ಪ್ರತಾಪ್ ಅವರನ್ನು ದೂರ ಇಟ್ಟ ಬಿಗ್ ಬಾಸ್ ಸ್ಪರ್ಧಿಗಳು, ಕಾರಣ ಕೇಳಿ ಕ ಣ್ಣೀರಿಟ್ಟ ವೀಕ್ಷಕರು

 | 
Hd

ಬಿಗ್ ಬಾಸ್ ಮನೆಯ ಸ್ಟ್ರಾಂಗ್ ಸ್ಪರ್ಧಿಗಳಲ್ಲಿ ಡ್ರೋನ್ ಪ್ರತಾಪ್ ಕೂಡ ಒಬ್ಬರು. ಯಾವುದೇ ಮನರಂಜನಾ ಕ್ಷೇತ್ರದ ಹಿನ್ನೆಲೆ ಇಲ್ಲದೆ, ಸಾಮಾನ್ಯ ವ್ಯಕ್ತಿಯಾಗಿ ಮನೆಯೊಳಗೆ ಹೋಗಿರುವ ಅವರಿಗೆ ಈಗ ಸಮಸ್ಯೆಗಳು ಶುರುವಾಗಿವೆ. ಕೆಲ ದಿನಗಳ ಹಿಂದೆ ಕಣ್ಣಿಗೆ ಪೆಟ್ಟು ಮಾಡಿಕೊಂಡು ಡ್ರೋನ್ ಪ್ರತಾಪ್ ಆಸ್ಪತ್ರೆಗೆ ಹೋಗಿಬಂದಿದ್ದರು. ಇದೀಗ ಮತ್ತೊಂದು ಕಾರಣಕ್ಕೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನು ಈ ಕುರಿತಾಗಿ ಪ್ರತಾಪ್ ಅವರನ್ನು ಬೆಂಬಲಿಸಿ ಯುವತಿಯೊಬ್ಬಳು ಮಾತಾಡಿದ್ದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗ್ತಿದೆ. ಈಚೆಗೆ ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್‌ಗೆ ಸಾಕಷ್ಟು ಬೇಸರವಾಗಿತ್ತು ಎಂಬುದು ಕೂಡ ಸುಳ್ಳಲ್ಲ. ಅಕ್ಕನಂತಿದ್ದ ಸಂಗೀತಾ ಜಗಳ ಮಾಡಿಕೊಂಡಿದ್ದರು. ಮನೆಯ ಸದಸ್ಯರು ಟಾಸ್ಕ್ ಆಡುವುದಕ್ಕೂ ಚಾನ್ಸ್ ನೀಡಿರಲಿಲ್ಲ. 

ಮೂರು ವರ್ಷಗಳ ನಂತರ ಈಚೆಗಷ್ಟೇ ಪ್ರತಾಪ್ ಅವರು ತಮ್ಮ ಪೋಷಕರನ್ನು ಬಿಗ್ ಬಾಸ್ ಮನೆಯೊಳಗೆ ನೋಡಿ, ಮಾತನಾಡಿಸಿದ್ದರು. ಒತ್ತಡದಲ್ಲಿ ನೀನು ಪ್ಯಾನಿಕ್ ಆಗ್ತೀಯಾ.. ನೀನು ನಿನ್ನನ್ನು ಎಷ್ಟು ಬೇಕಿದ್ದರೂ ಸಮರ್ಥನೆ ಮಾಡಿಕೊಳ್ಳಬಹುದು. ಆದರೆ ನೀನು ಪ್ಯಾನಿಕ್ ಆಗಿರೋದು ಎಲ್ಲರಿಗೂ ಕಾಣಿಸಿದೆ. ನೀನು ಹೇಳಿದ್ದನ್ನು ಕೇಳಿಸಿಕೊಳ್ಳೋಕೆ ರೆಡಿ ಇಲ್ಲ..ಎಂದು ನಮ್ರತಾ & ಸಂಗಿತಾ ಅವರು ಪ್ರತಾಪ್‌ಗೆ ಹೇಳಿದ್ದರು. ಇದು ಪ್ರತಾಪ್‌ಗೆ ಬೇಸರವನ್ನು ಉಂಟು ಮಾಡಿತ್ತು. 

ಇನ್ನೊಂದು ಟಾಸ್ಕ್ ವಿಚಾರದಲ್ಲೂ ವಿನಯ್ & ಮೈಕಲ್ ಕೂಡ ಪ್ರತಾಪ್‌ಗೆ ಅವಕಾಶ ನೀಡಿರಲಿಲ್ಲ. ಆಗ ನನಗೆ ಈ ಮನೆಯಲ್ಲಿ ವೋಟ್ ಹಾಕುವವರು ಯಾರೂ ಇಲ್ಲ. ಕ್ಯಾಪ್ಟನ್ಸಿ ಟಾಸ್ಕ್‌ ಬಂದಾಗಲೂ ವೋಟ್ ಹಾಕಲ್ಲ. ಬೇರೆ ಟಾಸ್ಕ್‌ನಲ್ಲೂ ವೋಟ್ ಹಾಕಲ್ಲ. ಏನಾದರೂ ಕೇಳಿದರೆ, ನಿನಗೆ ಈಗೋ ಇದೆ ಅಂತಾರೆ ಎಂದು ಪ್ರತಾಪ್ ಬೇಸರಪಟ್ಟುಕೊಂಡಿದ್ದರು.

ಇದೆಲ್ಲದರ ಮಧ್ಯೆ ಗಾಯದ ಮೇಲೆ ಬರೆ ಎಳೆಯುವ ಹಾಗೆ ಗುರೂಜಿ ಅವರು ಕೂಡ ಭವಿಷ್ಯ ನುಡಿದಿದ್ದರು. ಇದರಿಂದ ಬೇಸರ ಹೊಂದಿದ್ದ ಪ್ರತಾಪ್ ಅವರು ಕಳೆದ ಎರಡು ಮೂರು ದಿನಗಳಿಂದ ಬೇಸರದಲ್ಲಿದ್ದರು. ಇದೀಗ ಚೇತರಿಸಿಕೊಂಡು ಹೊಸ ಹುರುಪಿನಿಂದ ಬಿಗ್ಬಾಸ್ ಮನೆ ಪ್ರವೇಶಿಸಿದ್ದಾರೆ ಅವರಿಗೆ ಬೆಂಬಲ ನೀಡಿ ಎಂದು ಯುವತಿ ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.