ದರ್ಶನ್ ಹಾಗೂ ಧ್ರುವ ಸರ್ಜಾನ ಬಗ್ಗೆ ಖಡಕ್ ಆಗಿ ಮಾತಾನಾಡಿದ ಬಿಗ್ ಬಾಸ್ ಪ್ರಥಮ್

 | 
ಕಿಕಿಕ

ಶುಕ್ರವಾರ ನಡೆದ ಕಾವೇರಿ ಹೋರಾಟಕ್ಕೆ ಇಡೀ ಕನ್ನಡ ಚಿತ್ರೋದ್ಯಮ ಬೆಂಬಲ ನೀಡಿತ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೇತೃತ್ವದಲ್ಲಿ ವಾಣಿಜ್ಯ ಮಂಡಳಿ ಬಳಿ ಬೃಹತ್‌ ಸಭೆ ಆಯೋಜಿಸಲಾಗಿತ್ತು. ಈ ಹೋರಾಟಕ್ಕೆ ಚಿತ್ರೋದ್ಯಮದ ಬೆಂಬಲ ಸದಾ ಇರಲಿದೆ ಎಂದೇ ಎಲ್ಲ ಕಾಲಾವಿದರು, ತಂತ್ರಜ್ಞರು ತಮ್ಮ ಒಗ್ಗಟ್ಟು ಪ್ರದರ್ಶಿಸಿದ್ದರು. 

ಕನ್ನಡದ ಘಟಾನುಘಟಿ ಕಲಾವಿದರಾದ ಶಿವರಾಜ್‌ಕುಮಾರ್‌, ದರ್ಶನ್‌, ಶರಣ್‌, ಧ್ರುವ ಸರ್ಜಾ, ಶ್ರೀಮುರಳಿ ವಸಿಷ್ಠ ಸಿಂಹ, ಸೇರಿ ಸಾಕಷ್ಟು ಮಂದಿ ಭಾಗವಹಿಸಿದ್ದರು. ಈ ಹೋರಾಟದಲ್ಲಿ ಇನ್ನೊಂದು ಗಮನ ಸೆಳೆದ ವಿಚಾರ ಏನೆಂದರೆ, ನಟ ಧ್ರು ಸರ್ಜಾ ಕೊಂಚ ಮಂಕಾಗಿದ್ದರು. ಮುಖದಲ್ಲಿ ಸಣ್ಣ ನಗುವೂ ಕಾಣದೇ ಸಪ್ಪಾಗಿದ್ದರು. ವೇದಿಕೆ ಮೇಲೆಯೂ ಅಷ್ಟಾಗಿ ಲವಲವಿಕೆ ಅವರಿಂದ ಕಾಣಿಸಲಿಲ್ಲ. 

ವೇದಿಕೆ ಮೇಲಿದ್ದ ಶಿವಣ್ಣನನ್ನು ಮಾತನಾಡಿಸಿದ್ದನ್ನು ಬಿಟ್ಟರೇ, ಯಾರನ್ನೂ ಮಾತನಾಡಿಸುವ ಗೋಜಿಗೆ ಹೋಗಿರಲಿಲ್ಲ ಧ್ರುವ. ದರ್ಶನ್‌ ಅವರ ಆಗಮನವಾದರೂ, ಧ್ರುವ ಕುಳಿತ ಸೀಟಿನಿಂದ ಮೇಲೆಳಲಿಲ್ಲ. ಧ್ರುವ ಅವರ ಈ ವರ್ತನೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಹೀಗೆ ಸುಮ್ಮನೆ ಕುಳಿತಿದ್ದೇ ತಡ, ದರ್ಶನ್‌ ಮತ್ತು ಧ್ರುವ ಸರ್ಜಾ ನಡುವೆ ಯಾವುದೂ ಸರಿಯಿಲ್ಲ ಎಂಬ ಚರ್ಚೆ ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚಾಯಿತು. 

ದರ್ಶನ್‌ ಅಭಿಮಾನಿಗಳು ಧ್ರುವ ಅವರ ನಡೆ ಕಂಡು ಕಿಡಿಕಾರುತ್ತಿದ್ದರು. ಬೆಳೆಯುವಾಗ ಬೇಕಾದರು, ಬೆಳೆದಾದ ಮೇಲೆ ಬೇಡವಾದರು ಎಂದು ಧ್ರುವಗೆ ಟೀಕೆ ಮಾಡುತ್ತಿದ್ದರು. ಇತ್ತ ಈ ಬಗ್ಗೆ ಸ್ವತಃ ಧ್ರುವ ಉತ್ತರಿಸಲಿಲ್ಲ. ದರ್ಶನ್‌ ಆಗಮನವಾಗುತ್ತಿದ್ದಂತೆ, ಕೆಲಹೊತ್ತು ವೇದಿಕೆ ಮೇಲೆ ಕಾಣಿಸಿಕೊಂಡು, ಹೊರಟೇ ಹೋದರು. ಆದರೆ, ಧ್ರುವ ಹೀಗೆ ಮಂಕಾಗಿದ್ದಕ್ಕೆ ಕಾರಣ ಏನಿರಬಹುದು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು.

ಆದರೆ ಇದೀಗ ಎಲ್ಲ ಪ್ರಶ್ನೆಗಳಿಗೆ ಉತ್ತರ ಬಿಚ್ಚಿಟ್ಟಿದ್ದಾರೆ ನಟ ಭಯಂಕರ ಪ್ರಥಮ್ ಅವರು ಹೌದು ಭಾನುವಾರ ರಾತ್ರಿ, ಚಿರಂಜೀವಿ ಸರ್ಜಾ ನಟನೆಯ ರಾಜಮಾರ್ತಾಂಡ ಸಿನಿಮಾದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮ ನಡೆಯಿತು. ಮೇಘನಾ ರಾಜ್‌ ಸರ್ಜಾ, ಧ್ರುವ ಸರ್ಜಾ, ನಟ ಪ್ರಥಮ್‌ ಸೇರಿ ಚಿತ್ರತಂಡದ ಹಲವರು ಈ ಟ್ರೇಲರ್‌ ಬಿಡುಗಡೆ ಇವೆಟ್‌ನಲ್ಲಿ ಭಾಗವಹಿಸಿದ್ದರು. ಇದೇ ವೇಳೆ ನಟ ಪ್ರಥಮ್‌, ಅಂದು ಹೋರಾಟದ ವೇದಿಕೆ ಮೇಲೆ ಧ್ರುವ ಮಂಕಾಗಿದ್ದು ಏಕೆ ಎಂಬುದನ್ನು ಪ್ರಥಮ್‌ ಬಿಚ್ಚಿಟ್ಟಿದ್ದಾರೆ.

ಧ್ರುವ ಆವತ್ತು ಸಪ್ಪಾಗಿರುವುದಕ್ಕೆ ಕಾರಣ ಅವರ ಅಭಿಮಾನಿಯೊಬ್ಬರ ಸಾವು. ಧ್ರುವ ಸರ್ಜಾ ಅವರ ದೊಡ್ಡ ಅಭಿಮಾನಿಯಾಗಿದ್ದ ರಘುನಾಥ ಭಜಂತ್ರಿ, ಬಂದ್‍ಗಿಂತ ಒಂದು ದಿನ ಮುಂಚಿತವಾಗಿ ತೀರಿ ಹೋದರು. ಹಾಸನ ಮಾರ್ಗವಾಗಿ ಬೇಗೂರಿನಿಂದ ಬರುವಾಗ ಅಪಘಾತದಲ್ಲಿ ಕಾರು-ಬಸ್ಸಿನ ನಡುವೆ ಅಪಘಾತ ಸಂಭವಿಸಿತು. ರಘುನಾಥ್ ಭಜಂತ್ರಿ ಅವರಿಗೆ ಒಂದು ಚಿತ್ರ ನಿರ್ದೇಶನ ಮಾಡುವ ಆಸೆ ಇತ್ತು. ಧ್ರುವ ಅವರನ್ನು ಭೇಟಿ ಮಾಡುವ ಆಸೆಯೂ ಇತ್ತು. 

ಈ ವಿಷಯವನ್ನು ಧ್ರುವ ಅವರಿಗೂ ಹೇಳಿದ್ದೆ. ಹುಟ್ಟುಹಬ್ಬದ ದಿನ ಕರೆದುಕೊಂಡು ಬರುವುದಕ್ಕೆ ಧ್ರುವ ಹೇಳಿದ್ದರು. ಆದರೆ, ಅಷ್ಟರಲ್ಲಿ ರಘುನಾಥ್‍ ನಿಧನರಾದರು. ಅವರನ್ನು ಕೊನೆಯ ಒಂದು ಬಾರಿ ನೋಡುವುದು, ಸೆಲ್ಫಿ ತೆಗೆಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ ಈ ವಿಷಯ ಧ್ರುವ ಅವರನ್ನು ತುಂಬಾ ಕಾಡಿದೆ. ಅದೇ ವಿಷಯವನ್ನು ನೆನಪಿಸಿಕೊಂಡು ಕೊರಗುತ್ತಿದ್ದಾರೆ. ಅವರಲ್ಲಿ ಯಾವ ಚೈತನ್ಯವೂ ಇರಲಿಲ್ಲ. ಬಹಳ ಡಿಪ್ರೆಸ್‍ ಆಗಿಬಿಟ್ಟಿದ್ದರು. 

ಮೂರು ದಿನಗಳ ಕಾಲ ಅವರು ಅನುಭವಿಸಿದ ನೋವು ನನಗ ಮಾತ್ರ ಗೊತ್ತು. ಕಾವೇರಿ ಬಂದ್‍ ದಿನ ಅವರ ಮುಖದಲ್ಲಿ ನಗುವಿಲ್ಲ, ಚೈತನ್ಯವಿಲ್ಲ. ಇದು ಎಷ್ಟೋ ಜನರಿಗೆ ಗೊತ್ತಿಲ್ಲ. ತಮಗೆ ಬೇಕಾಗಿದ್ದನ್ನು ವ್ಯಾಖ್ಯಾನಿಸುತ್ತಾರೆ. ಇವತ್ತಿಗೂ ಅದೇ ನೋವಿನಲ್ಲಿದ್ದಾರೆ. ಸರಿಯಾಗಿ ಮಾತನಾಡುತ್ತಿಲ್ಲ. ಅದಕ್ಕೆ ಬೇರೆ ವಿಚಾರಗಳನ್ನು ತಳುಕು ಹಾಕಬೇಡಿ ಎಂದಿದ್ದಾರೆ ಪ್ರಥಮ್.‌ (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.