ಭಾಗ್ಯಲಕ್ಷ್ಮಿ ನಟಿಗೆ ಮೂರು ತಿಂಗಳು ಜೈ ಲು ಶಿಕ್ಷೆ; ಎತ್ತಾಕೊಂಡು ಹೋದ ಅಧಿಕಾರಿಗಳು

 | 
Us
ಅಮ್ಮನ ಪಾತ್ರಕ್ಕೆ ಜೀವ ತುಂಬುವ ಮೂಲಕವೇ ಕರುನಾಡಿನೆಲ್ಲೆಡೆ ಮನೆ ಮಾತಾದವರು ಪದ್ಮಜಾ ರಾವ್. ಮುಂಗಾರು ಮಳೆಯಿಂದ ಆಚೆ ಹತ್ತಾರು ಚಿತ್ರಗಳಲ್ಲಿ ಮನಸಿನಲ್ಲಿ ಉಳಿಯುವಂತೆ ಅಮ್ಮನ ಪಾತ್ರವನ್ನು ನಿರ್ವಹಿಸಿದ ಪದ್ಮಜಾ ರಾವ್ ಕಿರುತೆರೆಯ ಬೇಡಿಕೆಯ ನಟಿ ಕೂಡ ಹೌದು. ಇಂಥಾ ಪದ್ಮಜಾ ರಾವ್ ಈಗ ಮೂರು ತಿಂಗಳು ಜೈಲು ಶಿಕ್ಷೆಯಾಗಿದೆ.
ವಾರೆಂಟ್ ಹೊರಡಿಸಲಾದ ನಂತರ ನ್ಯಾಯಾಲಯಕ್ಕೆ ಹಾಜರಾದ ಪದ್ಮಜಾ ರಾವ್ ಜಾಮೀನು ಪಡೆದಿದ್ದರು. ನಾನು ದೂರುದಾರರಿಂದ ಯಾವುದೇ ಸಾಲ ಪಡೆದಿಲ್ಲ. ಅವರಿಗೆ ಯಾವುದೇ ಚೆಕ್ ನೀಡಿಲ್ಲ ಎಂದು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು. ತಮ್ಮ ಸಾಮಾಜಿಕ ಜಾಲತಾಣದಲ್ಲಿ ನಾನು ಮೊದಲಿನಿಂದಲೂ ಸ್ವಪ್ರಯತ್ನದಿಂದ, ಕಠಿಣ ಪರಿಶ್ರಮದಿಂದ, ಎಲ್ಲವನ್ನೂ ಎದುರಿಸಿ, ನೈತಿಕವಾಗಿ ಬೆಳೆದು ಬಂದಿರುತ್ತೇನೆ. ಇನ್ನು ಮುಂದೆಯೂ ಹೀಗೆಯೇ ಇರುತ್ತೇನೆ ಎಂದು ಬರೆದುಕೊಂಡಿದ್ದರು.
ಇನ್ನೂ ವೀರೇಂದ್ರ ಶೆಟ್ಟಿ ಅವರಿಂದನೇ ನಮಗೆ 52.70 ಲಕ್ಷ ವಂಚನೆಯಾಗಿದೆ . ಅವರ ವಿರುದ್ಧ ನಾವು ಬೆಂಗಳೂರಿನ ಜೆಪಿನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಕ್ಕೆ ತಮ್ಮ ಕಕ್ಷಿದಾರರ ವಿರುದ್ಧ ಈ ಆರೋಪ ಮಾಡಿದ್ದಾರೆ ಎಂದು ಪದ್ಮಜಾ ರಾವ್ ಅವರ ಪರ ವಕೀಲರು ವಾದಿಸಿದ್ದರು. ಪದ್ಮಜಾ ಅವರ ಮನೆಯಿಂದ ಚೆಕ್ ಕಳುವು ಮಾಡಿ ಸಹಿಯನ್ನು ಪೋರ್ಜರಿ ಮಾಡಲಾಗಿದೆ ಎಂದು ಹೇಳಿದ್ದರು. ಆದರೆ ಅದಕ್ಕೆ ಪೂರಕವಾದ ಸಾಕ್ಷಿಗಳನ್ನು ಒದಗಿಸಲು ಅವರು ವಿಫಲರಾದರು.
ಈ ಹಿನ್ನೆಲೆ ಮಂಗಳೂರಿನ 08ನೇ ಜೆಎಂಎಫ್‌ಸಿ ನ್ಯಾಯಾಲಯವು 40 ಲಕ್ಷದ 20 ಸಾವಿರ ರೂಪಾಯಿಗಳನ್ನು ಪದ್ಮಜಾ ರಾವ್ ದಂಡ ಪಾವತಿಸಬೇಕು. ಅದರಲ್ಲಿ 40 ಲಕ್ಷದ 17 ಸಾವಿರ ಹಣವನ್ನು ದೂರುದಾರರಿಗೆ ನೀಡಿ ಉಳಿದ ಮೂರು ಸಾವಿರ ಹಣವನ್ನು ಸರ್ಕಾರಕ್ಕೆ ಪಾವತಿ ಮಾಡಬೇಕು ಎಂದು ತೀರ್ಪು ನೀಡಿದೆ. ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಲಾಗಿದೆ.
ಒಟ್ನಲ್ಲಿ ಕನ್ನಡ ಚಿತ್ರರಂಗದ ಕಲಾವಿದರು ವ್ಯೆಯಕ್ತಿಕ ವಿಚಾರಗಳಿಂದ ಸದ್ಯ ಸುದ್ದಿಯಲ್ಲಿದ್ದಾರೆ. ವಿವಾದಕ್ಕೀಡಾಗುತ್ತಿದ್ದಾರೆ. ಆ ಕಡೆ ದರ್ಶನ್ ಜೈಲುಪಾಲಾಗಿದ್ದರೆ, ಈ ಕಡೆ ಪದ್ಮಜಾ ರಾವ್ ಕೂಡ ಜೈಲಿಗೆ ಹೋಗುವ ಸಂದರ್ಭ ಎದುರಾಗಿದೆ. ಉಳಿದಂತೆ ಪದ್ಮಜಾ ರಾವ್ ಸದ್ಯಕ್ಕೆ ಭಾಗ್ಯ ಲಕ್ಷ್ಮೀ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. 
ಕುಸುಮಾ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಒಂದು ವೇಳೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಪದ್ಮಜಾ ರಾವ್‌ ಜೈಲು ಪಾಲಾದರೆ ಅವರ ನಟನೆಯ ಪ್ರಾಜೆಕ್ಟ್‌ಗಳ ಕಥೆಯೇನು ಎನ್ನುವುದು ಸದ್ಯಕ್ಕೆ ಅನೇಕರಿಗೆ ಕಾಡುತ್ತಿರುವ ಪ್ರಶ್ನೆಯಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.