ಬಿಗ್ ಬಾಸ್ ಪ್ರತಾಪ್ ಮತ್ತೊಂದು ಮುಖ ಬಯಲಿಗೆ, 'ಕುಮಾರಸ್ವಾಮಿ ಹೆಸರೇಳಿಕೊಂಡು ಪಂಗನಾಮ'

 | 
Juj
ಪುರಾತನ ಕಾಲದಲ್ಲಿ ಡ್ರೋನ್ ಪ್ರತಾಪ್ ಮಾಡಿಕೊಂಡ ರಂಕಲು ರಾಮಾಯಣದ ಮುಂದುವರೆದ ಭಾಗ ಸದ್ಯಕ್ಕೆ ಆರಂಭವಾದಂತೆ ಇದೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ಸ್ವಯಂ ಘೋಷಿತ ಡ್ರೋನ್ ವಿಜ್ಞಾನಿ ಪ್ರತಾಪ್ ಆ ಕಡೆ ರಿಯಾಲಿಟಿ ಸ್ಟಾರ್ ಪಟ್ಟಕ್ಕೇರಲು ಕಸರತ್ತು ಮುಂದುವರೆಸಿದ್ದರೆ, ಈ ಕಡೆ ಡ್ರೋನ್ ಪ್ರತಾಪ್ ವಿರುದ್ಧ ಒಂದೊಂದೇ ಪ್ರಕರಣ ದಾಖಲಾಗ್ತಿವೆ.
ಬುದ್ದಿವಂತ ಹಾಗೂ ಮುಗ್ದನಂತೆ ಬಿಗ್ ಬಾಸ್ ಮನೆಯಲ್ಲಿ ಕಂಡಿದ್ದ ಡ್ರೋನ್ ಪ್ರತಾಪ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಆ ದೂರಿನ ಅನ್ವಯ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೆಸರಿನಲ್ಲಿ, ಡ್ರೋನ್ ಪ್ರತಾಪ್ ಎರಡು ಲಕ್ಷ ವಂಚನೆ ಮಾಡಿದ್ದಾರೆ. ಜಿಲ್ಲಾ ಪಂಚಾಯಿತಿ ಚುನಾವಣೆ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿ ಎರಡು ಲಕ್ಷ ರೂಪಾಯಿ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಚಂದನ್ ಗೌಡ ಎಂಬುವರು ಡ್ರೋನ್ ಪ್ರತಾಪ್ ವಿರುದ್ಧ ದೂರು ನೀಡಿದ್ದಾರೆ. 
ನನಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರ ಆಪ್ತರು. ಅವರ ಫಾರಂ ಹೌಸ್​ಗೆ ನಾನು ಆಗಾಗ್ಗೆ ಭೇಟಿ ನೀಡುತ್ತಿರುತ್ತೇನೆ. ಕುಮಾರಸ್ವಾಮಿ ಅವರನ್ನ ಹಲವು ಭಾರಿ ಭೇಟಿ ಮಾಡಿದ್ದೇನೆ. ಆದರೆ ಅವರ ಜೊತೆಗೆ ಇರುವ ಚಿತ್ರಗಳನ್ನು ನಾನು ಹಂಚಿಕೊಳ್ಳಲು ಬಯಸುವುದಿಲ್ಲ. ಕುಮಾರಸ್ವಾಮಿ ಅವರಿಗೆ ಹೇಳಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತಳಗವಾದಿ ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಡಿಸುತ್ತೇನೆ ಎಂದು ಪ್ರತಾಪ್ ಹೇಳಿದ್ದರು ಎಂದು ಚಂದನ್ ದೂರಿನಲ್ಲಿ ದಾಖಲಿಸಿದ್ದಾರೆ.
ಇನ್ನೂ ಹಣೆಬರಹಕ್ಕೆ ಹೊಣೆ ಯಾರು ಎಂಬಂತೆ, ಇದೇ ಸಮಯದಲ್ಲಿ ಚಂದನ್ ಜೊತೆ ಪ್ರತಾಪ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ಕೂಡ ಚಂದನ್ ಬಿಡುಗಡೆ ಮಾಡಿದ್ದಾರೆ. ಈ ಆಡಿಯೋದಲ್ಲಿ ನನ್ನನ್ನು ಕಾಂಗ್ರೆಸ್ ಗೆ ಬನ್ನಿ ಯೂತ್ ಕಾಂಗ್ರೆಸ್ ಪ್ರೆಸಿಡೆಂಟ್ ಮಾಡ್ತೀನಿ ಅಂದಿದ್ದರು ಎಂದಿರುವ ಡ್ರೋನ್ ಪ್ರತಾಪ್, ಕುಮಾರಸ್ವಾಮಿ ಕೆಟ್ಟ ಪದ ಬೈಯಬಹುದು, ಆದರೆ ಒಳ್ಳೆಯ ಮನುಷ್ಯ, ಡಿಕೆ ಶಿವಕುಮಾರ್ ಥರ ಪೇಪರ್ ಎಸೆಯೋದು ಎಲ್ಲ ಮಾಡಲ್ಲ, ಕುಮಾರಸ್ವಾಮಿ ಯಾರೇ ಹೋದ್ರು ದುಡ್ಡು ಕೊಡ್ತಾರೆ ಎಂಬ ಎಂದಿದ್ದಾರೆ ಪ್ರತಾಪ್. ಈ ಆಡಿಯೋ ಅಸಲಿಯಾ ನಕಲಿಯಾ ಅನ್ನುವುದು ಖುದ್ದು ಡ್ರೋನ್ ಪ್ರತಾಪ್ ಅವರೇ ಹೇಳಬೇಕು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.