ಮೊಸಳೆಯ ವೇಷ ಹಾಕಿ ಮೊಸಳೆಗೆ ಭಯ ಹುಟ್ಟಿಸಿದ ಭೂಪ

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಹಲವು ವಿಡಿಯೋಗಳು ವೈರಲ್ ಆಗುತ್ತಿವೆ. ಅದರಲ್ಲಿ ಕೆಲವು ವಿಡಿಯೋಗಳು ತಮಾಷೆಯಾಗಿರುತ್ತವೆ.. ಇನ್ನೂ ಕೆಲವು ವೀಡಿಯೊಗಳು ಆಸಕ್ತಿದಾಯಕವಾಗಿರುತ್ತವೆ. ಇನ್ನೂ ಕೆಲವು ವೀಡಿಯೊಗಳು ಅದ್ಭುತವಾಗಿರುತ್ತವೆ..ಅನೇಕ ಜನರು ವಿಶೇಷವಾಗಿ ಪ್ರಾಣಿಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ಇಷ್ಟಪಡುತ್ತಾರೆ.
ಆನೆಗಳು, ಕೋತಿಗಳು, ಗಿಳಿಗಳು, ಹುಲಿಗಳು, ಸಿಂಹಗಳು ಮತ್ತು ಮೊಸಳೆಗಳ ವೀಡಿಯೊಗಳು ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿವೆ. ಕೆಲವೊಮ್ಮೆ ಪ್ರಾಣಿಗಳಿಗೆ ಆಹಾರ ನೀಡಿ ಮುದ್ದಾಡುವುದನ್ನು ನೋಡಿದಾಗ ನಾವು ಬೆಚ್ಚಿಬೀಳುತ್ತೇವೆ. ಇತ್ತೀಚೆಗಷ್ಟೇ ಇಂತಹ ಆಘಾತಕಾರಿ ವಿಡಿಯೋ ಸಖತ್ ವೈರಲ್ ಆಗಿದೆ.
ಒಬ್ಬ ಮನುಷ್ಯನು ಮೊಸಳೆಗಳ ಬಳಿಗೆ ಹೋಗಿ ಅವುಗಳ ಬಾಲವನ್ನು ಎಳೆದನು. ಅದರ ನಂತರ ಏನಾಯಿತು? ಮೊಸಳೆ ಮನುಷ್ಯನಿಗೆ ಏನಾದರೂ ಹಾನಿ ಮಾಡಿತೇ? ಉತ್ತರ ಇಲ್ಲಿದೆ ನೋಡಿ.ಆ ವೀಡಿಯೋದಲ್ಲಿ ಕೊಳದ ಮೊಸಳೆಗಳು ನೀರಿನಿಂದ ಹೊರಬಂದು ಒಡ್ಡಿನ ಮೇಲೆ ವಿಶ್ರಾಂತಿ ಪಡೆಯುತ್ತವೆ. ಆದರೆ ವ್ಯಕ್ತಿಯೊಬ್ಬ ಮೊಸಳೆಯ ವೇಷದಲ್ಲಿ ಕೆರೆಗೆ ಬಂದು ಕೈಯಲ್ಲಿದ್ದ ಕೋಲಿನಿಂದ ಮೊಸಳೆಗೆ ಹೊಡೆಯಲು ಯತ್ನಿಸಿದ್ದಾನೆ.
ಆ ಮೊಸಳೆಯೂ ಹೆದರದೆ ಅವನ ಮೇಲೆ ಬರುತ್ತದೆ. ಮನುಷ್ಯ ಪದೇ ಪದೇ ಕೋಲಿನಿಂದ ಹೆದರಿಸುತ್ತಾನೆ ಆಗ ಮೊಸಳೆ ನಮಗೇಕೆ ಇವೆಲ್ಲ.. ಎಂದು ನಿಧಾನವಾಗಿ ನೀರಿಗೆ ಜಾರುತ್ತದೆ. ಆಗ ಇನ್ನೊಂದು ಮೊಸಳೆಯ ಬಳಿಗೆ ಹೋಗಿ ಅದರ ಬಾಲವನ್ನು ಹಿಡಿದು ಬಲವಾಗಿ ಎಳೆಯುತ್ತಾರೆ. ವ್ಯಕ್ತಿ ಮೊಸಳೆಯಂತೆ ವೇಷ ಧರಿಸಿದ್ದರಿಂದ.. ಇನ್ನೊಂದು ಮೊಸಳೆಯೂ ನಿಧಾನವಾಗಿ ನೀರಿಗೆ ಜಾರುತ್ತದೆ.
ಈ ತಮಾಷೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಗುಂಡಿಗೆ ಗಟ್ಟಿ ಇದ್ದರೇ ಮಾತ್ರ ಇಂತಹ ಕೆಲಸ ಮಾಡೋಕೆ ಸಾಧ್ಯ.. ಎಂದರೇ.. ಇನ್ನು ಕೆಲವರು ಮೊಸಳೆಯ ಕೈಗೆ ಸಿಕ್ಕಿಬಿದ್ದಿದ್ದೀರಿ ಹುಷಾರ್ ಎಂದು ಕಮೆಂಟ್ ಮಾಡುತ್ತಿದ್ದಾರೆ. ಮತ್ತು ಕೆಲವರು ಇಂತಹ ಕೆಲಸಗಳನ್ನು ಏಕೆ ಮಾಡುತ್ತೀರಾ ಎಂದು ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.