ಮದುವೆಗೆ ಮೊದಲು ನನ್ನ ಮೊಮ್ಮಗಳು ಗ ಭಿ೯ಣಿ ಆದರೆ ಖುಷಿ; ಜಯಾ ಬಚ್ಚನ್

 | 
Hi
 ಒಮ್ಮೊಮ್ಮೆ ಗೊತ್ತಿದ್ದೊ ಗೊತ್ತಿಲ್ಲದೆಯೋ ಹೇಳಿದ ಮಾತು ಹಲವರ ಕೆಂಗಣ್ಣಿಗೆ ಗುರಿಯಾಗಿಸುವಂತೆ ಮಾಡಿದೆ.ಬಾಲಿವುಡ್‌ನ ಈ ಹಿರಿಯ ನಟಿ  ತನ್ನ ಮೊಮ್ಮಗಳೇನಾದರೂ ಮದುವೆಗೆ ಮೊದಲು ಗರ್ಭಿಣಿಯಾದರೆ ನನಗೇನೂ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ. ಕೆಲ ವರ್ಷಗಳ ಹಿಂದೆ ಅವರು ನೀಡಿದ ಹೇಳಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 
ಮದುವೆಯಾಗುವ ಮೊದಲು ಮನೆಯ ಮಕ್ಕಳು ಗರ್ಭಿಣಿಯಾಗುವಂತಿಲ್ಲ, ಅಪ್ಪಿತಪ್ಪಿ ಹೀಗೆಲ್ಲಾದರು ಆದರೂ ಇದನ್ನು ನಮ್ಮ ಸಮಾಜ ಅದನ್ನು ಸ್ವೀಕರಿಸುವುದಿಲ್ಲ, ಆಕೆ ದಾರಿ ತಪ್ಪಿದಳು ಎಂದು ತುಂಬಾ ನಿಕೃಷ್ಟವಾಗಿ ಆ ಹೆಣ್ಣು ಮಗಳನ್ನು ನಮ್ಮ ಸಮಾಜ ನೋಡುತ್ತದೆ. ಜನ ಕುಹಕವಾಡುತ್ತಾರೆ. ದೂಷಿಸಿ ನಿಂದಿಸಿ ತಲೆ ಎತ್ತಿ ಬದುಕಲಾಗದಂತೆ ಮಾಡುತ್ತದೆ. ಇದೇ ಕಾರಣಕ್ಕೆ ಮದುವೆಯಾಗುವವರೆಗೂ ಹೆಣ್ಣು ಮಕ್ಕಳು ದಾರಿ ತಪ್ಪದಂತೆ, ಅವರ ಮೇಲೆ ಬೇರೆಯವರು ಕಣ್ಣು ಹಾಕದಂತೆ ಒಂದು ಕಣ್ಣಿಟ್ಟು ಕಾಯುತ್ತಾರೆ ಮನೆಯ ಹಿರಿಯರು. 
ಆದರೆ ಬಾಲಿವುಡ್‌ನ ಈ ಹಿರಿಯ ನಟಿ  ತನ್ನ ಮೊಮ್ಮಗಳೇನಾದರೂ ಮದುವೆಗೆ ಮೊದಲು ಗರ್ಭಿಣಿಯಾದರೆ ನನಗೇನೂ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ. ಕೆಲ ವರ್ಷಗಳ ಹಿಂದೆ ಅವರು ನೀಡಿದ ಹೇಳಿಕೆ ಇದಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜೊತೆಗೆ ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗುತ್ತಿದೆ.ಅಂದಹಾಗೆ ಈ ರೀತಿ ಹೇಳಿಕೆ ನೀಡಿದ್ದು, ಬಾಲಿವುಡ್‌ನ ಹಿರಿಯ ನಟಿ, ಅಮಿತಾಭ್ ಬಚ್ಚನ್ ಅವರ ಪತ್ನಿ ಜಯಾ ಬಚ್ಚನ್ ಅವರು, ತಮ್ಮ ಮೊಮ್ಮಗಳು ಅಂದರೆ ಮಗಳು ಶ್ವೇತಾ ಬಚ್ಚನ್ ಪುತ್ರಿ ನವ್ಯಾ ನವೇಲಿ, ಒಂದು ವೇಳೆ ಮದುವೆಗೂ ಮೊದಲೇ ಗರ್ಭಿಣಿಯಾದರೆ ಅದರಿಂದ ನನಗೇನು ಸಮಸ್ಯೆ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.
 ತನ್ನ ಮೊಮ್ಮಗಳು ನವ್ಯಾ ನವೇಲಿ ನಡೆಸಿಕೊಡುತ್ತಿದ್ದ, ವಾಟ್‌ ಹೆಲ್ ನವ್ಯಾ ಎಂಬ ಪಾಡ್‌ಕಾಸ್ಟ್‌ನಲ್ಲಿ  ಜಯಾ ಬಚ್ಚನ್ ಈ ಹೇಳಿಕೆ ನೀಡಿದ್ದಾರೆ. ಈ ಪಾಡ್‌ಕಾಸ್ಟ್‌ನಲ್ಲಿ ನವ್ಯಾ ನವೇಲಿ ನಂದಾ ತನ್ನ ಅಮ್ಮ ಶ್ವೇತಾ ಬಚ್ಚನ್ ಹಾಗೂ ಅಜ್ಜಿ ಜಯಾ ಬಚ್ಚನ್ ಅವರನ್ನು ಜೊತೆಗೆ ಕೂರಿಸಿ ಮಾತನಾಡಿಸಿದ್ದರು.ಇದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಹುಟ್ಟು ಹಾಕಿದೆ. ಆದರೆ ಬಾಲಿವುಡ್ ಸೆಲೆಬ್ರಿಗಳ ಜೀವನದಲ್ಲಿ ಇದೆಲ್ಲಾ ಸಾಮಾನ್ಯ ವಿಚಾರವಾಗಿದೆ. ಏಕೆಂದರೆ ಅನೇಕ ನಟಿಯರು ಮದುವೆಗೆ ಮೊದಲೇ ಗರ್ಭಿಣಿಯಾಗಿ ಬಳಿಕ ಮದುವೆಯಾಗಿದ್ದಾರೆ. ಮದುವೆಗೂ ಮೊದಲು ಗರ್ಭಿಣಿಯಾಗಿ ನಂತರ ಮದುವೆಯಾದವ ದೊಡ್ಡ ಲಿಸ್ಟ್ ಇದೆ. 
ದಿಯಾ ಮಿರ್ಜಾ, ನೇಹಾ ಧೂಪಿಯಾ, ಕೊಂಕಣ್ ಸೇನ್ ಶರ್ಮಾ, ನತಾಶಾ ಸ್ಟಾಂಕೋವಿಕ್, ಇಲಿಯಾನಾ ಡೀ ಕ್ರೂಸ್, ಕಲ್ಕಿ ಕೊಚ್ಚಿನ್ , ಆಲಿಯಾ ಭಟ್, ಶ್ರೀದೇವಿ, ಇವರೆಲ್ಲರೂ ಮದುವೆಗೂ ಮೊದಲು ಗರ್ಭಿಣಿಆಯಾಗಿ ನಂತರ ಮದುವೆಯಾದವರಾಗಿದ್ದಾರೆ. ಬಾಲಿವುಡ್ ಮಂದಿಗೆ ಇದು ಸರಿ ಕಾಣಬಹುದೇನೋ ಆದರೆ ಇದು ಸಹಜ ಎಂದು ಒಪ್ಪಿಕೊಳ್ಳುವಷ್ಟು ನಮ್ಮ ಸಮಾಜ ಸಾಮಾನ್ಯವಾಗಿಲ್ಲ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.