ಅಪ್ಪು ನೆನಪಲ್ಲಿ ಮತ್ತೆ ಕಣ್ಣೀರಿಟ್ಟ ಶಿವಣ್ಣ, ಹೃದಯ ಬಾರ ಆಗುತ್ತಿದೆ ಎಂದ ಭಜರಂಗಿ

ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್, ಕರುನಾಡ ಚಕ್ರವರ್ತಿ.. ಹೀಗೆ ನಾನಾ ಹೆಸರುಗಳಿಂದ ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ಶಿವರಾಜ್‌ಕುಮಾರ್‌ಗಿಂದು 62ನೇ ಬರ್ತ್‌ಡೇ ಸಂಭ್ರಮ. ಕಳೆದ ನಾಲ್ಕು ವರ್ಷಗಳಿಂದ ಬರ್ತ್‌ಡೇ ಸಂಭ್ರಮದಿಂದ ದೂರವೇ ಉಳಿದಿದ್ದ ಈ ನಟ, ಈ ವರ್ಷ ಅಭಿಮಾನಿಗಳ ಜತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.
ಅಚ್ಚರಿ ವಿಚಾರ ಏನೆಂದರೆ ಮಧ್ಯರಾತ್ರಿಯಿಂದಲೇ ಈ ಸಡಗರ ಶುರುವಾಗಿದೆ. ಬೆಂಗಳೂರಿನ ನಾಗವಾರದ ಮನೆ ಮುಂದೆ ಜಮಾಯಿಸಿದ ಅಭಿಮಾನಿಗಳು ನೆಚ್ಚಿನ ನಟನ ಬರ್ತ್‌ಡೇ ಮಾಡಿದ್ದಾರೆ. ನಟನೆ, ಡಾನ್ಸ್ ಮೂಲಕವೇ ನಾಡಿನ ಪ್ರತಿ ಮನೆಮನಕ್ಕೂ ಶಿವರಾಜ್‌ಕುಮಾರ್ ಚಿರಪರಿಚಿತ. ಡಾ. ರಾಜ್ ಅವರಂತೆ ಭಿನ್ನ ವಿಭಿನ್ನ ಸಿನಿಮಾಗಳ ಮೂಲಕವೇ ಸ್ಯಾಂಡಲ್‌ವುಡ್ ಸಿನಿಮಾ ಇತಿಹಾಸದಲ್ಲಿ ಅವರ ಚಿತ್ರಗಳು ದಾಖಲಾಗಿವೆ.
ಈವರೆಗೂ 125ಕ್ಕೂ ಅಧಿಕ ಸಿನಿಮಾಗಳು ಇವರ ಬತ್ತಳಿಕೆಯಿಂದ ಹೊರಬಂದಿವೆ. ವಯಸ್ಸು 62 ಆದರೂ ಇಂದಿಗೂ 27ರ ಯುವಕನಂತೆ ಚಿತ್ರರಂಗದಲ್ಲಿ ಆಕ್ಟಿವ್ ಆಗಿದ್ದಾರೆ ಶಿವಣ್ಣ. ಬರೋಬ್ಬರಿ 37 ವರ್ಷವನ್ನು ಚಿತ್ರೋದ್ಯಮದಲ್ಲಿ ಸವೆಸಿರುವ ಈ ನಟ, ಇಂದಿಗೂ ಸ್ಯಾಂಡಲ್‌ವುಡ್‌ನ ಬೇಡಿಕೆಯ ನಟ. ಕಳೆದ ನಾಲ್ಕು ವರ್ಷದಿಂದ ಬರ್ತ್‌ಡೇಯಿಂದ ದೂರವೇ ಉಳಿದಿದ್ದ ನಟ ಶಿವರಾಜ್‌ಕುಮಾರ್ ಈ ಸಲ ಅಭಿಮಾನಿಗಳ ಜತೆಗೆ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡುತ್ತಿದ್ದಾರೆ.
ರಾತ್ರಿಯಿಂದಲೇ ಶ್ರೀಮುತ್ತು ನಿವಾಸದ ಮುಂದೆ ದೊಡ್ಮನೆ ಅಭಿಮಾನಿಗಳ ಹಬ್ಬ ನಡೆದಿದೆ. ಕುಟುಂಬದ ಜತೆ ಮೊದಲು ಕೇಕ್ ಕತ್ತರಿಸಿ ಬರ್ತ್‌ಡೇ ಆಚರಿಸಿಕೊಂಡು, ಅದಾದ ಬಳಿಕ ಮನೆ ಬಳಿ ನೆರೆದಿದ್ದ ಫ್ಯಾನ್ಸ್ ಜತೆ ಕಾಲ ಕಳೆದಿದ್ದಾರೆ ಶಿವಣ್ಣ. ಕೋವಿಡ್ ಮತ್ತು ಪುನೀತ್ ನಿಧನದ ಹಿನ್ನೆಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಶಿವರಾಜ್‌ಕುಮಾರ್, ಅಭಿಮಾನಿಗಳ ಜತೆ ಬರ್ತ್‌ಡೇ ಆಚರಿಸಿಕೊಂಡಿಲ್ಲ. ಈ ಬಾರಿ ಫ್ಯಾನ್ಸ್ ಸಮ್ಮುಖದಲ್ಲಿಯೇ ಕೇಕ್ ಕತ್ತರಿಸಿದ್ದಾರೆ.
ಎಂ.ಜಿ. ಶ್ರೀನಿವಾಸ್ ನಿರ್ದೇಶನದ ಘೋಸ್ಟ್ ಸಿನಿಮಾ ಹಲವು ಕಾರಣಕ್ಕೆ ಕುತೂಹಲ ಸೃಷ್ಟಿಸಿದೆ. ಶಿವಣ್ಣ ಕಾಣಿಸಿದ ರೀತಿ, ಹೊಸ ತಂತ್ರಜ್ಞಾನ ಬಳಕೆ ಹೀಗೆ ಹತ್ತು ಹಲವು ವಿಚಾರಕ್ಕೆ ಈ ಚಿತ್ರ ನಿರೀಕ್ಷೆ ಮೂಡಿಸಿದೆ. ಇದೀಗ ಇದೇ ಚಿತ್ರತಂಡ ಶಿವರಾಜ್‌ಕುಮಾರ್ ಬರ್ತ್‌ಡೇ ಪ್ರಯುಕ್ತ ಬಿಗ್ ಡ್ಯಾಡಿ ಹೆಸರಿನ ಹಾಡೊಂದನ್ನು ಬಿಡುಗಡೆ ಮಾಡುತ್ತಿದೆ. ಬೆಂಗಳೂರಿನ ಗಾಂಧಿನಗರದಲ್ಲಿನ ಸಂತೋಷ್ ಚಿತ್ರಮಂದಿರದಲ್ಲಿ ಮಧ್ಯಾಹ್ನ ಹಾಡು ಬಿಡುಗಡೆ ಆಗಿದೆ.
ಇನ್ನು ಸಿನಿಮಾ ಸ್ಟಾರ್‌ಗಳ ಬರ್ತ್‌ಡೇ ಎಂದರೆ ಅಲ್ಲಿ ಹಲವು ವಿಶೇಷತೆಗಳು ಇದ್ದೇ ಇರುತ್ತವೆ.
ಅಭಿಮಾನಿಗಳಿಗೂ ಸಾಕಷ್ಟು ಸರ್ಪ್ರೈಸ್ ಉಡುಗೊರೆಗಳು ಕಾದಿರುತ್ತವೆ. ಈ ಸಲವೂ ಶಿವಣ್ಣನ ಬರ್ತ್‌ಡೇಗೆ ಘೋಸ್ಟ್ ಚಿತ್ರದಿಂದ ಬಿಗ್ ಡ್ಯಾಡಿ ಹಾಡು ಬರುತ್ತಿದ್ದರೆ, ಇನ್ನುಳಿದ ಸಿನಿಮಾಗಳಿಂದ ಬರ್ತ್‌ಡೇ ಪೋಸ್ಟರ್‌ಗಳು ರಿಲೀಸ್ ಆಗಲಿವೆ. ವಿಶೇಷ ಏನೆಂದರೆ ಈ ಸಲ ತಮಿಳಿನ ಎರಡು ಬಿಗ್ ಸಿನಿಮಾಗಳಲ್ಲಿಯೂ ಶಿವರಾಜ್‌ಕುಮಾರ್ ನಟಿಸಿದ್ದಾರೆ.
ಜೈಲರ್ ಮತ್ತು ಕ್ಯಾಪ್ಟನ್ ಮಿಲ್ಲರ್ ಚಿತ್ರಗಳಿಂದಲೂ ಹೊಸ ಪೋಸ್ಟರ್ ದರ್ಶನವಾಗಲಿದೆ.ಇನ್ನು ಈ ಕುರಿತಾಗಿ ಮಾತನಾಡಿದ ಅವರು ವಯಸ್ತಾಯ್ತು ಎಂದು ಕಿರುನಗೆ ಬೀರಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.