ಬಿಗ್ ಬಾಸ್ ಗ್ರಾಂಡ್ ಫಿನಾಲೆಗೆ ಸಂಕಷ್ಟ, ಅರ್ಧದಲ್ಲಿ ಸಿಲುಕಿಕೊಳ್ಳುತ್ತಾ ಶೋ
ಬಿಗ್ ಬಾಸ್ ಸೀಸನ್ 10 ದಿನಕ್ಕೊಂದು ರೀತಿಯಲ್ಲಿ ಕೂತೂಹಲ ಮೂಡಿಸಿ ಎಲ್ಲರನ್ನೂ ಸೆಳೆಯುತ್ತಿದೆ. ಫಿನಾಲೆಗೆ 16 ದಿನಗಳು ಬಾಕಿ ಇವೆ. ಇದೀಗ ಬಿಗ್ ಬಾಸ್‌ಗೆ ಕಂಟಕ ಎದುರಾಗಿದೆ. ಅಕ್ರಮವಾಗಿ, ಯಾವುದೇ ಅನುಮತಿ ಪಡೆದುಕೊಳ್ಳದೇ, ನಿಯಮ ಮೀರಿ ಬಿಗ್ ಬಾಸ್ ಮನೆ ನಿರ್ಮಾಣ ಮಾಡಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಬೆಂಗಳೂರು ದಕ್ಷಿಣ ಉಪವಿಭಾಗದ ಉಪವಿಭಾಗಾಧಿಕಾರಿ ಅವರಿಗೆ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರಚಾರ್ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ʻಬಿಗ್ ಬಾಸ್ʼ ಸದ್ಯ ದಿನಕ್ಕೊಂದು ಟಾಸ್ಕ್ ಹಾಗೂ ಸ್ಪರ್ಧಿಗಳ ಚುರುಕತನದ ಆಟಗಳಿಂದ ಸಖತ್ ಸುದ್ದಿಯಲ್ಲಿದೆ. ಸೋಷಿಯಲ್ ಮೀಡಿಯಾದಲ್ಲಿ ಫಿನಾಲೆ ಬೇಗ ಆಗಲಿ ಎಂದು ವೀಕ್ಷಕರು ಕಮೆಂಟ್ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಆದರೀಗ ಫಿನಾಲೆ ಬರುವ ಹೊತ್ತಲ್ಲೇ ಬಿಗ್ ಬಾಸ್‌ಗೆ ಕಂಟಕ ಎದುರಾಗಿದೆ. ಕೃಷಿ ಜಮೀನಿನಲ್ಲಿ ಬಿಗ್‌ಬಾಸ್ ಶೋ ಸಲುವಾಗಿ ಪ್ರಾಧಿಕಾರದಿಂದ ಯಾವುದೇ ಅನುಮತಿ ಪಡದುಕೊಳ್ಳದೇ ಅಕ್ರಮವಾಗಿ ಕಟ್ಟಡ ನಿರ್ಮಿಸಿ ವಾಣಿಜ್ಯ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ದಕ್ಷಿಣ ಉಪವಿಭಾಗದ ಉಪವಿಭಾಗಾಧಿಕಾರಿ ಅವರಿಗೆ ರಾಘವೇಂದ್ರಚಾರ್ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಿದ್ದಾರೆ.
ದಕ್ಷಿಣ ವಲಯದ ರಾಮೋಹಳ್ಳಿಯ ಮಾಳಿಗೊಂಡನಹಳ್ಳಿ ಗ್ರಾಮದ ಸರ್ವೆ ನಂಬರ್ 128ರಲ್ಲಿರುವ ಬಿಗ್‌ಬಾಸ್ ಮನೆ ನಿರ್ಮಾಣವಾಗಿದೆ. ಡಿ ಮುನಿರಾಜು ಎಂಬುವವರಿಗೆ ಸೇರಿದ 7 ಎಕರೆ 11 ಗುಂಟೆ ಜಾಗ ಇದಾಗಿದೆ. ಇದೀಗ ಈ ಜಾಗದಲ್ಲಿ ಷರತ್ತು ಉಲ್ಲಂಘಿಸಿ ಶೆಡ್ ನಿರ್ಮಾಣ ಮಾಡಲಾಗಿದೆ ಎಂದು ವರದಿಯಾಗಿದೆ. ಜಾಮೀನು ಪಕ್ಕದಲ್ಲಿ ದೊಡ್ಡ ಕೆರೆ ಸಹ ಇದ್ದು, ಅದೂ ಒತ್ತುವರಿ ಆಗಿರುವ ಅನುಮಾನ ವ್ಯಕ್ತವಾಗಿದೆ.
ಕೃಷಿ ಜಮೀನಿನಲ್ಲಿ ಅಕ್ರಮವಾಗಿ ವಾಣಿಜ್ಯ ಚಟುವಟಿಕೆ ನೀಡಲಾಗುತ್ತಿದೆ ಎಂಬ ಬಗ್ಗೆ ರಾಘವೇಂದ್ರಚಾರ್ ಈ ಹಿಂದೆ ಜಿಲ್ಲಾಧಿಕಾರಿ ದಯಾನಂದ್ ಅವರಿಗೂ ದೂರು ನೀಡಿದ್ದರು.ಸದ್ಯ ಬಿಗ್ ಬಾಸ್ ಮನೆಯಲ್ಲಿ ಟಿಕೆಟ್ ಟು ಫಿನಾಲೆ’ ಟಾಸ್ಕ್‌ಗಳು ಸಾಕಷ್ಟು ಚಕಮಕಿ ಹುಟ್ಟಿಸುತ್ತಿದೆ. ವಾರಾಂತ್ಯದ ಹೊತ್ತಿಗೆ ಫಿನಾಲೆಗೆ ಪ್ರವೇಶ ಪಡೆದುಕೊಳ್ಳಲಿರುವ ಸದಸ್ಯ ಯಾರು ಎಂಬುದನ್ನು ತಿಳಿದುಕೊಳ್ಳಲು ವೀಕ್ಷಕರು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಸಂಗೀತಾ ಹೊರತಾಗಿ ಇನ್ಯಾರು ಫೈನಲ್ ಸೇರ್ತಾರೆ ನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.