ಬಿಗ್ ಬಾಸ್ ಸ್ಪರ್ಧಿಗೆ ಮದುವೆ ಫಿಕ್ಸ್; ಕನ್ನಡಿಗರಿಗೆ ಭರ್ಜರಿ ಬಾಡೂಟ

 | 
Yu

ಕನ್ನಡದ ಅಗ್ನಿಸಾಕ್ಷಿ ಸೀರಿಯಲ್‌ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ಶೋಭಾ ಶೆಟ್ಟಿ ತೆಲುಗಿನಲ್ಲಿ ಕಾರ್ತಿಕ ದೀಪಂ ಎಂಬ ಸೂಪರ್‌ಹಿಟ್‌ ಧಾರಾವಾಹಿ ಮೂಲಕ ಫೇಮಸ್‌ ಆಗಿದ್ದಾರೆ. ಕಾರ್ತಿಕ ದೀಪಂ ಸೀರಿಯಲ್‌ನಲ್ಲಿ ಮೋನಿತಾಳಾಗಿ ಇವರು ಜನಪ್ರಿಯತೆ ಪಡೆದಿದ್ದಾರೆ. 

ಇತ್ತೀಚೆಗೆ ಬಿಗ್‌ಬಾಸ್‌ ತೆಲುಗು ಸೀಸನ್‌ 7ರಲ್ಲಿ ಶೋಭಾ ಶೆಟ್ಟಿ ಭಾಗವಹಿಸಿದ್ದರು. ಇವರಿಗೂ ತೆಲುಗು ನಟ ಯಶವಂತ ರೆಡ್ಡಿಗೂ ಇದೀಗ ನಿಶ್ಚಿತಾರ್ಥ ನಡೆದಿದೆ. ಇವರಿಬ್ಬರ ಎಂಗೇಜ್‌ಮೆಂಟ್‌ ಕುರಿತು ಕೆಲವು ತಿಂಗಳ ಹಿಂದೊಮ್ಮೆ ಸುದ್ದಿಯಾಗಿತ್ತು. ಇದೀಗ ಇವರಿಬ್ಬರು ಇನ್‌ಸ್ಟಾಗ್ರಾಂನಲ್ಲಿ ಅಧಿಕೃತವಾಗಿ ತಮ್ಮ ಎಂಗೇಜ್‌ಮೆಂಟ್‌ ವಿಡಿಯೋ ಹಂಚಿಕೊಂಡಿದ್ದಾರೆ.

ಬಿಗ್‌ಬಾಸ್‌ ತೆಲುಗು ಸೀಸನ್‌ 7ನಲ್ಲಿ ಶೋಭಾ ಶೆಟ್ಟಿಯವರು ತಮ್ಮ ಬಾಯ್‌ಫ್ರೆಂಡ್‌ ಯಶವಂತ್‌ ರೆಡ್ಡಿಯನ್ನು ಪರಿಚಯಿಸಿದ್ದಾರೆ. ಇವರಿಬ್ಬರೂ ಕಾರ್ತಿಕಾ ದೀಪಂ ಸೀರಿಯಲ್‌ನಲ್ಲಿ ಜತೆಯಾಗಿ ನಟಿಸಿದ್ದಾರೆ. ಕೆಲವು ಶಾರ್ಟ್‌ ಮೂವಿಗಳಲ್ಲಿಯೂ ಒಟ್ಟಾಗಿ ನಟಿಸಿದ್ದಾರೆ. ಈ ಸಮಯದಲ್ಲಿ ಸ್ನೇಹ ಪ್ರೀತಿಗೆ ತಿರುಗಿದೆ.ಬಿಗ್‌ಬಾಸ್‌ನಲ್ಲಿ ಸ್ಪರ್ಧಿಸಿದಾಗ ತನ್ನ ಆಟದ ಮೂಲಕ ಎಲ್ಲರ ಗಮನ ಸೆಳೆದಿದ್ದರು. 

ಇವರಿಬ್ಬರು ಕಳೆದ ವರ್ಷವೇ ಎಂಗೇಂಜ್‌ಮೆಂಟ್‌ ಆಗಲು ನಿರ್ಧರಿಸಿದ್ದರು. ಕೆಲವೊಂದು ಕಾರಣಗಳಿಂದ ಎಂಗೇಂಜ್‌ಮೆಂಟ್‌ ಆಗಿರಲಿಲ್ಲ.ಇದೀಗ ಇವರು ತಮ್ಮ ಎಂಗೇಂಜ್‌ಮೆಂಟ್‌ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯಾ ವೈರಲ್‌ ಆಗಿದೆ. ಬೆಂಗಳೂರಿನಲ್ಲಿರುವ ಶೋಭಾ ಶೆಟ್ಟಿಯವರ ನಿವಾಸದಲ್ಲಿ ಈ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿದೆ ಎನ್ನಲಾಗಿದೆ. ಆದರೆ, ಈ ಕುರಿತು ಯಾವುದೇ ಸುಳಿವನ್ನು ಶೋಭಾ ನೀಡಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.