ಮಧ್ಯರಾತ್ರಿ ಜೊತೆಗಿದ್ದ ವರ್ತೂರು ಹಾಗೂ ತನಿಷಾ ಅವರನ್ನು ಮನೆಯಿಂದ ಹೊರಹಾಕಿದ ಬಿಗ್ ಬಾಸ್

 | 
E

ಕನ್ನಡ ಬಿಗ್​ ಬಾಸ್​ ಸೀಸನ್​ 10ರ ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಅಂತಿಮ ಘಟ್ಟ ತಲುಪಿರುವ ಕಾರ್ಯಕ್ರಮ ಕ್ಷಣಕ್ಷಣಕ್ಕೂ ಕುತೂಹಲಕಾರಿಯಾಗುತ್ತಿದೆ. ಸಪ್ರೈಸ್‌ ಜೊತೆ ಸಾಕಷ್ಟು ಟ್ವಿಸ್ಟ್​​ಗಳೂ ಎದುರಾಗುತ್ತಿವೆ. ಸದ್ಯ ಉಳಿದುಕೊಂಡಿರುವ ಎಲ್ಲರೂ ಪ್ರಬಲ ಸ್ಪರ್ಧಿಗಳೇ. ಇಂಥ ಸಂದರ್ಭದಲ್ಲಿ ಮನೆಯಿಂದ ಯಾರೇ ಹೊರನಡೆದರೂ ಅನೇಕರ ಆಶ್ಚರ್ಯಕ್ಕೆ ಕಾರಣವಾಗುತ್ತದೆ. ಅದರಂತೆ ಇದೀಗ ತನಿಷಾ ಕುಪ್ಪಂಡ ಮನೆಯಿಂದ ಹೊರನಡೆಯುವ ಸಂದರ್ಭ ಎದುರಾಗಿದ್ದು, ಪ್ರೇಕ್ಷಕರಿಗೆ ಶಾಕ್​​ ಆಗಿದೆ.

ಹೌದು ಬಿಗ್ ಬಾಸ್ ಮನೆಯಲ್ಲಿ  ಮಹಾ ತಿರುವು, ದೊಡ್ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆದಿದೆ. ದೊಡ್ಮನೆ ಆಟದಿಂದ ತನಿಷಾ ಕುಪ್ಪಂಡ  ಔಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ದೊಡ್ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದ ತನಿಷಾ ಕುಪ್ಪಂಡ ಅವರಿಗೆ ‘ಬಿಗ್ ಬಾಸ್’ ಬಿಗ್ ಶಾಕ್ ಕೊಟ್ಟಿದ್ದಾರೆ. ತನಿಷಾ ಈ ಮನೆಯಲ್ಲಿ ನಿಮ್ಮ ಪಯಣ ಅಂತ್ಯ ಎಂದು ಹೇಳಿ ಬಿಗ್ ಬಾಸ್ ಅಚ್ಚರಿ ಮೂಡಿಸಿದ್ದಾರೆ.

ಕಳೆದ 60 ದಿನಗಳಿಂದ ಎದುರಾಳಿಗಳಿಗೆ ಠಕ್ಕರ್ ಕೊಡುತ್ತಲೇ ತನಿಷಾ ಆಟ ಆಡುತ್ತಿದ್ದರು. ಟಾಸ್ಕ್‌ವೊಂದರಲ್ಲಿ ತನಿಷಾ ಕಾಲಿಗೆ ಏಟಾದ ಮೇಲೆ ಕೊಂಚ ಡಲ್ ಆದರು. ಬಿಗ್ ಬಾಸ್ ಮನೆಯ ಆಟದಲ್ಲಿ ಕಳೆದ ವಾರ ಎಲಿಮಿನೇಷನ್ ಪ್ರಕ್ರಿಯೆ ನಡೆದಿರಲಿಲ್ಲ. ಈಗ ಸಡನ್ ಆಗಿ ತನಿಷಾ ಅವರ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ. ಈ ಕುರಿತ ವಾಹಿನಿಯ ಪ್ರೋಮೋ ವೈರಲ್ ಆಗುತ್ತಿದೆ.

ಕಳೆದ ವಾರ ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೂ ಡೇಂಜರ್ ಝೋನ್‌ನಲ್ಲಿದ್ದರು. ಆದರೆ ಈ ವಾರ ತುಕಾಲಿ ಸಂತೂ ನಾಮಿನೇಟ್ ಆಗಿಲ್ಲ. ಮೂಲಗಳ ಪ್ರಕಾರ, ತನಿಷಾ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗುತ್ತಿದೆ.ಹಾಗೇ, ಸೇಫ್‌ ಆಗಿರೋರು ಕಳೆದು ಹೋಗಬೇಡಿ. ಯು ನೆವರ್ ನೋ. ಬಾಟಂ 2ಗೆ ಬಂದ್ವಿ ಅಂತ ವರ್ತೂರು ಸಂತೋಷ್, ತುಕಾಲಿ ಸಂತು ಅಳಬೇಡಿ. ಯು ನೆವರ್ ನೋ. ಮುಂದಿನ ವಾರದ ಪಂಚಾಯತಿಗೆ ಬರುವ ಹೊತ್ತಿಗೆ ಗ್ರಾಫ್ ಏನಾಗಿರಬಹುದು. ಯು ನೆವರ್ ನೋ ಅಂತಲೂ ಕಿಚ್ಚ ಸುದೀಪ್‌  ಕೊನೆಯ ವಾರದಲ್ಲಿ ಹೇಳಿದ್ದರು. ಅದು ಈಗ ನಿಜವಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.