'ಬಿಗ್ ಬಾಸ್ ಕಾರ್ತಿಕ್ ತಂಗಿ ಮನೆ ನೋಡಿ ಕ.ಣ್ಣೀರು ಹಾಕಿದ ಕನ್ನಡಿಗರು' ಯಾರಿಗೂ ಬೇಡ ಈ ಸ್ಥಿತಿ

 | 
Vhu

ಬಿಗ್ ಬಾಸ್‌ ಕನ್ನಡ 10 ಕಾರ್ಯಕ್ರಮ ಮುಕ್ತಾಯವಾಗಿದೆ. ಕಾರ್ತಿಕ್ ಮಹೇಶ್ ವಿಜೇತರಾಗಿ ಹೊರಹೊಮ್ಮಿದ್ದಾರೆ. ಎರಡನೇ ಸ್ಥಾನ ಡ್ರೋನ್ ಪ್ರತಾಪ್‌, ಮೂರನೇ ಸ್ಥಾನ ಸಂಗೀತಾ, ನಾಲ್ಕನೇ ಸ್ಥಾನ ವಿನಯ್ ಗೌಡ, ಐದನೇ ಸ್ಥಾನ ವರ್ತೂರು ಸಂತೋಷ್‌, ಆರನೇ ಸ್ಥಾನ ತುಕಾಲಿ ಸಂತು ಪಾಲಾಗಿದೆ. ಬಿಗ್ ಬಾಸ್‌ ಕನ್ನಡ 10 ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಮುಗಿದು ಎರಡು ವಾರಗಳು ಕಳೆದಿವೆ. ಆದರೂ, ಅದರ ಫೀವರ್‌ ಇನ್ನೂ ಕಮ್ಮಿ ಆಗಿಲ್ಲ.

ಬಿಗ್ ಬಾಸ್ ಕನ್ನಡ 10 ಕಾರ್ಯಕ್ರಮದಲ್ಲಿ ಕಾರ್ತಿಕ್ ವಿನ್ನರ್‌ ಆಗೋದಕ್ಕೆ ಕಾರಣ ಕೊನೆಯ ವಾರ ತಂಗಿ ಮಾಡಿದ ವಿಡಿಯೋ ಕಾಲ್‌. ತಂಗಿ ಮನೆಯ ಪರಿಸ್ಥಿತಿ ಕಂಡು ಜನ ಸಿಂಪಥಿಯಿಂದ ವೋಟ್‌ ಮಾಡಿದ್ದಾರೆ ಎಂಬ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿವೆ. ಇದಕ್ಕೆ ಕಾರ್ತಿಕ್ ಏನಂದರು ಗೊತ್ತಾ.ನನ್ನ ತಂಗಿಯಿಂದ ನಾನು ಗೆದ್ದೆ ಅಂತ ಹೇಳಿಕೊಳ್ಳೋದಕ್ಕೆ ನನಗೆ ಹೆಮ್ಮೆ ಇದೆ. ಅಳಿಯನಿಂದಲೂ ನಾನು ಗೆದ್ದೆ. ಅದನ್ನ ಹೆಮ್ಮೆಯಿಂದಲೇ ಹೇಳಿಕೊಳ್ತೀನಿ ಎಂದು ಸಂದರ್ಶನಗಳಲ್ಲಿ ಕಾರ್ತಿಕ್‌ ಹೇಳಿದ್ದಾರೆ.

ಮೊದಲ ವಾರದಿಂದ ಎಪಿಸೋಡ್ಸ್‌ ನೋಡದವರು ಸಿಂಪಥಿ ಅಂತ ಅಂದುಕೊಳ್ಳಬಹುದು. ಅಂದುಕೊಳ್ಳಲಿ ಬಿಡಿ. ಅದೂ ಖುಷಿನೇ. ಅದು  ನನ್ನ ಅಜ್ಜಿಯ ಮನೆ ಅದು ಇರೋದೇ ಹಾಗೆ.ಬಹಳ ಹಳೆಯ ಮನೆಯದು ಏನೇ ಹೇಳಿದರೂ ನಂಬಿದವರಿಗೆ ಏನೂ ಮಾಡಲು ಆಗದು ಒಟ್ನಲ್ಲಿ ನಾನು ಎಲ್ಲರ ಮನಸ್ಸು ಗೆದ್ದಿದ್ದೀನಿ. ಅದೂ ಖುಷಿನೇ ಅಂತಲೂ ಸಂದರ್ಶನಗಳಲ್ಲಿ ಕಾರ್ತಿಕ್‌ ತಿಳಿಸಿದ್ದಾರೆ. ಬಾಣಂತನಕ್ಕಾಗಿ ಮಗಳನ್ನ ತಮ್ಮ ತಾಯಿಯ ಮನೆಗೆ ಮೀನಾಕ್ಷಿ ಕಾರ್ತಿಕ್ ತಾಯಿ ಕರೆದುಕೊಂಡು ಹೋಗಿದ್ದರು. 

ಹೀಗಾಗಿ, ಚಾಮರಾಜನಗರದಲ್ಲಿರುವ ತಮ್ಮ ಅಜ್ಜಿ ಮನೆಯಿಂದಲೇ ಕಾರ್ತಿಕ್‌ ತಂಗಿ ವಿಡಿಯೋ ಕಾಲ್ ಮಾಡಿದ್ದರು. ಹಾಗ್ನೋಡಿದ್ರೆ, ಕಾರ್ತಿಕ್ ಹಾಗೂ ತಂಗಿ ಹುಟ್ಟಿ, ಬೆಳೆದಿದ್ದು ಅದೇ ಮನೆಯಲ್ಲೇ. ಇನ್ನು ತಾಯಿಯ ತವರು ಮನೆ, ತನ್ನ ಹುಟ್ಟೂರಾಗಿರುವ ಚಾಮರಾಜನಗರಕ್ಕೆ ಕಾರ್ತಿಕ್‌ ಇದೀಗ ಭೇಟಿ ಕೊಟ್ಟಿದ್ದಾರೆ. ‘ಬಿಗ್ ಬಾಸ್‌’ ಗೆದ್ದು ಬಂದ ಕಾರ್ತಿಕ್‌ಗೆ ಚಾಮರಾಜನಗರದಲ್ಲಿ ಪ್ರೀತಿಯಿಂದ, ಭರ್ಜರಿಯಾಗಿ ಸ್ವಾಗತ ಮಾಡಲಾಗಿದೆ. ಕುಟುಂಬಸ್ಥರನ್ನು ಹಾಗೂ ಊರಿನ ಜನರನ್ನು ಮಾತನಾಡಿಸಿ ಕಾರ್ತಿಕ್‌ ಸಂತಸ ಪಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.