ನಿಮ್ಮ ಮುದ್ದಾದ ಮಗುವಿನ ಕೈಯಲ್ಲಿ ಫೋನ್ ಚಾರ್ಜರ್ ಕೊಡುವ ಮುನ್ನ ಜಾಗ್ರತೆಯಿಂದಿರಿ

 | 
Nx

ಮೊಬೈಲ್ ಚಾರ್ಜರ್ ಅನ್ನು ಎಲ್ಲೆಂದರಲ್ಲಿ ಹಾಕಿಡುವ ಅಭ್ಯಾಸ ನಿಮಗಿದೆಯೇ. ಇಲ್ಲ ಚಾರ್ಜರ್ ಅನ್ನು ಆಫ್ ಮಾಡದಿರುವ ದುರಭ್ಯಾಸ ನಿಮಗಿದ್ದರೆ ಚಾರ್ಜರ್ ಇಂದಾಗಿ ಮಗುವೊಂದು ಪ್ರಾಣಬಿಟ್ಟ ಘಟನೆಯನ್ನು ನೀವು ತಿಳಿದುಕೊಳ್ಳಲೇ ಬೇಕು. ಹೌದು ಸಂತೋಷ್ ಹಾಗೂ ಸಂಜನಾ ದಂಪತಿಗೆ ಇಬ್ಬರು ಮಕ್ಕಳಿದ್ದು, ಇಂದು ಮೊದಲನೆ ಮಗಳ ಹುಟ್ಟು ಹಬ್ಬವಿತ್ತು.

ತಂದೆ ಹೆಸ್ಕಾಂನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದು, ಸಂಜೆ ದೊಡ್ಡ ಮಗಳ ಬರ್ತ್ ಡೇ ಆಚರಿಸಲು ಬೇಗ ವಾಪಸ್ಸು ಬರಬೇಕೆಂದು ಬೆಳಿಗ್ಗೆ ತುಸು ಬೇಗ ಕೆಲಸಕ್ಕೆ ತೆರಳಿದ್ದರು. ಹೀಗಾಗಿ ತಾಯಿ ಸಣ್ಣ ಮಗುವನ್ನ ರೂಮಿನಲ್ಲಿ ಬಿಟ್ಟು ಕೆಲಸ ಮಾಡಿಕೊಳ್ಳುತ್ತಿದ್ದರು.‌ ಇತ್ತ ದೊಡ್ಡ ಮಗಳು ಕೂಡ ಶಾಲೆಗೆ ತೆರಳಲೆಂದು ರೆಡಿಯಾಗಿ ಹೊರಡುವ ವೇಳೆಗೆ ತಾಯಿಗೆ ಚಿಕ್ಕ ಮಗು ಅಸ್ವಸ್ಥಗೊಂಡಿರುವುದು ತಿಳಿದು ಕಿರುಚಿಕೊಂಡಿದ್ದು, ದೊಡ್ಡ ಮಗು ಕೂಡ ಶಾಲೆಗೆ ಹೋಗದೆ ಮನೆಗೆ ಓಡಿಬಂದು ನೋಡಿದಾಗ ತಂಗಿ ಮಾತನಾಡುತ್ತಿರಲಿಲ್ಲ.

ಪೋಷಕರು ಮನೆಯಲ್ಲಿ ಮೊಬೈಲ್​ ಚಾರ್ಜ್​​ ಮಾಡಿಕೊಂಡು ಬಟನ್​ ಆಫ್ ಮಾಡದೆ ಹಾಗೇ ಬಿಟ್ಟಿದ್ದಾರೆ.ಆಟ ಆಡಿಕೊಂಡಿದ್ದ ಮಗು ಚಾರ್ಜರ್​ನ ವೈರ್​ ಅನ್ನು ಬಾಯಲ್ಲಿ ಇಟ್ಟುಕೊಂಡಿದೆ. ಇದರಿಂದ ತಕ್ಷಣ ಕರೆಂಟ್​ ಶಾಕ್​ ತಗುಲಿದ್ದು ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದೆ.ಸದ್ಯ ಮಗು ಕಳೆದುಕೊಂಡಿರುವ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. 
ಆದರೆ ಘಟನೆಯಲ್ಲಿ ಮಗುವಿನ ಪಾಲಕರ ನಿರ್ಲಕ್ಷ್ಯವೇ ಎದ್ದು ತೋರುತ್ತಿದೆ.

ಮಗು ಒಂದನ್ನೇ ಆಟವಾಡಲು ಬಿಟ್ಟು, ಅದೇನು ಮಾಡುತ್ತಿದೆಯೆಂದೂ ನೋಡದಿರುವುದು ಈ ಅಚಾತುರ್ಯಕ್ಕೆ ಕಾರಣವಾಗಿದೆ ಎನ್ನಲಾಗಿದೆ.ಒಟ್ಟಿನಲ್ಲಿ ಒಂದು ಚಿಕ್ಕ ನಿರ್ಲಕ್ಷ್ಯ ಮುದ್ದಾದ ಮಗುವಿನ ಪ್ರಾಣವನ್ನೇ ಬಲಿಪಡೆದಿದ್ದು, ಈ ಘಟನೆ ಮಕ್ಕಳ ಕುರಿತು ನಿರ್ಲಕ್ಷ್ಯ ವಹಿಸುವ ಎಲ್ಲಾ ಪಾಲಕರಿಗೂ ಪಾಠವೇ ಸರಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.