'Bha and bhat' ಯೂಟ್ಯೂಬ್ ಚಾನಲ್ ಸುದರ್ಶನ್ ಭಟ್ ಅವರಿಗೆ ಮದುವೆ ಫಿಕ್ಸ್; ಇವರ ವಯಸ್ಸು ಎಷ್ಟು ಗೊ ತ್ತಾ
Aug 30, 2024, 13:32 IST
|

ಭಟ್ ಎನ್ ಭಟ್ ಯುಟ್ಯೂಬ್ ಚಾನೆಲ್ ಅಂದಾಗ ಕಣ್ಣ ಮುಂದೆ ಬರೋದು ಲುಂಗಿಯುಟ್ಟು, ತಲೆಗೆ ಮುಂಡಾಸ ಕಟ್ಟಿ, ಅಪ್ಪಟ ಕನ್ನಡದಲ್ಲಿ ಮಾತನಾಡುವ ಸುದರ್ಶನ್ ಭಟ್ . ದೇಶ ಮಾತ್ರವಲ್ಲ ವಿದೇಶದಲ್ಲೂ ಪ್ರಸಿದ್ಧಿ ಪಡೆದಿರುವ ಅಡುಗೆ ಚಾನೆಲ್ ಗಳಲ್ಲಿ ಭಟ್ ಎನ್ ಭಟ್ ಚಾನೆಲ್ ಸೇರಿದೆ. ದಕ್ಷಿಣ ಭಾರತದ ಪ್ರಸಿದ್ಧ ಅಡುಗೆಗಳೆಲ್ಲ ನಿಮಗೆ ಈ ಯುಟ್ಯೂಬ್ ಚಾನೆಲ್ ನಲ್ಲಿ ಲಭ್ಯವಿದೆ.
ಸುದರ್ಶನ್ ಭಟ್ ಅವರ ಈ ಯುಟ್ಯೂಬ್ ಚಾನೆಲ್ ನೋಡುವ ಪ್ರತಿಯೊಬ್ಬ ವೀಕ್ಷಕರು ಈಗ ಖುಷಿಯಾಗಿದ್ದಾರೆ. ಸುದರ್ಶನ್ ಭಟ್ ಹೊಸ ಜೀವನಕ್ಕೆ ಕಾಲಿಡ್ತಿದ್ದಾರೆ. ಸುದರ್ಶನ್ ಭಟ್ ಹೊಸ ಜೀವನಕ್ಕೆ ಕಾಲಿಡ್ತಿದ್ದಾರೆ. ಅವರ ಎಂಗೇಜ್ಮೆಂಟ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಅವರು ಎಂಗೇಜ್ಮೆಂಟ್ ಫೋಟೋ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಜನರು ಸುದರ್ಶನ್ ಭಟ್ ಬದಲು ಅವರನ್ನು ಕೈ ಹಿಡಿಯಲಿರುವ ಹುಡುಗಿ ಅದೃಷ್ಟ ಮಾಡಿದ್ದಾರೆ ಎನ್ನುತ್ತಿದ್ದಾರೆ.
ಸುದರ್ಶನ್ ಭಟ್ ಕೈ ಹಿಡಿಯಲಿರುವ ಯುವತಿ ಹೆಸರು ಕೃತಿ . ಆಗಸ್ಟ್ 23ರಂದು ಅವರ ನಿಶ್ಚಿತಾರ್ಥ ನಡೆದಿದೆ. ಶೀಘ್ರವೇ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಬೆಳಂದೂರಿನ ಕೃತಿ, ಖಾಸಗಿ ಶಾಲೆ ಶಿಕ್ಷಕಿಯಾಗಿ ಕೆಲಸ ಮಾಡ್ತಿದ್ದಾರೆ. ಅತ್ಯುತ್ತಮ ವ್ಯಕ್ತಿಯೊಂದಿಗೆ ಜೀವನದ ಮುಂದಿನ ಪಯಣ ಶುರು ಮಾಡುತ್ತಿದ್ದೇನೆ.
ತುಂಬಾ ಪ್ರೀತಿ, ಉತ್ಸುಕತೆ ಇದೆ ಎಂದು ಕೃತಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೀರ್ಷಿಕೆ ಹಾಕಿ ಎರಡು ಫೋಟೋ ಹಂಚಿಕೊಂಡಿದ್ದಾರೆ. ಅದನ್ನು ಸುದರ್ಶನ್ ಭಟ್ ತಮ್ಮ ಇನ್ಸ್ಟಾಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಸುದರ್ಶನ್ ಭಟ್ ರಿಂಗ್ ಹಿಡಿದು ಕೃತಿ ಜೊತೆ ನಿಂತಿದ್ರೆ ಇನ್ನೊಂದರಲ್ಲಿ ಕೃತಿಗೆ ಏನೋ ತೋರಿಸುತ್ತಿರುವ ಫೋಟೋವನ್ನು ಹಂಚಿಕೊಳ್ಳಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023