ಬಿಗ್ ಬಾಸ್ ಫಿನಾಲೆ ದಿನವೇ ಅಂದರ್ ಆದ ಜಗದೀಶ್, ಕೋರ್ಟ್ ನಲ್ಲಿ ಮಹತ್ವದ ತೀರ್ಮಾನ
Jan 26, 2025, 17:20 IST
|

ವಿರೂಪಾಕ್ಷಪುರ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಸ್ಥಳೀಯ ಯುವಕರು ಹಾಗೂ ಜಗದೀಶ್ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿತ್ತು. ಜಗದೀಶ್ ಅವರ ಗನ್‌ಮ್ಯಾನ್ ಪಿಸ್ತೂಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಇದರಿಂದ ಕೆರಳಿದ ಸ್ಥಳೀಯ ಯುವಕರು ಜಗದೀಶ್ ಅವರ ಕಾರು ಧ್ವಂಸಗೊಳಿಸಿ, ಹಲ್ಲೆ ನಡೆಸಿದ್ದರು. ಈ ಘಟನೆಯಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳಕ್ಕೆ ತೆರಳಿದ್ದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಸ್ಥಳೀಯ ಯುವಕ ತೇಜಸ್ವಿ ಎಂಬಾತ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿ ಜಗದೀಶ್ ಸೇರಿ ಇತರ ಆರೋಪಿಗಳನ್ನು ಬಂಧಿಸಿ, ಪಿಸ್ತೂಲ್ ಜಪ್ತಿ ಮಾಡಲಾಗಿದೆ. ಜಗದೀಶ್ ನೀಡಿದ ದೂರಿನ ಅನ್ವಯವೂ ಪ್ರಕರಣ ದಾಖಲಿಸಿದ್ದು ಆರೋಪಿಗಳನ್ನು ಬಂಧಿಸಬೇಕಿದೆ. ಎರಡೂ ಪ್ರಕರಣಗಳ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತೇಜಸ್ವಿ ಹಾಗೂ ಸ್ನೇಹಿತರು ಜನವರಿ 24 ರಂದು ರಾತ್ರಿ ಸುಮಾರು 8.30ಕ್ಕೆ ವಿರೂಪಾಕ್ಷಪುರದ ಆರ್ಚ್ ಹತ್ತಿರದ ಬೇಕರಿ ಬಳಿ ಟೀ ಕುಡಿಯುತ್ತಾ ನಿಂತಿದ್ದರು. ಆಗ ಜಗದೀಶ್ ಹಾಗೂ ಸಹಚರರು ಅಲ್ಲಿಗೆ ಬಂದಿದ್ದು, ಏಕೆ ಇಲ್ಲಿ ನಿಂತಿರುವಿರಿ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ತೇಜಸ್ವಿ, ಟೀ ಕುಡಿದು ಹೋಗುವುದಾಗಿ ಹೇಳಿದ್ದಾರೆ. ಅಷ್ಟಕ್ಕೆ ಕೋಪಗೊಂಡ ಜಗದೀಶ್, ಡ್ರಗ್ಸ್ ಸೇವಿಸಿ ಬಂದಿದ್ದೀರಾ? ಎಂದು ಏಕಾಏಕಿ ಬಾಡಿ ಗಾರ್ಡ್‌ನಿಂದ ಲಾಠಿ ಪಡೆದು ಅವರ ಹಲ್ಲೆ ನಡೆಸಿದ್ದಾರೆ.
ಜಗಳ ಬಿಡಿಸಲು ಬಂದ ಸ್ಥಳೀಯರ ಮೇಲೂ ಜಗದೀಶ್ ಸಹಚರರು ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023