'ಸೇತುವೆ ಬಿರುಕು ಬಿಡುತ್ತೆ ಹುಷಾರು' ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ ಯುವತಿಗೆ ನೆಟ್ಟಿಗರ ಕ್ಲಾಸ್

 | 
G i
 ಮೊಬೈಲ್ ಜಮಾನ ಇದು. ಹೌದು ಕೆಲವರು ರೀಲ್ಸ್‌ಗಾಗಿ ಏನು ಬೇಕಾದ್ರೂ ಮಾಡ್ತಾರೆ, ಕುಣಿಯುವುದೇನು ಹೆಣದಂತೆ ರಸ್ತೆಯಲ್ಲೇ ಮಲಗ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಮಹಿಳೆಯೊಬ್ಬರು ಹೆದ್ದಾರಿಯಲ್ಲಿ ಕಿವಿಗಡಚಿಕ್ಕುವ ಸಂಗೀತಕ್ಕೆ ಬಿಂದಾಸ್ ಆಗಿ ಡಾನ್ಸ್ ಮಾಡಿದ್ದು, ಆಕೆಯ ವೀಡಿಯೋ ನೋಡಿದ ಜನ ಸೇತುವೆ ಬಿರುಕು ಬಿಡೋದು ಪಕ್ಕಾ ಎಂದಿದ್ದಾರೆ. 
ಹಸಿರು ಸೀರೆಯುಟ್ಟ ಮಹಿಳೆಯೊಬ್ಬರು ಹೈವೇಯಲ್ಲಿ ಹಾಡೊಂದಕ್ಕೆ ಬಿಂದಾಸ್ ಆಗಿ ಡಾನ್ಸ್ ಮಾಡುತ್ತಿದ್ದರೆ, ಆಕೆಯ ಪಕ್ಕದಲ್ಲೇ ಯುವಕನೋರ್ವ ನಿಂತಿದ್ದಾನೆ. ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಒಬ್ಬರು ಟ್ರೋಲ್ ಮಾಡಿದ್ದಾರೆ. @Nishantjournali ಎಂಬುವವರು ಟ್ವಿಟ್ಟರ್‌ನಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ರೀಲ್ಸ್‌ ಮಾಡುವ ಭರದಲ್ಲಿ ಹೈವೇಯೇ ನಡುಗುತ್ತಿದೆ. ಹಿಂದೆ ಒಬ್ಬ ಬಾಡಿಗಾರ್ಡ್ ನಿಂತಿದ್ದಾನೆ ಎಂದು ಬರೆದಿದ್ದಾರೆ. 
ಒಬ್ಬಿಬ್ಬರಲ್ಲ 68 ಸಾವಿರಕ್ಕೂ ಹೆಚ್ಚು ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ಅಂದಹಾಗೆ ಈಕೆ ಬಾಲಿವುಡ್ ಸಿನಿಮಾ 'ಶಿಶೇ ಕಿ ಉಮರ್‌' ಹಾಡಿಗೆ ಕಿವಿಗಡಚಿಕ್ಕುವ ಡಿಜೆ ಸದ್ದಲ್ಲಿ ಕುಣಿದಿದ್ದಾಳೆ. ಈ ಆಕೆಯ ಡಾನ್ಸ್ ಮೂವ್‌ ಚೆನ್ನಾಗಿಯೇ ಇದ್ದರೂ ಆಕೆಯ ರಿಯಾಕ್ಷನ್ ನಗು ತರಿಸುತ್ತಿದ್ದು, ಅನೇಕರು ಹಾಸ್ಯಮಯವಾಗಿ ಕಾಮೆಂಟ್ ಮಾಡಿದ್ದಾರೆ, ಒಬ್ಬರಂತು ಸೇತುವೆ ಬಿರುಕು ಬಿಡಲಿದೆ ಎಂದು ಕಾಮೆಂಟ್‌ ಕೂಡ ಮಾಡಿದ್ದಾರೆ. 
ಟ್ರಕ್‌ನಲ್ಲಿ ಮ್ಯೂಸಿಕ್ ಹಾಕಲಾಗಿದೆ ಎಂದು ವರದಿಯಾಗಿದ್ದು, ಮಹಿಳೆ ಬಿಂದಾಸ್ ಡಾನ್ಸ್‌ನಲ್ಲಿ ಮಗ್ನನಾಗಿದ್ದಾರೆ. ಅತ್ತ ಆಕೆಯ ಹಿಂದೆ ನಿಂತಿರುವ ಯುವಕ ಏನಾಗುವುದೋ ಎಂಬ ಆತಂಕದಲ್ಲಿರುವಂತೆ ಕಾಣುತ್ತಿದೆ. ಯಾಕೆ ಇವರನ್ನು ಬ್ರಿಡ್ಜ್‌ನ ಕೆಳಗೆ ಎಸೆಯಬಾರದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇವರು ಜೈಲಿನಲ್ಲಿ ಡಾನ್ಸ್‌ ಮಾಡುವಂತೆ ಮಾಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ. 
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.