ಭಾಗ್ಯಲಕ್ಷ್ಮಿ ಸೀರಿಯಲ್ ನಟಿ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ, ಇಲ್ಲಿದೆ ಅದ್ಭುತ ಡ್ಯಾನ್ಸ್

 | 
ಲ

ಕನ್ನಡ ಕಿರುತೆರೆಯಲ್ಲಿ ಹೆಣ್ಮಕ್ಕಳ ಹೃದಯ ಗೆದ್ದಿರುವ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಲಕ್ಷ್ಮಿ ಪಾತ್ರದಲ್ಲಿ ಅಭಿನಯಿಸುತ್ತಿರುವ ನಟಿ ಭೂಮಿಕಾ ನೋಡಲು ಮಾತ್ರವಲ್ಲ ಮಾತು ನೃತ್ಯ ಎಲ್ಲದ್ರಲ್ಲೂ ಎತ್ತಿದ ಕೈ.
ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ದೊರೆಸಾನಿ' ಧಾರಾವಾಹಿಗೆ ಕರೆದಿದ್ದ ಆಡಿಷನ್‌ನಲ್ಲಿ ಭೂಮಿಕಾ ಚಿಕ್ಕವರು ಎನ್ನುವ ಕಾರಣಕ್ಕೆ ರಿಜೆಕ್ಟ್ ಆಗಿದ್ದರು.

ಆ ನಂತರ ಭೂಮಿಕಾ ಶಿಕ್ಷಣ, ಭರತನಾಟ್ಯದ ಕಡೆ ಗಮನ ಕೊಟ್ಟಿದ್ದರು. ಭಾಗ್ಯಲಕ್ಷ್ಮೀ ಧಾರಾವಾಹಿ ತಂಡದವರು ಭೂಮಿಕಾಗೆ ಲಕ್ಷ್ಮೀ ಪಾತ್ರಕ್ಕೆ ಆಡಿಷನ್ ಕೊಡಿ ಎಂದು ಕೇಳಿದರಂತೆ. ಆಡಿಷನ್‌ನಲ್ಲಿ ಪಾಸ್ ಆದ ಭೂಮಿಕಾ ಈಗ ವೀಕ್ಷಕರ ನೆಚ್ಚಿನ ಲಡ್ಡು ಆಗಿದ್ದಾರೆ.
ಈಗಂತೂ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ  ಲಕ್ಷ್ಮೀ-ವೈಷ್ಣವ್ ಮದುವೆ ಸಂಭ್ರಮ ನಡೆಯುತ್ತಿದೆ. 

ಇದರ ಜೊತೆ ಸೋಶಿಯಲ್ ಮೀಡಿಯಾದಲ್ಲಿ ಭೂಮಿಕಾರ ಬಾಲ್ಯದ ವಿಡಿಯೋ ಕೂಡ ವೈರಲ್ ಆಗ್ತಿದೆ.
ಆ ವಿಡಿಯೋ ಅಲ್ಲಿ  ಭೂಮಿಕಾ ರಮೇಶ್ ಅವರು ಈ ಹಿಂದೆ ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಆ ರಿಯಾಲಿಟಿ ಶೋನಲ್ಲಿ ಭೂಮಿಕಾ ಭಾಗಿಯಾಗಿದ್ದಾಗ ಅವರು 8ನೇ ತರಗತಿ ಓದುತ್ತಿದ್ದರು.

ನಾನು ಭೂಮಿಕಾ ರಮೇಶ್, 8ನೇ ತರಗತಿಯಲ್ಲಿ ಓದುತ್ತಿದ್ದೇನೆ. ನನಗೆ ಡ್ಯಾನ್ಸ್ ಅಂದರೆ ತುಂಬ ಇಷ್ಟ. ಅದರಲ್ಲಿಯೂ ಕ್ಲಾಸಿಕಲ್ ಡ್ಯಾನ್ಸ್ ಅಂದರೆ ತುಂಬ ಇಷ್ಟ ಎಂದು ಭೂಮಿಕಾ ಅವರು ಪರಿಚಯ ಮಾಡಿಕೊಡುವ ವಿಡಿಯೋ ಅದಾಗಿದೆ. ಅಷ್ಟೇ ಅಲ್ಲದೆ ಭೂಮಿಕಾ ಅವರು ಮಾಡಿದ ವೆಸ್ಟರ್ನ್, ಕ್ಲಾಸಿಕಲ್ ಡ್ಯಾನ್ಸ್‌ನ ಝಲಕ್ ಕೂಡ ಅದರಲ್ಲಿದೆ. ಪ್ರಸ್ತುತ ಆನ್‌ಲೈನ್‌ ಮೂಲಕ ಬಿಸಿಎ ಕೋರ್ಸ್‌ ಮಾಡುತ್ತಿರುವ ಭೂಮಿಕಾ ಅವರು ನಟನೆ, ಡ್ಯಾನ್ಸ್ ಅಭ್ಯಾಸವನ್ನು ಕೂಡ ಮಾಡುತ್ತಿದ್ದಾರೆ. 

ಕನ್ನಡದ ಜೊತೆಗೆ 4ನೇ ತರಗತಿಯಲ್ಲಿದ್ದಾಗಲೇ ಭೂಮಿಕಾ ಅವರು ತೆಲುಗು ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ್ದರು. ಆಮೇಲೆ ‘ಸೈ ಅಂಟೆ ಸೈ’ ಮಲ್ಟಿ ರಿಯಾಲಿಟಿ ಶೋನಲ್ಲೂ ಸ್ಪರ್ಧಿಯಾಗಿ ಭಾಗವಹಿಸಿದ್ದಒಟ್ಟಿನಲ್ಲಿ ಭೂಮಿಕಾಗೆ ಕ್ಯಾಮರಾ ಹೊಸತೇನಲ್ಲ.