ಮನೆಯಿಂದ ಹೊರಬಂದ ಸ್ನೇಹಿತ್ ಗೆ ಬಾರಿ ಮುಖಭಂಗ, ನಮ್ರತಾ ಪ್ರೀತಿಗೆ ಬಿಗ್ ಬ್ರೇಕ್

 | 
Bs

ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಈಗ 11ನೇ ವಾರಕ್ಕೆ ಕಾಲಿಟ್ಟಿದೆ. ಕಳೆದ ವಾರ ಸ್ನೇಹಿತ್‌ ಗೌಡ ಬಿಗ್‌ಬಾಸ್‌ ಮನೆಯಿಂದ ಆಚೆ ಬಂದಿದ್ದಾರೆ. ಅಂದರೆ 10ನೇ ವಾರ ಸ್ನೇಹಿತ್‌ ಔಟ್‌ ಆಗಿದ್ದಾರೆ. ಇದೀಗ ಮನೆಗೆ ಬಂದ ಅವರು ತಮ್ಮ ತಾಯಿ-ತಂದೆ ಬಳಿ ಕ್ಷಮೆ ಕೋರಿದ್ದಾರೆ.

ಎಂದೆಂದಿಗೂ ನೀವು ತಲೆ ಎತ್ತಿಕೊಂಡು ಓಡಾಡುವ ಕೆಲಸ ಮಾಡುತ್ತೇನೆ. ಒಂದು ವೇಳೆ ನೀವು ತಲೆ ತಗ್ಗಿಸುವಂತಹ ಕೆಲಸ ಮಾಡಿದ್ದರೆ ಅದು ಗೊತ್ತಿಲ್ಲದೆ ಆಗಿರುವಂತಹದ್ದು. ಇನ್ನೆಂದೂ ಹಾಗೆ ಆಗುವುದಿಲ್ಲ ಎಂದು ಹೇಳಿದ ಸ್ನೇಹಿತ್‌ ತಮ್ಮ ತಂದೆ-ತಾಯಿಯ ಕಾಲಿಗೆರಗಿದ್ದಾರೆ. ಈ ವೇಳೆ ಭಾವುಕರಾದ ತಂದೆ-ತಾಯಿ ಸ್ನೇಹಿತ್‌ನನ್ನು ತಬ್ಬಿ ಸಂತೈಸಿದ್ದಾರೆ. ಹಾಗೇನು ಆಗಿಲ್ಲ ಎಂದು ಸಮಾಧಾನಪಡಿಸಿದ್ದಾರೆ. 

ನಮ್ಮಲ್ಲಿ ಹೆಮ್ಮೆಯ ಭಾವನೆ ಮೂಡಿಸಿದ್ದಿ, ಚಿಂತೆ ಮಾಡಬೇಡ ಎಂದು ಈ ವೇಳೆ ಅಮ್ಮ ಹೇಳಿದ್ದಾರೆ. ಇಷ್ಟು ದಿನ ತುಂಬ ಮಿಸ್‌ ಮಾಡಿಕೊಂಡಿದ್ದೆ ಎಂದು ಅಮ್ಮ ತಿಳಿಸಿದ್ದಾರೆ. ಮನೆಯಲ್ಲಿರುವಾಗ ಸ್ನೇಹಿತ್‌ ನಮ್ರತಾ ಮೇಲೆ ಸ್ಟ್ರಾಂಗ್​ ಫೀಲಿಂಗ್ಸ್ ಇದೆ ಎಂದಿದ್ದರು. ರಾತ್ರಿ ಎಲ್ಲರೂ ಮಲಗಿರುವಾಗ ಸ್ನೇಹಿತ್‌ ಅವರು ನಮ್ರತಾ ಫೋಟೊ ಪಕ್ಕ ತಮ್ಮ ಫೋಟೊವನ್ನು ಇಟ್ಟಿದ್ದರು. ಇದಾದ ಬಳಿಕ ವಿನಯ್‌ ಅವರ ಬಳಿ ನಮ್ರತಾ ಬಗ್ಗೆ ತಮಗಿರುವ ಭಾವನೆ ಬಗ್ಗೆ ಹೇಳಿಕೊಂಡಿದ್ದರು. 

ನನಗೆ ಹುಡುಗಿಯರು ಇಷ್ಟ ಆಗಿದ್ದು ಬಹಳ ಕಡಿಮೆ. ಒಬ್ಬಳು ಇಷ್ಟ ಆಗಿದ್ದಳು. ಅದು ವರ್ಕೌಟ್‌​ ಆಗಲಿಲ್ಲ. ಅದಾದ ಬಳಿಕ ಈಗಲೇ ಆಗಿರುವುದು. ಬಿಗ್​ ಬಾಸ್​ ಮನೆಗೆ ಬಂದಾಗ ಒಬ್ಬರು ನನಗೆ ಇಷ್ಟೆಲ್ಲ ಇಷ್ಟ ಆಗುತ್ತಾರೆ ಎಂದು ನನಗೂ ನಂಬಿಕೆ ಇರಲಿಲ್ಲ. ಅದನ್ನು ನಂಬೋಕೆ ಆಗುತ್ತಿಲ್ಲ. ಇವರ ಜತೆ ನಾನು ಫ್ರೆಂಡ್​ಗಿಂತಲೂ ಚೂರು ಜಾಸ್ತಿ ಅಟ್ಯಾಚ್​ ಆಗಿದ್ದೇನೆ ಎಂಬುದು ನಾನು ಜೈಲಿಗೆ ಹೋದಾಗ ಗೊತ್ತಾಯಿತು. 

ಆಮೇಲೆ ಒಂದು ಹಂತದ ನಂತರ ಅನಿಸಿತು. ನನಗೆ ಇವರ ಮೇಲೆ ಸ್ಟ್ರಾಂಗ್​ ಫೀಲಿಂಗ್ಸ್ ಇದೆ. ಅದಾದ ಬಳಿಕ ಅವರಿಗೆ ನಾನು ಹೇಳಿದೆ. ಅವರ ಜತೆ ನನಗೆ ಮುಂದಿನ ಹತ್ತು ವರ್ಷಗಳು ಕಾಣುತ್ತಿವೆ. ನಮ್ಮ ಅಪ್ಪ-ಅಮ್ಮನ ಜತೆ ಅವರು ಕೂಡ ಕಾಣುತ್ತಾರೆ ಎಂದು ಸ್ನೇಹಿತ್​ ಹೇಳಿದ್ದರು. ಇನ್ನು ಬಿಗ್ಬಾಸ್ ಮನೆಯಲ್ಲಿ ಮಾತಿಗೆ ಮುಂಚೆ ಡ್ರಾಮಾ ಮಾಡುತ್ತೀರಾ ಯಾಕೆ ಒಮ್ಮೆ ಯಾವುದು ಸರಿ ತಪ್ಪು ಯೋಚನೆ ಮಾಡಬಾರದು. 

ನಮ್ರತಾ ಸೆರಗು ಹಿಡಿದು ಓಡಾಡುತ್ತಿರುವುದಕ್ಕೆ ಸಂಗಬುಲ್ಲ ಎಂದು ಟ್ರೋಲ್‌ ಪೇಜ್‌ಗಳಲ್ಲಿ ಹರಿದಾಡುತ್ತಿತ್ತು. ಆ ಕುರಿತಾಗಿ ಹೆಚ್ಚಿಗೆ ತಲೆ ಕೆಡಿಸಿಕೊಳ್ಳಬೇಡ. ನಮಗೆ ನಮ್ಮ ಮಗ ಹೇಗೆ ಎಂದು ಗೊತ್ತು ಎಂದು ಸ್ನೇಹಿತ್ ಪಾಲಕರು ಧೈರ್ಯ ಹೇಳಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.