ಬಿಗ್ ಬಾಸ್ ಪ್ರತಾಪ್ ಹುಡುಗಿ ಹೇಗಿರಬೇಕಂತೆ ಗೊ.ತ್ತಾ, ಮನಬಿಚ್ಚಿ ಮಾತನಾಡಿದ ಡ್ರೋನ್

 | 
Huh

ಕಾಂಟ್ರವರ್ಸಿಯ ಮೂಲಕವೇ ಕೆಲ ವರ್ಷ ಸುದ್ದಿಯಲ್ಲಿದ್ದ ಡ್ರೋಣ್ ಪ್ರತಾಪ್‌, ಬಿಗ್‌ ಬಾಸ್‌ಗೆ ಹೋಗಿ ಬಂದ ಮೇಲೆ ಅವರ ಚಹರೆಯೇ ಬದಲಾಯ್ತು. ಬಿಗ್‌ ಮನೆಯಲ್ಲಿ ಅವರ ನಿಜ ಸ್ವಭಾವ ಅವರನ್ನು ಫಿನಾಲೆ ವರೆಗೂ ಕರೆದುಕೊಂಡು ಬಂದಿತು. ಅಷ್ಟೇ ಅಲ್ಲ ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ರನ್ನರ್‌ ಅಪ್‌ ಆಗಿ ಮಿಂಚಿದರು ಡ್ರೋಣ್‌ ಪ್ರತಾಪ್.‌ ಶೋ ಮುಗಿದ ಬಳಿಕ ಪ್ರತಾಪ್‌ಗೆ ಪುನರ್ಜನವೇ ಸಿಕ್ಕಂತಾಗಿತ್ತು. ಅವಮಾನವಾದ ಕಡೆಯಲ್ಲಿ ಸನ್ಮಾನ ಸಿಕ್ಕವು. ಅಪ್ಪ ಅಮ್ಮ ಹತ್ತಿರವಾದರು. ಈಗ ತನ್ನ ಹುಡುಗಿ ಬಗ್ಗೆಯೂ ಹೇಳಿಕೊಂಡಿದ್ದಾರೆ ಪ್ರತಾಪ್.

ಪ್ರತಿಯೊಬ್ಬರಿಗೂ ಅವನು/ಅವಳು ಮದುವೆಯಾಗೋ ಹುಡುಗ ಅಥವಾ ಹುಡುಗಿ ಹೇಗಿರಬೇಕು ಎಂಬ ನೂರಾರು ಕನಸುಗಳಿರುತ್ತವೆ. ಆ ಕನಸಿನ ಬಗ್ಗೆಯೇ ಇದೀಗ ಡ್ರೋಣ್‌ ಪ್ರತಾಪ್‌, ವೇದಿಕೆ ಮೇಲೆ ನೆರೆದಿದ್ದ ಸಾವಿರಾರು ಜನರ ಮುಂದೆ ಹೇಳಿಕೊಂಡಿದ್ದಾರೆ. ಹೊಸಪೇಟೆಯಲ್ಲಿ ಕೆಂಡಸಂಪಿಗೆ ಸೀರಿಯಲ್‌ ಸಂತೆ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಬಿಗ್‌ಬಾಸ್‌ನ ಬಹುತೇಕರು ಭಾಗವಹಿಸಿದ್ದರು. ಪ್ರತಾಪ್‌ ಸಹ ಭಾಗವಹಿಸಿ ಡಾನ್ಸ್‌ ಮಾಡಿ ಸಂಭ್ರಮಿಸಿದ್ದಾರೆ.

ಮದುವೆಯ ಬಗ್ಗೆ ಮಾತನಾಡಿರುವ ಡ್ರೋನ್ ಪ್ರತಾಪ್, ನನ್ನ ತಂಗಿಗೆ ಮದುವೆ ಆಗಿದೆ. ನನಗೆ ಬೇಕಾದ ಹುಡುಗಿಯನ್ನ ನನ್ನ ತಂದೆ ನೋಡುತ್ತಾರೆ ಎಂದಿದ್ದಾರೆ. ಇನ್ನೂ ಹುಡುಗಿ ವಿಚಾರದಲ್ಲಿ ತೀರಾ ನಿರೀಕ್ಷೆಗಳಿಲ್ಲದೇ ಇದ್ದರೂ, ಮದುವೆಯಾಗುವ ಹುಡುಗಿ, ನನ್ನ ಬೆಂಬಲಕ್ಕೆ ಸದಾ ನಿಲ್ಲಬೇಕು, ತೀರಾ ಹಳೆಯ ಕಾಲದ ಆಲೋಚನೆಯನ್ನ ಬಿಟ್ಟು, ಈ ಕಾಲಕ್ಕೆ ಚೂರು ಅಪ್ಡೇಟ್ ಆಗಿರಬೇಕು ಎಂದಿದ್ದಾರೆ.

ಇನ್ನೂ ಸಮಾನತೆ ಬಹುಮುಖ್ಯವೆಂದಿರುವ ಡ್ರೋನ್ ಪ್ರತಾಪ್, ಮದುವೆಯಾಗುವ ಹುಡುಗಿಗೆ ಕೊಡಬೇಕಾದ ಮರ್ಯಾದೆಯನ್ನ ನಾನು ಕೊಟ್ಟೇ ಕೊಡ್ತೀನಿ ಅದರ ಜೊತೆ ಸಮಾಜದಲ್ಲಿ ಅವರು ಏನಾದರೂ ಸಾಧನೆ ಮಾಡಬೇಕೆಂದು ಬಯಸ್ತೀನಿ ಎಂದಿದ್ದಾರೆ ಡ್ರೋನ್ ಪ್ರತಾಪ್. ಇನ್ನೂ ಕೆಲಸದ ಕಡೆಗೆ ಹೆಚ್ಚು ಗಮನ ಕೊಡಬೇಕು. ಅವರಿಷ್ಟದಂತೆ ಬದುಕಬೇಕು. ಪಟಾಫಟ್ ಅಂತ ರೆಡಿಯಾಗಬೇಕೆಂಬ ಷರತ್ತುಗಳನ್ನೂ ಕೂಡ ಹಾಕಿದ್ದಾರೆ ಡ್ರೋನ್ ಪ್ರತಾಪ್. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.