ಕೊನೆಯ ಕ್ಷಣ ಮುದ್ದಾದ ಚೆಲುವೆಗೆ ತಾಳಿ ಕಟ್ಟಲು ಸಾಧ್ಯವಾಗದೆ ದುಃಖ ಪಟ್ಟ ವರ

 | 
ರರರ

ತಾಳಿಕಟ್ಟುತ್ತಿದ್ದ ವೇಳೆ ಮಧುಮಗಳು ಮಂಗಳ ಸೂತ್ರಕ್ಕೆ ಕೈ ಅಡ್ಡ ಹಿಡಿದು, ನನಗೆ ಈ ಮಧುಮಗ ಇಷ್ಟ ಇಲ್ಲ ಎಂದು ಮದುವೆ ನಿಲ್ಲಿಸಿರುವ ಘಟನೆ ಸಿನಿಮಾದಲ್ಲಿ  ನೋಡಿರುತ್ತೀರಿ ಆದರೆ ಇದೀಗ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮದಲ್ಲಿ  ನಿಜವಾಗಿಯೂ ನಡೆದಿದೆ.

 ಚಿಕ್ಕಬ್ಯಾಲದಕೆರೆ ಗ್ರಾಮದಲ್ಲಿ ಮಂಜುನಾಥ್ ಮತ್ತು ಐಶ್ವರ್ಯ ನಡುವೆ ವಿವಾಹ ನಿಶ್ಚಿಯವಾಗಿತ್ತು. ಅದರಂತೆ ಗ್ರಾಮದ ಭೈರವೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆಗೆ ಎಲ್ಲಾ ಸಿದ್ಧತೆ ಮಾಡಲಾಗಿತ್ತು. ಇನ್ನೇನು ವರ ಕೈಯಲ್ಲಿ ತಾಳಿ ಹಿಡಿದು ಕಟ್ಟಬೇಕು ಎನ್ನುವಷ್ಟರಲ್ಲೇ ವಧು ಕೈ ಅಡ್ಡ ಹಿಡಿದು ಮದುವೆ ಬೇಡ ಎಂದು ತಡೆದಿದ್ದಾಳೆ.

ಗುರುವಾರ ಬೆಳಗ್ಗೆ ನಿಗದಿಯಾಗಿದ್ದ ಮೂಹೂರ್ತದಲ್ಲಿ ತಾಳಿ ಕಟ್ಟಲು ಮುಂದಾಗಿದ್ದ ವರನಿಗೆ ಕೈ ಅಡ್ಡ ಹಿಡಿದ ಮಧುಮಗಳು ಐಶ್ವರ್ಯ ನನಗೆ ಈ ಹುಡುಗ ಇಷ್ಟ ಇಲ್ಲ, ಹಾಗಾಗಿ ನಾನು ತಾಳಿ ಕಟ್ಟಿಸಿಕೊಳ್ಳುವುದಿಲ್ಲ ಎಂದು ಹಠ ಹಿಡಿದ್ದಾಳೆ. ಈ ವೇಳೆ ಪೋಷಕರು ಹಾಗೂ ಸಂಬಂಧಿಕರು ಯುವತಿ ಐಶ್ವರ್ಯಳನ್ನು ಎಷ್ಟೇ ಮನ ಒಲಿಸಲು ಮುಂದಾದರೂ ಕೂಡ ಒಪ್ಪದ ಐಶ್ವರ್ಯ, ಮದುವೆಯನ್ನು ನಿಲ್ಲಿಸಿದ್ದಾಳೆ.

ಈ ವೇಳೆ ಸಂಬಂಧಿಕರು ಐಶ್ವರ್ಯಳನ್ನು ಮನವೊಲಿಸಲು ಪ್ರಯತ್ನಿಸಿದ್ದು, ಎಷ್ಟೇ ಹರಸಾಹಸ ಪಟ್ಟರೂ ಬಗ್ಗದ ಐಶ್ವರ್ಯ ಅವರು, ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿದ್ದಾರೆ. ಬಳಿಕ ಯುವತಿ ನಡೆಗೆ ಯುವಕನ ಸಂಬಂಧಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾಗ್ವಾದ ಉಂಟಾಗಿ ಕೊನೆಗೆ ಅಂತಿಮವಾಗಿ ಮದುವೆಯೇ ರದ್ದುಗೊಂಡಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.