ಧಮ೯ ಸ್ಥಳದಲ್ಲಿ ಯೂಟ್ಯೂಬಸ್೯ ಮೇಲೆ ಹಲ್ಲೆ, ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಬಿಗ್ ಬಾಸ್ ರಜತ್
| Aug 7, 2025, 22:15 IST
ಧರ್ಮಸ್ಥಳದ ಪಾಂಗಳ ಪ್ರದೇಶದಲ್ಲಿ ಮೂವರು ಯೂಟ್ಯೂಬರ್ಸ್ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ಕ್ಷೇತ್ರದ ಬಗ್ಗೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಯುಟ್ಯೂಬರ್ಸ್ ಮೇಲೆ ಹಲ್ಲೆ ಆಗಿದೆ. ಇದೇ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಸ್ಥಳೀಯರು ಹಲ್ಲೆ ಮಾಡಿ ಅವರ ಕ್ಯಾಮೆರಾಗಳನ್ನು ಹೊಡೆದು ಹಾಕಿದ್ದಾರೆ. ಇದೇ ವೇಳೆ ಸ್ಥಳದಲ್ಲಿ ಬಿಗ್ ಬಾಸ್ ಖ್ಯಾತಿ ರಜತ್ ಕಿಶನ್ ಇದ್ದರು. ಅಲ್ಲಿ ನಡೆದ ಘಟನೆ ಬಗ್ಗೆ ಮಾತನಾಡಿದ್ದಾರೆ.
ಇನ್ನು ಯೂಟ್ಯೂಬರ್ಸ್ ಮೇಲಿನ ಹಲ್ಲೆ ಖಂಡಿಸಿದ ನೂರಾರು ಸಂಖ್ಯೆಯಲ್ಲಿ ಯುವಕರು ಸೇರಿದ್ದರಿಂದ ಅವರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟರು. ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇನ್ನು ಹಲ್ಲೆಗೊಳಗಾದ ಯೂಟ್ಯೂಬರ್ಗಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.