ಬಿಗ್ ಬಾಸ್ ಗೌತಮಿ ಮುಚ್ಚಿಟ್ಟ ಗುಟ್ಟು ರಟ್ಟು, ದೊಡ್ಮನೆಯಲ್ಲಿ ಈ ವಿಚಾರ ಹಂಚಿಕೊಂಡಿರಲಿಲ್ಲ

 | 
Js
ಬಿಗ್‌ ಬಾಸ್‌ ಸ್ಪರ್ಧಿ ಗೌತಮಿ ಜಾದವ್ ಹಾಗೂ ಅವರ ಮುದ್ದಾದ ಮಗಳು ಎನ್ನುವ ವಿಡಿಯೋವೊಂದು ಗೌತಮಿ ಬಿಗ್‌ ಬಾಸ್‌ ಮನೆಯಲ್ಲಿ ಇರುವ ವೇಳೆ ಸಿಕ್ಕಾಪಟ್ಟೆ  ವೈರಲ್ ಆಗಿತ್ತು. ಇತ್ತೀಚಿಗಷ್ಟೆ ಆರನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನು ಬಿಗ್‌ ಬಾಸ್‌ ಮನೆಯಲ್ಲೇ ಆಚರಿಸಿದ್ದ ಗೌತಮಿ ಜಾದವ್, ಈವರೆಗೂ ತಮ್ಮ ಮಗಳ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ.
ಹೀಗಾಗಿ ಗೌತಮಿ ಜಾದವ್ ಹಾಗೂ ಅಭಿಷೇಕ್‌ ದಂಪತಿಗೆ ನಿಜವಾಗಿಯೂ ಮಗಳಿದ್ದಾಳ? ಒಂದು ವೇಳೆ ಮಗಳಿದ್ದರೂ ಎಲ್ಲಿಯೂ ಹೇಳಿಕೊಂಡಿಲ್ಲ ಯಾಕೆ? ನನ್ನ ಮಕ್ಕಳು ಎಂದು ಪದೇ ಪದೇ ಹೇಳುವ ಗೌತಮಿ ಮಗಳ ಬಗ್ಗೆ ಯಾಕೆ ಹೇಳಿಲ್ಲ ಎನ್ನುವ ಪ್ರಶ್ನೆಗಳು ಪ್ರೇಕ್ಷಕರಲ್ಲಿ ಉದ್ಭವವಾಗಿದ್ದವು. ಇದೀಗ ಈ ಎಲ್ಲಾ ಪ್ರಶ್ನೆ ಅಥವಾ ಗೊಂದಲಕ್ಕೆ ಸ್ವತಃ ಗೌತಮಿ ಜಾದವ್ ತೆರೆ ಎಳೆದಿದ್ದಾರೆ. ಗೌತಮಿ ಜಾದವ್ ಹಾಗೂ ಅವರ ಮುದ್ದಾದ ಮಗಳು ಎನ್ನುವ ವಿಡಿಯೋ ನೋಡಿ ಸ್ಪಷ್ಟನೆ ಕೊಟ್ಟಿದ್ದಾರೆ.
ಈ ಕುರಿತಾಗಿ ಮಾತನಾಡಿರುವ ಇವರು ನನ್ನ ಮಗಳು ಅಂತಾ ಚರ್ಚೆ ಆಗುತ್ತಿದೆ. ಇಲ್ಲ ಇದು ಸತ್ಯವಲ್ಲ. ಇದು ಒಂದು ಸೀರೆ ಪ್ರಮೋಷನ್‌ಗೆ ಜೊತೆಯಾಗಿ ವಿಡಿಯೋ ಹಾಗೂ ಫೋಟೋ ಶೂಟ್‌ ಮಾಡಿಸಿದ್ದೇವು. ನಿಜ ಹೇಳಬೇಕು ಅಂದರೆ ಆ ಹುಡುಗಿ ನನ್ನ ಮಗಳಲ್ಲ.ನನ್ನ ಪಕ್ಕದ ಮನೆ ಹುಡುಗಿ ಮಾನ್ವಿ ಅಂತಾ. ನನ್ನ ಮಗಳಲ್ಲ ಆಕೆ ಎಂದು ಸ್ಪಷ್ಟನೆ ನೀಡಿದ್ದಾರೆ. ಸದ್ಯಕ್ಕೆ ನನಗೆ ಮಕ್ಕಳಿಲ್ಲ ಮದುವೆ ಆಗಿದೆ ಅಷ್ಟೇ. ಮಕ್ಕಳಿಲ್ಲ. ಮಕ್ಕಳು ಅಂದರೆ ಮೂರು ಜನ ಇದ್ದಾರೆ. ಹ್ಯಾಪಿ, ಕ್ವೀನ್‌ ಕಾಫಿ ಅಂತಾ. ಅವರು ಮೂರು ಜನ ಬಿಟ್ಟರೆ ಮಕ್ಕಳಿಲ್ಲ' ಎಂದು ಗೌತಮಿ ವಿಡಿಯೋ ವೈರಲ್‌ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
ಇನ್ನು ಈ ಹಿಂದೆ ತಮ್ಮ ಪತಿ ಅಭಿಷೇಕ್‌ ಅವರ ಬಗ್ಗೆ ಮಾತನಾಡಿದ್ದ ಗೌತಮಿ ಜಾದವ್, 'ನನ್ನ ಜೀವನದಲ್ಲಿ ಅಭಿಷೇಕ್‌ ಅವರ ಜೊತೆಗೆ ಮಾತ್ರ ಒಂದು ಸುಂದರವಾದ ಲವ್‌ ಸ್ಟೋರಿ ಇರುವುದು. ಅದನ್ನೇ ನಾನು ಏಳೇಳು ಜನ್ಮಕ್ಕೂ ಬೇಕು ಅಂತಾ ಬಯಸುವವಳು. ನನ್ನ ಜೀವನದಲ್ಲಿ ಪ್ರೀತಿಗೆ ಕೊರತೆ ಅಂತೂ ಆಗಿಲ್ಲ' ಎಂದು ತಮ್ಮ ಹ್ಯಾಪಿ ಫ್ಯಾಮಿಲಿ ಬಗ್ಗೆ ಖುಷಿ ಹಂಚಿಕೊಂಡಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.