮೇಲೆ ತೀವ್ರವಾಗಿ ಪರಿಣಾಮ ಬೀರಬಹುದು. ಅದರಲ್ಲೂ ಕೋಚ್ ಇಲ್ಲದೆ ಮಾಡೋಕೆ ಹೋಗ್ಬೇಡಿ.
ಹೌದು ಈ ವಿಡಿಯೋ ನೋಡಿ ವೇಟ್ ಲಿಫ್ಟಿಂಗ್ ಮಾಡುವ ವೇಳೆ ವೇಟ್ ಪ್ರೆಸ್ ಮೈಮೇಲೆ ಬಿದ್ದಿದೆ ನಂತರದಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿ ಒಬ್ಬಳು ಬಂದು ಅದನ್ನು ಎತ್ತಲು ಪ್ರಯತ್ನ ಪಟ್ಟಿದ್ದಾಳೆ. ಕೊನೆಗೆ ಅದು ಅವರ ಕುತ್ತಿಗೆ ಮೇಲೆ ಬಿದ್ದಿದೆ ಆ ಹುಡುಗಿಯ ಸಹಾಯದಿಂದ ಹಾಗೋ ಹೀಗೋ ಅಲ್ಲಿಂದ ಎದ್ದ ಆ ಯುವಕ ಜೀವ ಉಳಿಸಿಕೊಳ್ಳಲು ಹರಸಾಹಸ ಪಟ್ಟು ಉಳಿದಿದ್ದಾನೆ.
ಹಾಗಾಗಿಯೇ ಗೊತ್ತಿಲ್ಲದೆ , ಇಲ್ಲವೇ ಪರಿಣಿತರಿಲ್ಲದೆ ಜಿಮ್ ಗೆ ಕಾಲಿಡಬೇಡಿ ಎಂದು. ಅಷ್ಟಕ್ಕೂ ಅತಿಯಾದ ವರ್ಕೌಟ್ ರೋಗನಿರೋಧಕ ಶಕ್ತಿಯನ್ನು ಬಲಹೀನಗೊಳಿಸುತ್ತೆ. ಇದರಿಂದ ದೇಹದೊಳಿಗಿನ ಮೂಳೆಗಳು ಹಾನಿಯಾಗುವ ಸಂಭವವಿರುತ್ತದೆ. ವರ್ಕೌಟ್ ಮಾಡುತ್ತ ಹೋದಂತೆ ನಮಗೆ ಹುಮ್ಮಸ್ಸು ಜಾಸ್ತಿಯಾಗಿ ಇನ್ನಷ್ಟು ಮಾಡಬೇಕು ಎಂಬ ಆಸೆ ಹುಟ್ಟುತ್ತದೆ.
ಆಗ ನಾವು ಅದನ್ನು ಕಂಟ್ರೋಲ್ ಮಾಡಿ, ದಿನ ಮಾಡಿದಷ್ಟೇ ಅಥವಾ ಅದಕ್ಕಿಂತ ಕಡಿಮೆಯೇ ಮಾಡಬೇಕು. ನಿರಂತರ ವರ್ಕೌಟ್ನಿಂದ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಾವೆ.ಅತಿಯಾದ ಜಿಮ್ನಿಂದಾಗಿ ಹಾರ್ಮೋನ್ಗಳಲ್ಲಿ ಅಸಮತೋಲವಾಗಿ ದಣಿವು ಹೆಚ್ಚಾಗುತ್ತದೆ. ಇದರಿಂದ ನಿಶಕ್ತಿಗೆ ಬಿದ್ದಂತೆ ಆಗುತ್ತದೆ. ಅಂದರೆ ಯಾವುದೇ ಕೆಲಸದಲ್ಲಿ ಉತ್ಸಹ ಇರುವುದಿಲ್ಲ
ಇಷ್ಟೇ ಅಲ್ಲದೆ ಹೆಚ್ಚು, ಹೆಚ್ಚಾಗಿ ವರ್ಕೌಟ್ ಮಾಡುವುದರಿಂದ ರಕ್ತದೊತ್ತಡವನ್ನು ಹೆಚ್ಚುತ್ತದೆ. ರಕ್ತದೊತ್ತಡವು ಹೃದಯದ ಮೇಲೆ ಪರಿಣಾಮ ಬೀರಿ ಹೃದಯ ಸಂಬಂಧಿ ಕಾಯಿಲೆ ಜೊತೆ ಜೀವಕ್ಕೆ ಅಪಾಯವು ಆಗಬಹುದು. ನಗರದಂತಹ ಪ್ರದೇಶಗಳಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಿ ಉದ್ಯಾನ ಹಾಗೂ ಜಿಮ್ಗಳಲ್ಲಿ ವರ್ಕೌಟ್ ಮಾಡುವುದು ಮನಸಿಗೆ ಕಿರಿ ಕಿರಿ ಎನಿಸಬಹುದು.