ಬಿಗ್ಬಾಸ್ ಸೀಸನ್ 11ಗೆ ನಾನೇ ಆ್ಯಂಕರ್, ನಟ ರಮೇಶ್ ನೇರ ಮಾತು

 | 
ಕಾ
 ಕನ್ನಡದ ಬಿಗ್ ಬಾಸ್ ಸೀಸನ್-11ರ ಹೋಸ್ಟ್‌ ಬಗ್ಗೆ ಇನ್ನಿಲ್ಲದಂತೆ ಕುತೂಹಲ ಇದೆ. ಯಾರು ಈ ಸಲ ಹೋಸ್ಟ್ ಅನ್ನೋದರ ಮೇಲೇನೆ ಎಲ್ಲರ ಕಣ್ಣು ನಟ್ಟಿದೆ. ಮೊದಲೆಲ್ಲ ಆರಂಭದಲ್ಲಿ ಯಾರೆಲ್ಲ ಸ್ಪರ್ಧಿಗಳು ಬರ್ತಾರೆ ಅನ್ನುವ ಕುತೂಹಲ ಇರ್ತಾ ಇತ್ತು. ಈಗಲೂ ಆ ರೀತಿಯ ಒಂದು ಸಣ್ಣ ಕ್ಯೂರಿಯೊಸಿಟಿ ಇದ್ದೇ ಇದೆ. ಆದರೆ, ಹೋಸ್ಟ್ ಬಗ್ಗೇನೆ ಈಗ ಜಾಸ್ತಿ ಆಸಕ್ತಿ ಮೂಡಿದೆ. ಅದರ ಬೆನ್ನಲ್ಲಿಯೇ ಎರಡು ಹೆಸರು ಕೂಡ ಕೇಳಿ ಬರುತ್ತಿವೆ. 
ಕಿಚ್ಚ ಸುದೀಪ್ ಜಾಗಕ್ಕೆ ರಮೇಶ್ ಅರವಿಂದ್ ಹೆಸರು ಇದೆ. ಡಿವೈನ್ ಸ್ಟಾರ್ ರಿಷಬ್ ಶೆಟ್ರ ಹೆಸರು ಕೇಳ್ತಾ ಇದೆ. ಆದರೆ, ಇದೀಗ ರಮೇಶ್ ಅರವಿಂದ್ ಈ ಕುರಿತು ಒಂದು ಕ್ಲಾರಿಟಿ ಕೊಟ್ಟಿದ್ದಾರೆ. ಇದರಿಂದ ಕಿಚ್ಚನ ಜಾಗ ಸೇಫ್ ಅನ್ನೋ ಸತ್ಯವೂ ಹೊರ ಬಂದಿದೆ.ಬಿಗ್ ಬಾಸ್‌ ಚೆನ್ನಾಗಿಯೇ ಹೋಗುತ್ತಿದೆ. ಸುದೀಪ್ ಚೆನ್ನಾಗಿಯೇ ಮಾಡುತ್ತಿದ್ದಾರೆ. ಅಲ್ಲಿ ಏನೂ ತೊಂದರೆ ಇಲ್ಲ. ಎಲ್ಲವೂ ಚೆನ್ನಾಗಿಯೇ ಇದೆ. ಹಾಗಾಗಿದ್ದಾಗ ನಾನು ಯಾಕೆ..? ಅನ್ನೋ ಅರ್ಥದಲ್ಲಿಯೇ ರಮೇಶ್ ಅರವಿಂದ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಬಿಗ್ ಬಾಸ್ ಹೋಸ್ಟ್ ಮಾಡೋ ವಿಚಾರದಲ್ಲಿ ಯಾವುದೇ ಆಫರ್ ಬಂದಿಲ್ಲ. ಮತ್ಯಾವುದೋ ರೀತಿಯ ಟಾಕ್ ಕೂಡ ಆಗಿಲ್ಲ. ಹಾಗೆ ನನ್ನ ದಾರಿನೇ ಬೇರೆ ಇದೆ. ಪ್ರೀತಿಯಿಂದ ರಮೇಶ್, ವೀಕೆಂಡ್ ವಿತ್ ರಮೇಶ್ ಹೀಗೆ ಬೇರೆ ರೀತಿಯ ಶೋಗಳನ್ನ ಮಾಡಿಕೊಂಡು ಬಂದಿದ್ದೇನೆ. ಆದರೆ, ಬಿಗ್ ಬಾಸ್ ಮಾಡೋ ಪ್ಲಾನ್ ಏನೂ ಇಲ್ಲ.ಹಾಗೆ ಈ ಬಗ್ಗೆ ಯಾವುದೇ ರೀತಿಯ ಆಫರ್ ಕೂಡ ಬಂದಿಲ್ಲ. ಈ ಕುರಿತು ಚರ್ಚೆಗಳೂ ಕೂಡ ಆಗಿಲ್ಲ ಎಂದು ರಮೇಶ್ ಅರವಿಂದ್ ಹೇಳಿದ್ದಾರೆ. ಅಲ್ಲಿಗೆ ಬಿಗ್ ಬಾಸ್ ಹೋಸ್ಟ್ ರೇಸ್‌ನಲ್ಲಿ ರಮೇಶ್ ಅರವಿಂದ್ ಅವರು ಯಾವ ಅರ್ಥದಲ್ಲೂ ಇಲ್ವೇ ಇಲ್ಲ ಅನ್ನೋದು ಕ್ಲಿಯರ್ ಆಗಿದೆ ನೋಡಿ.
ರಿಷಬ್‌ ಶೆಟ್ರು ಬಿಗ್ ಬಾಸ್ ಹೋಸ್ಟ್ ಮಾಡ್ತಾರಾ? ಈ ಒಂದು ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ ಬಿಡಿ. ಪ್ರ್ಯಾಕ್ಟಿಕಲಿ ಇದು ಸಾಧ್ಯವೇ ಅನ್ನುವ ಪ್ರಶ್ನೆ ಕೂಡ ಇದೆ. ಯಾಕೆಂದ್ರೆ, ಶೆಟ್ರು ತಮ್ಮ ಕಾಂತಾರ ಚಾಪ್ಟರ್ ಒನ್ ಚಿತ್ರದ ಕೆಲಸದಲ್ಲಿಯೇ ಬ್ಯುಸಿ ಆಗಿದ್ದಾರೆ. ಅಲ್ಲಿಂದ ಬಿಡುವು ಮಾಡಿಕೊಂಡು ಈ ಶೋ ನಡೆಸಿಕೊಡ್ತಾರೆ ಅನ್ನೋದ ಬಹುತೇಕ ಡೌಟ್ ಅನಿಸುತ್ತದೆ.
ಹೆಚ್ಚು ಕಡಿಮೆ ಮೂರು ತಿಂಗಳೂ ನಡೆಯೋ ಈ ಶೋದ ಪ್ರತಿವಾರದ ಸಂಚಿಕೆಗಳನ್ನ ನೋಡಬೇಕಾಗುತ್ತದೆ. ಅದನ್ನ ನೋಡಿ ಎಲ್ಲವನ್ನೂ ನಿರ್ಧರಿಸಬೇಕಾಗುತ್ತದೆ. ಅದನ್ನ ಕಿಚ್ಚ ಸುದೀಪ್ ತುಂಬಾನೆ ಚೆನ್ನಾಗಿಯೇ ಮಾಡಿಕೊಂಡು ಬಂದಿದ್ದಾರೆ. ಆದರೆ, ಹೊಸಬರು ಹೇಗೆ ಮಾಡುತ್ತಾರೆ ಅನ್ನುವ ಪ್ರಶ್ನೆ ಕೂಡ ಇವೆ. ಹಾಗಾಗಿ ಕಿಚ್ಚನೆ ನಡೆಸಿಕೊಡ್ತಾರೆ ಎನ್ನಲಾಗುತ್ತಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.