ಮುರಿದು ಬಿತ್ತು ಬಿಗ್ ಬಾಸ್ ಮೈಕಲ್ ಲವ್, ಅವಳಿಗಾಗಿ ಎಲ್ಲವೂ ಕೊಟ್ಟೆ ಎಂದ ಮೈಕಲ್
Jun 26, 2025, 10:58 IST
|

ಹೌದು, ಬಿಗ್ಬಾಸ್ ಸೀಸನ್ 10ಕ್ಕೆ ಎಂಟ್ರಿ ಕೊಟ್ಟಿದ್ದರು ಮೈಕಲ್ ಅಜಯ್. ಮೈಕಲ್ ಅವರು ಬಿಗ್ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಉಳಿದ ಸ್ಪರ್ಧಿಗಳು ಶಾಕ್ ಆಗಿದ್ದರು. ಅದಕ್ಕೆ ಮುಖ್ಯ ಕಾರಣವೇ ಅವರ ಸ್ಟೈಲ್ ಹಾಗೂ ಮ್ಯಾನರಿಸಂ. ಅಷ್ಟೇ ಅಲ್ಲದೇ ಮೈಕಲ್ ಅಜಯ್ ಬಿಗ್ ಮನೆಯ ಟಾಸ್ಕ್ ಮಾಸ್ಟರ್ ಎಂದೇ ಫೇಮ್ ಪಡೆದುಕೊಂಡಿದ್ದರು. ಒಬ್ಬ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿ ಬಂದಿದ್ದರು.
ಇನ್ನೂ, ಮೈಕಲ್ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅಳುತ್ತಿರೋ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಬ್ರೇಕಪ್ ಎಫೆಕ್ಟ್ ಅಂತ ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಅಂದ್ರೆ ಮೈಕಲ್ ಅವರಿಗೆ ವಲ್ ಬ್ರೇಕಪ್ ಆಗಿದೆ. ಈ ಹಿಂದೆ ಯ್ಯೂಟೂಬ್ ಚಾನೆಲ್ನಲ್ಲಿ ತನ್ನ ಗರ್ಲ್ ಫ್ರೆಂಡ್ ಜೊತೆ ಟ್ರೆಕ್ಕಿಂಗ್ ಹೋಗುವ ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದರು.
ಅದರಲ್ಲಿ ಈಕೆನೇ ನನ್ನ ಗರ್ಲ್ ಫ್ರೆಂಡ್ ಅಂತ ಕೂಡ ಹೇಳಿಕೊಂಡಿದ್ದರು. ಆದ್ರೆ ಇದೀಗ ಈ ಇಬ್ಬರ ಮಧ್ಯೆ ಲವ್ ಬ್ರೇಕಪ್ ಉಂಟಾಗಿದೆ. ಈ ಬಗ್ಗೆ ಖುದ್ದು ಮೈಕಲ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಲವು ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇನ್ನೂ ಇದೇ ವಿಡಿಯೋ ನೋಡಿದ ಅಭಿಮಾನಿಗಳು ಮೈಕಲ್ಗೆ ಧೈರ್ಯ ತುಂಬಿದ್ದಾರೆ.
ಬಿಗ್ಬಾಸ್ ಆರಂಭದಲ್ಲಿ ಮೈಕಲ್ ಅಜಯ್ ಯಾರೆಂಬುದು ಹೆಚ್ಚಿನವರಿಗೆ ತಿಳಿದಿರಲಿಲ್ಲ. ಹಿಂದಿಯ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ್ದರೂ ಕೂಡ ಕರ್ನಾಟಕದಲ್ಲಿ ಅವರಿಗೆ ಸಂಬಂಧಿಕರು ಇದ್ದರು. ಬಿಗ್ಬಾಸ್ ಮನೆಯಲ್ಲಿದ್ದಾಗ ದಿನ ಕಳೆದಂತೆ ಅವರು ಕನ್ನಡದಲ್ಲಿ ಮಾತಾಡಲು ಶುರು ಮಾಡಿದ್ದರು. ಬಳಿಕ ಕನ್ನಡವನ್ನು ಚೆನ್ನಾಗಿ ಮಾತಾಡುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. ಈ ಮೂಲಕ ಕನ್ನಡದ ಕಂದ ಎಂಬ ಹೆಸರನ್ನು ಪಡೆದುಕೊಂಡರು.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023