ಬಂಗಲೆ ಗುಡ್ಡದಲ್ಲಿ ಬಗೆದಷ್ಟು ಬುರುಡೆ ಪತ್ತೆ, ಊರು ಗೌಡನಿಗೆ ಚಳಿಜ್ವರ ಶುರು ಎಂದ ಭೀಮಾ
| Aug 6, 2025, 10:15 IST
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ ಅನ್ನೋ ಮಾತಿದೆ.ಹೌದು ಕಣ್ರೀ..ಕೊನೆಗೂ ಧರ್ಮಸ್ಥಳ ಕೊಲೆ ರಹಸ್ಯ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ದೂರುದಾರ ಗುರುತಿಸಿದ್ದ 6ನೇ ಪಾಯಿಂಟ್‌ನಲ್ಲಿ ಎರಡು ಅಸ್ಥಿಪಂಜರಗಳು ಪತ್ತೆಯಾಗಿದೆ.
ಅದು ಕೇವಲ 3ಅಡಿ ಆಳ ಅಗೆಯುವಾಗ ದೊರೆತಿದೆ.ಇಂದು ಬೆಳಿಗ್ಗೆ 6ನೇ ಪಾಯಿಂಟ್‌ನಲ್ಲಿ 15 ಕಾರ್ಮಿಕರಿಂದ ಉತ್ಖನನ ನಡೆದಿದ್ದು, ಎರಡು ಅಸ್ಥಿಪಂಜರ ಪತ್ತೆಯಾಗಿದೆ. ದೇಹದ ಪೂರ್ತಿ ಭಾಗಗಳು ಸಿಕ್ಕಿಲ್ಲ, ತಲೆ ಬುರುಡೆ ಸೇರಿದಂತೆ ಕೆಲವು ಭಾಗಗಳು ಮಾತ್ರ ಸಿಕ್ಕಿದ್ದು, ಇನ್ನೂ ಆಳಕ್ಕೆ ತೆಗೆದು ಹುಡುಕಾಟ ನಡೆಸಲಾಗುತ್ತಿದೆ.
ಸದ್ಯ ಸಿಕ್ಕಿರುವ ಅಸ್ಥಿಪಂಜರ ಮೇಲ್ನೋಟಕ್ಕೆ ಪುರುಷನದ್ದು ಎಂದು ತಿಳಿದುಬಂದಿದೆ. ಇದನ್ನ ಎಸ್‌ಐಟಿ ಅಧಿಕಾರಿಗಳು ಎಫ್‌ಎಸ್‌ಎಲ್‌ಗೆ ಕಳುಹಿಸಲಿದ್ದಾರೆ. ಮಣಿಪಾಲ್ ಆಸ್ಪತ್ರೆಯಲ್ಲಿ ಟೆಸ್ಟಿಂಗ್ ಮಾಡುವ ಸಾಧ್ಯತೆ ಇದ್ದು, ಈಗಾಗಲೇ ಸ್ಥಳಕ್ಕೆ ಶ್ವಾನ ದಳವನ್ನು ಕೂಡ ಕರೆಯಲಾಗಿದ್ದು ಇನ್ನೂ ಇದರ ಬಳಿಕ 7 ಹಾಗೂ 8ನೇ ಪಾಯಿಂಟ್‌ನಲ್ಲಿ ಉತ್ಖನನ ಕಾರ್ಯ ನಡೆಸುವ ಸಾಧ್ಯತೆಗಳಿವೆ.
9 ಪಾಯಿಂಟ್ ನಂತರ ಮತ್ತಷ್ಟು ಮೂಳೆಗಳು ಸಿಗಲಿದೆ ಎಂದು ದೂರುದಾರ ಈಗಾಗಲೇ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಉತ್ಖನನ ಕಾರ್ಯ ಇನ್ನಷ್ಟು ಚುರುಕುಗೊಂಡಿದೆ. ಬಗೆದಷ್ಟು ಬಯಲಾಗುತ್ತಿರುವ ಧರ್ಮಸ್ಥಳದ ಬುರುಡೆ ರಹಸ್ಯ ಇನ್ಯಾವ ರೀತಿಯಲ್ಲಿ ಟರ್ನ್ ಆಗತ್ತೆ ಕಾದು ನೋಡೋಣ