ಅನ್ನಭಾಗ್ಯ ಹಣದ ನಿರೀಕ್ಷೆಯಲ್ಲಿದ್ದ ಜನರಿಗೆ ಬಿಗ್ ಶಾ.ಕ್, ಯಾಕೆ ಏನಾಯಿತು ಗೊತ್ತಾ

 | 
Hd

ಸರಕಾರ ವಿವಿಧ ತಾಂತ್ರಿಕ ಕಾರಣದ ನೆಪ ಹೇಳಿ ಯೋಜನೆಯ ಅರ್ಹ ಫಲಾನುಭವಿ ಕುಟುಂಬಗಳಿಗೆ ಸವಲತ್ತು ನೀಡದೆ ಅರ್ಧ ಚಂದ್ರ ತೋರಿಸಿದೆ. ಜತೆಗೆ, ಫಲಾನುಭವಿ ಕುಟುಂಬದ ಗರಿಷ್ಠ ಸದಸ್ಯರ ಮಿತಿ ದಾಟಿದ, ಸತತ ಮೂರು ತಿಂಗಳಿಂದ ಪಡಿತರ ಪಡೆಯದ ಕುಟುಂಬಗಳಿಗೆ ಡಿಬಿಟಿ ಸವಲತ್ತು ಸ್ಥಗಿತಗೊಳಿಸಿದೆ.
ಕಾಂಗ್ರೆಸ್‌ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿಅಂತ್ಯೋದಯ ಅನ್ನ ಯೋಜನೆಯ ಫಲಾನುಭವಿ ಕುಟುಂಬದ ಪ್ರತಿ ಸದಸ್ಯರಿಗೆ ತಿಂಗಳಿಗೆ ತಲಾ 10 ಕೆ.ಜಿ. ಅಕ್ಕಿ ವಿತರಿಸುವುದಾಗಿ ಘೋಷಿಸಿತ್ತು. 

ಆದರೆ, ಹೆಚ್ಚುವರಿ ಅಕ್ಕಿ ಸಿಗದ ಕಾರಣ 5 ಕೆ.ಜಿ. ಅಕ್ಕಿ ಮತ್ತು ಐದು ಕೆ.ಜಿ. ಅಕ್ಕಿ ಬದಲಿಗೆ ತಲಾ ಒಂದು ಕೆ.ಜಿ. ಗೆ 34 ರೂ.ನಂತೆ 170 ರೂ.ಗಳನ್ನು ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾವಣೆ ಮಾಡುವುದಾಗಿ ಹೇಳಿತ್ತು. ಆಹಾರ-ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಡಿಬಿಟಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ನಿರ್ವಹಿಸುತ್ತಿದೆ. 

ಎನ್‌ಪಿಸಿಐ, ಸುಮಾರು 21 ಲಕ್ಷ ಫಲಾನುಭವಿ ಕುಟುಂಬಗಳ ಮಾಹಿತಿ ದೋಷಪೂರಿತವಾಗಿದೆ ಎಂದು ಇಲಾಖೆಗೆ ವರದಿ ಕೊಟ್ಟಿದೆ. ಫಲಾನುಭವಿಗಳು ಇಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ, ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆಯಾಗಿಲ್ಲ, ಬ್ಯಾಂಕ್‌ ಖಾತೆ-ಪಡಿತರ ಚೀಟಿ ಮತ್ತು ಆಧಾರ್‌ ಕಾರ್ಡ್‌ನಲ್ಲಿರುವ ಫಲಾನುಭವಿಗಳ ವೈಯಕ್ತಿಕ ವಿವರ ತಾಳೆಯಾಗುತ್ತಿಲ್ಲ, ನಕಲಿ ಫಲಾನುಭವಿಗಳ ಸೃಷ್ಟಿ ಸಾಧ್ಯತೆಯಿದೆ ಎಂದು ಎನ್‌ಪಿಸಿಐ ಹೇಳಿದೆ.

ಆದರೆ ಇದೀಗ ತಾಂತ್ರಿಕ ಕಾರಣಕ್ಕೆ 29 ಲಕ್ಷ ಎಎವೈ ಕುಟುಂಬಗಳಿಗೆ ಡಿಬಿಟಿ ಸ್ಥಗಿತಗೊಳಿಸಿದ್ದೇವೆ. ಈ ಸವಲತ್ತಿನಿಂದ ವಂಚಿತವಾಗಿರುವ ಫಲಾನುಭವಿ ಕುಟುಂಬಗಳು ಪಡಿತರ ಚೀಟಿಯಲ್ಲಿನ ತಿದ್ದುಪಡಿಗೆ ಅರ್ಜಿ ಸಲ್ಲಿಸಿದರೆ ಸರಿಪಡಿಸಿ, ಸವಲತ್ತು ಕಲ್ಪಿಸುತ್ತೇವೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹೆಚ್ಚುವರಿ ನಿರ್ದೇಶಕರು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.