ಗಂಡನಿಲ್ಲದೆ ತಾ ಯಿಯಾದ ಭಾವನ, ಏಕಾಏಕಿ ಪಬ್ಲಿಕ್ ಮುಂದೆ ಭಾವನ ಬಗ್ಗೆ ಲಾಯರ್ ಜಗದೀಶ್ ಸದ್ದು
Jul 6, 2025, 18:25 IST
|

ಇತ್ತಿಚೆಗೆ IVF ಮೂಲಕ ತಾಯಿತನ ಅನುಭವಿಸುತ್ತಿರುವ ಭಾವನ ಅವರು ಇದೀಗ ಸಾಕಷ್ಟು ಜನರ ಕುತೂಹಲಕ್ಕೆ ಕಾರಣರಾಗಿದ್ದಾರೆ. ಹೌದು, ಭಾವನ ಅವರು IVF ಮೂಲಕ ಅವಳಿ ಜವಳಿ ಮಗು ಪಡೆಯುವ ನಿರೀಕ್ಷೆಯಲ್ಲಿ ಮಾಧ್ಯಮಗಳ ಮುಂದೆ ಬಂದು ಇಂತಹ ಒಂದು ಅದ್ಭುತ ಟೆಕ್ನಾಲಜಿ ಮೂಲಕ ತಮಗೆ ಬೇಕಾದ ಮಗು ಪಡೆದುಕೊಳ್ಳಬಹುದು ಎಂಬ ವಿಚಾರವನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ. ಈ ವಿಚಾರ ಕೇಳಿದ ಸಾಕಷ್ಟು ಜನರಿಗೆ ಇದೆಂತಹ ಟೆಕ್ನಾಲಜಿ ಎಂಬ ಭ್ರಮೆಗಳು ಎದುರಾಗಿದೆ. ಆದರೆ ಇದು ವಿದೇಶಗಳಲ್ಲಿ ಹೆಚ್ಚಾಗಿ ಕಂಡುಬಂದರು ಕೂಡ ಭಾರತದಲ್ಲಿ ಇದುವರೆಗೂ ಯಾವುದೇ ಮಾಹಿತಿ ಬಹಿರಂಗವಾಗಿ ಹೊರಬರಲಿಲ್ಲ.
ಇನ್ನು ಈ ಬಗ್ಗೆ ಲಾಯರ್ ಜಗದೀಶ್ ಅವರು ಭಾವನ ಅವರ ಮೇಲೆ ಸ್ವಲ್ಪ ಗರಂ ಆಗಿ ಮಾತನಾಡಿದ್ದಾರೆ. ಇತ್ತಿಚಿನ ಗಂಡು ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ. ಅದರಲ್ಲೂ ರೈತರಿಗೆ ಹೆಣ್ಣು ಸಿಗುವುದು ತೀರಾ ಅಪರೂಪವೇ ಸರಿ. ಹೀಗಿರುವಾಗ ಇಂತಹ ಟೆಕ್ನಾಲಜಿ ಬಗ್ಗೆ ಮಾಧ್ಯಮಗಳ ಮುಂದೆ ಬಂದು ಬಹಿರಂಗವಾಗಿ ಹೇಳಿಕೊಳ್ಳುವ ಅವಶ್ಯಕತೆ ಇತ್ತ ಎಂದು ಲಾಯರ್ ಜಗದೀಶ್ ಪ್ರಶ್ನೆ ಮಾಡಿದ್ದಾರೆ. ನಿಮ್ಮ ವಯಕ್ತಿಕ ವಿಚಾರವನ್ನು ಮಾಧ್ಯಮಗಳ ಜೊತೆ ಚರ್ಚೆಗೆ ಇಡುವ ಮುನ್ನ ಸ್ಪಲ್ಪ ಅಲೋಚಿಸಿಬೇಕಿತ್ತು ಎಂದು ಜಗದೀಶ್ ಅವರು ಹೇಳಿಕೆ ಕೊಟ್ಟಿದ್ದಾರೆ.
ಇನ್ನು IVF ಅಂತಹ ಟೆಕ್ನಾಲಜಿ ಭಾರತದಲ್ಲಿ ಹೆಚ್ಚಾಗುತ್ತ ಹೋದರೆ ಮುಂದೆ ಗಂಡು ಮಕ್ಕಳಿಗೆ ಬೆಲೆ ಇಲ್ಲದಾಂತಗುತ್ತದೆ. ಪ್ರಾಕೃತಿಕವಾಗಿ ಏನು ಆಗಬೇಕೋ ಅದರಂತೆಯೇ ಆದರೆ ತುಂಬಾ ಒಳಿತು. ಅದು ಬಿಟ್ಟು ಬೇರೆ ದಾರಿ ಹಿಡಿದರೆ ಮುಂದೊಂದು ದಿನ ನಡೆಯುವ ಪ್ರಕೃತಿಯ ವಿಕೋಪಕ್ಕೆ ನಾವೆಲ್ಲರೂ ತುತ್ತಾಗಬೇಕಾಗುತ್ತದೆ.