ಬಿಗ್ ಬಾಸ್ ಮನೆಯಲ್ಲಿ ಭವ್ಯಾ ಹಾಗೂ ತ್ರಿವಿಕ್ರಮ್ ರಾತ್ರಿ ಆಟ, 3:30ಕ್ಕೆ ಸೆರೆಸಿಕ್ಕ ದೃ ಶ್ಯ
Jan 13, 2025, 16:49 IST
|

ಬಾಸ್ ಕನ್ನಡದ ಪ್ರತಿ ಸೀಸನ್ ನಲ್ಲೂ ಕನಿಷ್ಟ ಒಂದು ‘ಜೋಡಿ’ ಖಾಯಂ ಆಗಿ ಇರುತ್ತದೆ. ಈ ಸೀಸನ್ನಲ್ಲಿ ಭವ್ಯಾ ಹಾಗೂ ತ್ರಿವಿಕ್ರಮ್ ಆರಂಭದಿಂದಲೂ ಒಬ್ಬರಿಗೊಬ್ಬರ ಎಂಬಂತೆ ಅಂಟಿಕೊಂಟೇ ಇದ್ದಾರೆ. ಇದೀಗ ಈ ಇಬ್ಬರ ನಡುವೆ ಪ್ರೀತಿ-ಪ್ರೇಮ ಶುರುವಾಗಿದೆಯೇ ಎಂಬ ಅನುಮಾನ ವೀಕ್ಷಕರಿಗೆ ಶುರುವಾಗಿದೆ. ಇದಕ್ಕೆ ಕಾರಣ ಅವರು ಪರಸ್ಪರ ಗುಟ್ಟಾಗಿ ಆಡಿರುವ ಮಾತುಗಳು.
ಶನಿವಾರದ ಎಪಿಸೋಡ್ ಪ್ರಸಾರವಾದಾಗ ಸುದೀಪ್ ಆಗಮಿಸುವ ಮೊದಲು ಹಿಂದಿನ ನಡೆದ ಕೆಲವು ಘಟನೆಗಳನ್ನು ತೋರಿಸಲಾಯ್ತು. ಈ ಸಂದರ್ಭದಲ್ಲಿ ಎಲ್ಲರೂ ಮಲಗಿದ ಮೇಲೆ ತ್ರಿವಿಕ್ರಮ್ ಮತ್ತು ಭವ್ಯಾ ಅವರು ಮೂಲೆಯಲ್ಲಿ ಕೂತು ಏನೋ ವಿಷಯ ಮಾತನಾಡುತ್ತಿದ್ದರು. ಮೊದಲಿಗೆ ಅದು ಏನೆಂದು ವೀಕ್ಷಕರಿಗೆ ಗೊತ್ತಾಗಿರಲಿಲ್ಲವಾದರೂ ಅವರ ಮಾತುಕತೆ ಮುಂದುವರೆದಂತೆ ಅರ್ಥವಾಗಿದ್ದು, ಇಬ್ಬರೂ ಪ್ರೀತಿಯ ವಿಷಯ ಚರ್ಚಿಸುತ್ತಾರೆ ಎಂಬುದು.
ತ್ರಿವಿಕ್ರಮ್, ಭವ್ಯಾ ಕುರಿತು, ನೀನು ನಾನು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿಲ್ಲ’ ಎನ್ನುತ್ತಾರೆ. ಅದಕ್ಕೆ ಭವ್ಯಾ ಖುಷಿಯಿಂದ ಕೊಡುತ್ತೇನೆ, ಸ್ವಲ್ಪ ದಿನ ಕಾಯಿ ಎನ್ನುತ್ತಾರೆ. ‘ನೀನು ಆಡುತ್ತಿರುವ ರೀತಿ, ಮಾತನಾಡುತ್ತಿರುವುದು ನೋಡಿದರೆ ನೆಗೆಟಿವ್ ಉತ್ತರ ನೀಡುತ್ತೀಯ ಅನಿಸುತ್ತಿದೆ’ ಎನ್ನುತ್ತಾರೆ ತ್ರಿವಿಕ್ರಮ್. ಅದಕ್ಕೆ ಭವ್ಯಾ ನಗುತ್ತಾ, ‘ಅಯ್ಯೋ ಹಾಗೇನಿಲ್ಲ. ಸ್ವಲ್ಪ ವೇಟ್ ಮಾಡು’ ಎಂದು ನಗುತ್ತಾ ಹೇಳುತ್ತಾರೆ. ಹಾಗೆ ಮಾತು ಮುಂದುವರೆಸಿ, ‘ಸ್ವಲ್ಪ ದಿನ ಆಗಲಿ, ಹೊರಗೆ ಹೋದ ಮೇಲೆ ಹೇಳುತ್ತೀನಿ’ ಎಂದು ಭವ್ಯಾ ಹೇಳುತ್ತಾರೆ.
ತ್ರಿವಿಕ್ರಮ್ ಸಹ ಆಡಿ ಗೆದ್ದು ಆ ಮೇಲೆ ನಿನ್ನ ಬಳಿ ಆ ಬಗ್ಗೆ ಮಾತನಾಡುತ್ತೀನಿ’ ಎನ್ನುತ್ತಾರೆ. ಒಟ್ಟಾರೆ ಇಬ್ಬರೂ ಸಹ ಗುಟ್ಟಿನಲ್ಲಿ ಪ್ರೀತಿಯ ವಿಚಾರವನ್ನೇ ಮಾತನಾಡಿದ್ದಾರೆ ಎಂಬುದು ವೀಕ್ಷಕರಿಗೆ ಅರ್ಥವಾಗಿದೆ.ಅಸಲಿಗೆ ಸ್ಪರ್ಧಿಗಳ ಪೋಷಕರು ಮನೆಗೆ ಬಂದಾಗ ಭವ್ಯಾ ಹಾಗೂ ತ್ರಿವಿಕ್ರಮ್ ಇಬ್ಬರ ಮನೆಯವರೂ ಸಹ ಪರಸ್ಪರರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಹೇಳಿದ್ದರು.
ಆ ನಂತರ ವೀಕೆಂಡ್ನಲ್ಲಿ ನಡೆದ ಆಕ್ಟಿವಿಟಿಯಲ್ಲಿ ಭವ್ಯಾ ಹಾಗೂ ತ್ರಿವಿಕ್ರಮ್ ಇಬ್ಬರು ಇನ್ನು ಮುಂದೆ ತಾವು ಪರಸ್ಪರರ ಗೆಳೆತನ ಮುರಿಯುವುದಾಗಿ ಹೇಳಿದ್ದರು. ಆ ನಂತರವೂ ಸಹ ಒಬ್ಬರ ಬಗ್ಗೆ ಇನ್ನೊಬ್ಬರು ಕೆಲ ಚುಚ್ಚು ಮಾತುಗಳನ್ನು ಆಡಿಕೊಂಡಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.