ಬಿಗ್ ಬಾಸ್ ಸೀಸನ್ 12 ರ ಸ್ಪರ್ಧಿಗಳ ಪಟ್ಟಿ ಬಿಡುಗಡೆ, ಈ‌ ಬಾರಿ ವೀಕ್ಷಕರಿಗೆ ಭರ್ಜರಿ ಹಬ್ಬದೂಟ

 | 
Js
ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಕ್ಕೆ ಶೀಘ್ರದಲ್ಲೇ ಸಕಲ ಸಿದ್ಧತೆಗಳು ಶುರುವಾಗಲಿವೆ. ಸೆಪ್ಟೆಂಬರ್‌ ತಿಂಗಳಿನಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶುರುವಾಗುವ ನಿರೀಕ್ಷೆಯಿದೆ.ಈ ಬಾರಿ ಕನ್ನಡ ಬಿಗ್‌ ಬಾಸ್‌ ಮನೆ ಸೇರಬಹುದಾದ ಯಾರು ಸ್ಪರ್ಧಿಗಳು ಯಾರು? ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆ ಶುರುವಾಗಿದೆ. ಈಗಾಗಲೇ ಕೆಲವರು ತಮ್ಮ ಫೇವರೆಟ್ ಸ್ಪರ್ಧಿಗಳು ಇವರು ಎಂದು ಹೇಳಿದ್ದಾರೆ.
ಹೌದು, ಬಿಗ್‌ ಬಾಸ್‌ ಕನ್ನಡ ಸೀಸನ್ 11 ರಲ್ಲಿ ವೀಕ್ಷಕರು ಅಂದುಕೊಂಡತೇ ಹನುಮಂತ ಗೆದ್ದು ಬೀಗಿದ್ದಾನೆ. ತ್ರಿವಿಕ್ರಮ್ ರನ್ನರ್ ಅಪ್ ಆಗಿದ್ದಕ್ಕೆ ಖುಷಿಯಾಗಿದ್ದಾರೆ. ಎಲ್ಲ ಖುಷಿ ಖುಷಿಯಾಗಿರುವಾಗಲೇ ಕಿಚ್ಚ ಸುದೀಪ್ ಅಭಿಮಾನಿಗಳು ಮಾತ್ರ ಬೇಸರದಲ್ಲಿದ್ದಾರೆ. ಈ ಹಿಂದೆ ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆ ಮಾಡುವುದು ಇದೇ ಕೊನೆ ಎಂದು ಈಗಾಗಲೇ ಹೇಳಿದ್ದಾರೆ. ಶೋ ಮುಗಿಯುವುದಕ್ಕೂ ಮುನ್ನವೇ ಮತ್ತೊಮ್ಮೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಇಷ್ಟೆಲ್ಲ ಹೇಳಿದ ಮೇಲೆ ಮತ್ತೆ ಬಿಗ್ ಬಾಸ್ ನಿರೂಪಣೆ ಮಾಡುವುದ ಅನುಮಾನ ಅನ್ನೋದು ಎಲ್ಲರಿಗೂ ಗೊತ್ತಿದೆ.
ಬಿಗ್‌ ಬಾಸ್‌ ಕನ್ನಡ ಆರಂಭವಾದಗಿನಿಂದ 11 ನೇ ಸೀಸನ್‌ ವರೆಗೂ ಈ ರಿಯಾಲಿಟಿ ಶೋ ನಿರೂಪಣೆಯನ್ನು ಸುದೀಪ್ ಬಿಟ್ಟರೆ ಬೇರೆ ಯಾರನ್ನೂ ನಡೆಸಿಕೊಟ್ಟಿಲ್ಲ. ಇನ್ನೂ ಈ ಜಾಗದಲ್ಲಿ ನಟ ಕಿಚ್ಚ ಸುದೀಪ್‌ ಅವರನ್ನ ಬಿಟ್ಟರೇ ಬೇರೆ ಯಾರನ್ನೂ ಕಿರುತೆರೆ ವೀಕ್ಷಕರು ಕೂಡ ಬೇರೆ ಊಹಿಸಿಕೊಂಡಿಲ್ಲ. ಆದರೆ ಮುಂದಿನ ಸೀಸನ್‌ ನಿರೂಪಣೆ ಮಾಡೋದು ಯಾರು? ಎನ್ನುವ ಪ್ರಶ್ನೆಗಳಿಗೆ ಕಲರ್ಸ್ ಕನ್ನಡದ ನಾನ್ ಫಿಕ್ಷನ್ ಹೆಡ್ ಪ್ರಕಾಶ್ ಪತ್ರಿಕಾಗೋಷ್ಠಿಯಲ್ಲಿ ಈ ಹಿಂದೆ ಉತ್ತರವನ್ನ ಕೊಟ್ಟಿದ್ದರು. 
ಸುದೀಪ್‌ ಹತ್ತನೇ ಸೀಸನ್ ಮುಗಿಯುತ್ತಿದ್ದಂತೆ ಸಾಕು ಎಂದು ಕೊಂಡಿದ್ದರು. ಹತ್ತು ಸೀಸನ್ ಸಾಕು. ಕೆಲಸ ಒಂದೇ ತರ ಅನಿಸುತ್ತಿದೆ ಎಂದು ಹೇಳಿದ್ದರಂತೆ. ಆದರೆ, ಕಲರ್ಸ್ ಕನ್ನಡ ತಂಡವೇ ಅವರನ್ನು ಒಪ್ಪಿಸಿ ಸೀಸನ್ 11ಕ್ಕೆ ಕರೆದುಕೊಂಡಿದ್ದಾಗಿ ಹೇಳಿದ್ದಾರೆ. ಬಿಗ್ ಬಾಸ್ ಸೀಸನ್ 12ಕ್ಕೆ ಅವರನ್ನು ಕರೆದುಕೊಂಡು ಬರುತ್ತೇವೆ ಎಂದು ಕಲರ್ಸ್ ಕನ್ನಡದ ನಾನ್ ಫಿಕ್ಷನ್ ಹೆಡ್ ಪ್ರಕಾಶ್ ಹೇಳಿದ್ದಾರೆ.
ಗಿಲ್ಲಿ ನಟ, ಪ್ರಿಯಾ ಸವದಿ, ಅಮೃತಾ ರಾಮ ಮೂರ್ತಿ, ಧನುಷ್‌, ಸೂರಜ್‌, ಪಾಯಲ್‌ ಚಂಗಪ್ಪ ಸೇರಿದಂತೆ ಇನ್ನೂ ಹಲವರು ಹೆಸರು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.  ಇತ್ತೀಚಿನ ದಿನಗಳಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆಕೊಂಡಿರುವ ರೇಷ್ಮಾ ಅವರು ಬಿಗ್‌ ಬಾಸ್‌ ಮನೆಗ ಬಂದರೇ ಹೇಗಿರುತ್ತದೆ ಎಂದು ವೀಕ್ಷಕರು ಮಾತನಾಡುತ್ತಿದ್ದಾರೆ. 
ರೇಷ್ಮಾ ಜೊತೆಗೆ ನವೀನ್‌ ಅವರು ಹಲವು ಕನ್ನಡ ಸಾಂಗ್‌ ಗಳಿಗೆ ರೀಲ್ಸ್‌ ಮಾಡುತ್ತಾ, ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದಾರೆ. ಇದೀಗ ಇವರಿಬ್ಬರು ಬಿಗ್‌ ಬಾಸ್‌ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.