ರಾತ್ರಿ 12:30 ಕ್ಕೆ ಅಂತರಪಟ ಸೀರಿಯಲ್ ನಟಿಯನ್ನು ಮನೆಯಿಂದ ಹೊರಹಾಕಿದ್ದ ಸಂಬಂಧಿಕರು, ನಟಿಯ ಕಣ್ಣೀರ‌ ಮಾತು

 | 
Hg

ಕಿರುತೆರೆಯಲ್ಲಿ ಎಷ್ಟು ಕಲಾವಿದರು ಇದ್ದರೂ ಅದು ಕಡಿಮೆನೇ. ಒಂದೊಂದು ಪಾತ್ರದಲ್ಲಿ ಒಬ್ಬೊಬ್ಬರು ನಟಿಸುವಂತಾಗಿದೆ. ಮೊದಲು ಕಲಾವಿದರ ಸಂಖ್ಯೆ ತುಂಬಾ ಕಡಿಮೆ ಇತ್ತು. ಹೀಗಾಗಿ ಒಂದು ಧಾರಾವಾಹಿಯಲ್ಲಿ ತಾಯಿ ಪಾತ್ರ, ಮತ್ತೊಂದರಲ್ಲಿ ಅತ್ತೆಯ ಪಾತ್ರ. ಹೀಗೆ ಒಬ್ಬರೇ ಪುನರಾವರ್ತನೆ ಆಗುತ್ತಿದ್ದರು. ನಾಯಕ, ನಾಯಕಿಯರು ಬಿಟ್ಟು ಬೇರೆಲ್ಲರೂ ವಿವಿಧ ಪಾತ್ರಗಳನ್ನು ಮಾಡುತ್ತಿದ್ದರು.

ಈಗ ಹೀಗೆ ಒಬ್ಬರೇ ಕಲಾವಿದರು ಬೇರೆ ಬೇರೆ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುವುದು ತೀರಾ ಕಡಿಮೆಯಾಗಿದೆ. ಆದರೆ, ಕನ್ನಡ ಮತ್ತು ಪರಭಾಷೆಗಳಲ್ಲಿ ಒಟ್ಟಿಗೆ ನಟಿಸುವುದನ್ನು ನೋಡಬಹುದಷ್ಟೇ. ಹಾಗಾಗಿ ಪ್ರತಿ ಬಾರಿ ಹೊಸ ಧಾರಾವಾಹಿ ಶುರುವಾಗಬೇಕು ಎಂದರೆ, ಹೊಸ ನಟ ಹಾಗೂ ನಟಿಯರು ಬೇಕೆ ಬೇಕು. ಅದರಲ್ಲೂ ಪ್ರಮುಖ ಪಾತ್ರಗಳಿಗೆ ಬಹಳ ಎಚ್ಚರಿಕೆಯಿಂದ ಪಾತ್ರಧಾರಿಗಳನ್ನು ಆರಿಸಬೇಕಾಗುತ್ತದೆ. 

ಯಾಕೆಂದರೆ, ಈಗ ಮೂಡಿ ಬರುವ ಧಾರಾವಾಹಿಗಳೆಲ್ಲವೂ 3ರಿಂದ 4 ವರ್ಷಗಳ ಕಾಲ ಪ್ರಸಾರ ಆಗುತ್ತವೆ. ಇದರಿಂದ ಪ್ರಮುಖ ಪಾತ್ರಗಳು ಒಂದೇ ಧಾರಾವಾಹಿಯಲ್ಲಿ ನಟಿಸುವುದು ಸಾಮಾನ್ಯವಾಗಿಬಿಟ್ಟಿದೆ.ಇದರಿಂದ ಕಲಾವಿದರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗುತ್ತಲೇ ಇದೆ. ಇತ್ತೀಚೆಗೆ ಹಲವು ಹೊಸ ಧಾರಾವಾಹಿಗಳು ಕನ್ನಡ ಕಿರುತೆರೆಯಲ್ಲಿ ಪ್ರಾರಂಭವಾಗಿದ್ದು, ಇವುಗಳಲ್ಲಿ ಹೆಚ್ಚು ಹೊಸ ಕಲಾವಿದರೇ ಕಾಣಿಸಿಕೊಂಡಿದ್ದಾರೆ. 

ಅವರಲ್ಲೊಬ್ಬರು ನಮ್ಮ ಅಂತರಪಟ ಧಾರಾವಾಹಿಯ ಮುದ್ದು ಮುಖದ ಚಲುವೆ ಆರಾಧನಾ. ಇವರ ಹೆಸರು ತನ್ವಿ ಬಾಲರಾಜ್ ಎಂದು ಮೂಲ ಮಂಡ್ಯದವರು.ಚಿಕ್ಕ ವಯಸ್ಸಿನಿಂದಲೂ ನಟಿಯಾಗಬೇಕು ಎಂದು ಆಸೆ ಪಟ್ಟಿದ್ದರಂತೆ. ಇದೀಗ ಅವರ ಕನಸು ನನಸಾಗಿದೆ. ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಆಕೆಗೆ ಈಗಾಗಲೇ 4,728 ಮಂದಿಯ ಫಾಲೋವರ್ಸ್ ಇದ್ದಾರೆ. ಡ್ಯಾನ್ಸರ್ ಆಗಿರುವ ತನ್ವಿ ಅವರು, ಸಿಕ್ಕಾಪಟ್ಟೆ ರೀಲ್ಸ್‌ಗಳನ್ನು ಮಾಡಿದ್ದಾರೆ. ಇನ್ನು ತನ್ವಿಯಾ ಧಾರಾವಾಹಿಯಲ್ಲಿ ನಟಿಸುತ್ತಿರುವುದಕ್ಕೆ ಅವರ ಮನೆಯವರಿಗೆಲ್ಲ ಅಷ್ಟೊಂದು ಇಷ್ಟವಿಲ್ಲ. 

ಆದರೂ ಕೂಡ ಇವರು ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರುವ ಹಾಗೆ ಕಾಣುತ್ತಿದ್ದಾರೆ. ಇನ್ನು ಒಮ್ಮೆ ಇವರ ಅಕ್ಕನ ಗಂಡ ಅಂದರೆ ಭಾವ ಇವರನ್ನು ಮಧ್ಯರಾತ್ರಿ ಎಂದು ನೋಡದೆ ಮನೆಯಿಂದ ಹೊರಗೆ ಹಾಕಿದ್ದರಂತೆ. ಇದೀಗ ಸಂದರ್ಶನ ಒಂದರಲ್ಲಿ ಹೇಳಿಕೊಂಡು ನಟಿ ಕಣ್ಣೀರಿಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.