ಸಿಹಿಸುದ್ದಿ ಕೊಟ್ಟ ಬಿಗ್ ಬಾಸ್ ಧರ್ಮ, ಇದೇ ತಿ‌ಂಗಳು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮದುವೆ ನಡೆಯಲಿದೆ

 | 
Bs
ಬಿಗ್ಬಾಸ್ ಮನೆಯಲ್ಲಿ ಚಾಕಲೇಟ್ ಬಾಯ್ ಅಂತಾನೇ ಫೇಮಸ್ ಆಗಿರೋ ಕನ್ನಡ ಚಿತ್ರರಂಗದ ಹಿರಿಯ ನಟ ಕೀರ್ತಿ ರಾಜ್ ಅವರ ಮಗ, ನವಗ್ರಹ ಸಿನಿಮಾ ಖ್ಯಾತಿಯ ಧರ್ಮ ಕೀರ್ತಿರಾಜ್ ಬಿಗ್ ಬಾಸ್ ಕನ್ನಡ ಸೀಜನ್‌ 11ರ ಸ್ಪರ್ಧಿಯಾಗಿ ಎಲ್ಲರ ಮನಸ್ಸು ಗೆದ್ದರು. ತಮ್ಮ ಆಟ ಹಾಗೂ ಮುಗ್ಧತೆಯಿಂದ ಕನ್ನಡಿಗರ ಮನಸ್ಸು ಗೆದ್ದಿರುವ ಧರ್ಮ ಕೀರ್ತಿರಾಜ್ ಅವರು ಎಂಟು ವಾರಗಳನ್ನು ಬಿಗ್‌ ಬಾಸ್‌ ಮನೆಯಲ್ಲಿ ಪೂರೈಸಿದ್ದರು. 
ಧರ್ಮ ಹೊರ ಬರುತ್ತಿದ್ದಂತೆ ಅವರ ಮದುವೆಯ ಸುದ್ದಿಗಳು ಜೋರಾಗಿದ್ದು, ಇದೀಗ ಮೊದಲ ಬಾರಿಗೆ ಈ ವರ್ಷ ಮದುವೆಯಾಗುವುದು ಖಚಿತ ಎಂದು ಸ್ವತಃ ಧರ್ಮ ಕೀರ್ತಿರಾಜ್ ಹೇಳಿದ್ದಾರೆ.ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, 'ನನ್ನ ಮತ್ತು ಅನುಷಾ ರೈ ಅವರನ್ನು ಜನ ಇಷ್ಟೊಂದು ಇಷ್ಟ ಪಟ್ಟಿರುವುದಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ನಾವಿಬ್ಬರು ಒಳ್ಳೆಯ ಸ್ನೇಹಿತರು. ನಾವು ಮೊದಲು ಸ್ನೇಹಿತರಾಗಿದ್ದೇವು. ಈಗಲೂ ಸ್ನೇಹಿತರಾಗಿದ್ದೇವೆ. ಮುಂದೆಯೂ ಸ್ನೇಹಿತರಾಗಿರುತ್ತೇವೆ. ಯಾಕೆಂದರೆ ನನಗೂ ಅವರಿಗೂ ಇಬ್ಬರಿಗೂ ಬೇರೆ ಬೇರೆಯಾದ ವೈಯಕ್ತಿಕ ಬದುಕಿದೆ ಎಂದಿದ್ದಾರೆ.
ಇನ್ನು ನನ್ನ ಮದುವೆ ಬಗ್ಗೆ ಮನೆಯಲ್ಲಿ ಈಗಾಗಲೇ ಮಾತುಕತೆ ಆಗುತ್ತಿದ್ದೆ. ಹುಡುಗಿಯನ್ನು ಹುಡುಕುತ್ತಿದ್ದಾರೆ. ನೋಡಿ ಕೂಡ ಆಗಿದೆ. ಬಹುತೇಕ ಎಲ್ಲಾ ಫಿಕ್ಸ್‌ ಆಗಿದೆ. ನನ್ನ ಜೀವನ ಈ ಹಂತದಲ್ಲಿ ಇರುವುದರಿಂದ ಅನುಷಾ ರೈ ಮತ್ತು ನನ್ನ ನಡುವೆ ಇರುವುದು ಒಳ್ಳೆಯ ಸ್ನೇಹ ಅಂತಾ ಹೇಳಲು ಇಷ್ಟಪಡುತ್ತೇನೆ. ಅದನ್ನು ಅವರು ಗೌರವಿಸುತ್ತಾರೆ. ನಾನೂ ಸಹ ಗೌರವಿಸುತ್ತೇನೆ ಎಂದರು.
ಇನ್ನು ತಮ್ಮ ಮದುವೆ ಬಗ್ಗೆ ಮಾತು ಮುಂದುವರಿಸಿದ ಧರ್ಮ ಕೀರ್ತಿರಾಜ್‌, ಈಗ ಮನೆಯಲ್ಲಿ ನೋಡಿರುವ ಹುಡುಗಿ ಸಿನಿಮಾ ಹಿನ್ನೆಲೆ ಇರುವವರಲ್ಲ. ಮದುವೆ ಬಗ್ಗೆ ನನಗಿನ್ನೂ ಸಂಪೂರ್ಣವಾಗಿ ಖಚಿತವಾಗಿಲ್ಲ. ಮುಂದೆ ನೋಡೋಣ. ಅದು ಆದಾಗ ಖಂಡಿತಾ ನಾನೇ ಹೇಳುತ್ತೇನೆ. ಅದಕ್ಕೆ ಇನ್ನೂ ಸಮಯ ಬೇಕು. 
ಅದಕ್ಕಿಂತ ಹೆಚ್ಚಾಗಿ ನನ್ನ ಸಿನಿಮಾಗಳೆಲ್ಲ ಚೆನ್ನಾಗಿ ಆಗಿ ನಿರ್ಮಾಪಕರ ಜೇಬು ತುಂಬ ಬೇಕು. ಜೀವನದಲ್ಲಿ ಎಲ್ಲವೂ ಹಂತ ಹಂತವಾಗಿ ಆಗಬೇಕು ಎಂದು ಧರ್ಮ ಕೀರ್ತಿರಾಜ್‌ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.