ಸೀರಿಯಲ್ ನಿಂದ ಭಾಗ್ಯ ಔಟ್; ಭಾ ಗ್ಯ ಜಾಗಕ್ಕೆ ಹೊಸ ಎಂಟ್ರಿ
ದಿನದಿಂದ ದಿನಕ್ಕೆ ಹೊಸ ತಿರುವನ್ನು ಪಡೆಯುತ್ತಿರುವ ಪ್ರೇಕ್ಷಕರ ಮೆಚ್ಚಿನ ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಭಾಗ್ಯಾ ಮಾಡಿಕೊಟ್ಟ ಒತ್ತು ಶ್ಯಾವಿಗೆ, ಮಾವಿನ ರಸಾಯನ ಸವಿದ ಪತ್ರಕರ್ತ ಅದನ್ನು ಸವಿಯುತ್ತಿದ್ದಂತೆ ರುಚಿಗೆ ಮನಸೋತು ಭಾಗ್ಯಾ ಅಡುಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆತ ಎಲ್ಲಿ ಹೋದರೂ, ಏನೇ ಫುಡ್ ತಿಂದರೂ ಏನೂ ಪ್ರತಿಕ್ರಿಯಿಸುವುದಿಲ್ಲ, ರಿವ್ಯೂ ಬರೆದ ನಂತರವಷ್ಟೇ ಎಲ್ಲರಿಗೂ ವಿಚಾರ ಗೊತ್ತಾಗುವುದು ಎಂದು ಪತ್ರಕರ್ತನ ಬಗ್ಗೆ ಕೇಳಿದ್ದ ಹೋಟೆಲ್ ಮ್ಯಾನೇಜರ್, ಇದೀಗ ಆತ ಭಾಗ್ಯಾ ಬಗ್ಗೆ ಹೊಗಳುವುದುನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ನಾನು ಮಾಡಿದ ಅಡುಗೆ ಬಗ್ಗೆ ಪತ್ರಕರ್ತ ಅಷ್ಟು ಹೊಗಳಿದ್ದಕ್ಕೆ ಭಾಗ್ಯಾ ಕೂಡಾ ಸಂತೋಷ ವ್ಯಕ್ತಪಡಿಸುತ್ತಾಳೆ. ನಾನು ಇನ್ನೊಮ್ಮೆ ಈ ಹೋಟೆಲ್ ಕಡೆ ಬಂದಾಗ ಮತ್ತೆ ಒತ್ತು ಶ್ಯಾವಿಗೆ ಹಾಗೂ ಮಾವಿನ ರಸಾಯನ ಮಾಡಿಕೊಡುವುದನ್ನು ಮರೆಯಬೇಡಿ ಎಂದು ಎಲ್ಲರಿಗೂ ಬೈ ಹೇಳಿ ಅಲ್ಲಿಂದ ಹೊರಡುತ್ತಾನೆ. ಹೊರಡುವ ಮುನ್ನ ಮಾನೇಜರ್ ಕರೆದು ಭಾಗ್ಯಾ ನಿಮ್ಮ ಹೋಟೆಲ್‌ನ ಆಸ್ತಿ, ಒಮ್ಮೆ ಯೋಚನೆ ಮಾಡಿ ಎಂದು ಸಲಹೆ ನೀಡುತ್ತಾನೆ. ಆ ಮಾತು ಮ್ಯಾನೇಜರ್‌ಗೆ ಕೂಡಾ ಸರಿ ಎನಿಸುತ್ತದೆ.
ಹೋಟೆಲ್ ಸೂಪರ್‌ವೈಸರ್ ಭಾಗ್ಯಾಗೆ ಥ್ಯಾಂಕ್ಸ್ ಹೇಳಿ, ನಿಮಗೆ ಏನು ಬೇಕೆಂದು ಹೇಳಿ ಎಂದಾಗ ಭಾಗ್ಯಾ, ದಯವಿಟ್ಟು ಈ ಹೋಟೆಲ್‌ನಲ್ಲಿ ನನಗೆ ಒಂದು ಕೆಲಸ ಕೊಡಿ, ಇಂಥದ್ದೇ ಕೆಲಸ ಆಗಬೇಕು ಅಂತೇನಿಲ್ಲ, ಕಸ ಗುಡಿಸುವುದು, ಪಾತ್ರೆ ತೊಳೆಯುವುದು ಯಾವುದಾದರೂ ಸರಿ, ನನಗೆ ಈ ಕೆಲಸ ಬಹಳ ಮುಖ್ಯ ಎಂದು ಕೈ ಮುಗಿದು ಮನವಿ ಮಾಡಿಕೊಳ್ಳುತ್ತಾಳೆ.
ಈ ಮಾತನ್ನು ಕೇಳಿಸಿಕೊಳ್ಳುವ ಮ್ಯಾನೇಜರ್, ನೀವು ನಮ್ಮ ಹೋಟೆಲ್‌ನಲ್ಲಿ ಕಸ, ಮುಸುರೆ ತೊಳೆಯಬೇಕಿಲ್ಲ, ಶೆಫ್ ಕೆಲಸ ಮಾಡಿ ಸಾಕು ಎನ್ನುತ್ತಾನೆ, ಜೊತೆಗೆ ಆಕೆಗೆ ಯೂನಿಫಾರ್ಮ್ ಕೂಡಾ ನೀಡುತ್ತಾನೆ. ಇದರಿಂದ ಭಾಗ್ಯಾಗೆ ಬಹಳ ಖುಷಿಯಾಗುತ್ತದೆ. ಇನ್ಮುಂದೆ ಎಲ್ಲರೂ ಭಾಗ್ಯಾ ಬಳಿ ಕನ್ನಡದಲ್ಲೇ ಮಾತನಾಡಬೇಕು, ಆಕೆಗೆ ಅರ್ಥವಾಗುವಂತೆ ಕನ್ನಡದಲ್ಲೇ ಆರ್ಡರ್ ನೀಡಬೇಕು ಎಂದು ಸೂಚಿಸುತ್ತಾನೆ.
ಕಷ್ಟದಲ್ಲಿ ಲಾಟರಿ ಹೊಡೆದಂತೆ ಭಾಗ್ಯಾ ತನಗೆ ಕೆಲಸ ಸಿಕ್ಕಿದ್ದಕ್ಕೆ ಸಂತೋಷ ವ್ಯಕ್ತಪಡಿಸುತ್ತಾಳೆ. ಹಿತಾ ಸೇರಿದಂತೆ ಭಾಗ್ಯಾ ಸಹೋದ್ಯೋಗಿಗಳು ಕೂಡಾ ಆಕೆಯ ಕೆಲಸಕ್ಕೆ ಮೆಚ್ಚುಗೆ ಸೂಚಿಸುತ್ತಾರೆ. ಒಟ್ಟಿನಲ್ಲಿ ಭಾಗ್ಯ ಇನ್ಮುಂದೆ ಸಖತ್ ಶೈನ್ ಆಗೋದಂತೂ ಹೌದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.