ಬಿಗ್ ಬಾಸ್ ಸ್ನೇಹಿತ್ ಅದ್ದೂರಿ ಮದುವೆ; ತಲೆ‌ಮೇಲೆ ಕೈ ಇಟ್ಟ ನಮ್ರತಾ ಗೌಡ

 | 
Gv

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​​ಬಾಸ್​ ಸೀಸನ್​ 10ರ ಸ್ಪರ್ಧಿಯಾಗಿದ್ದ ಸ್ನೇಹಿತ್​ ಗೌಡ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​​ ಆಗುತ್ತಿವೆ. ಬಿಗ್​ಬಾಸ್​ ಸೀಸನ್​ 10ಕ್ಕೆ ಗ್ರ್ಯಾಂಡ್​ ಆಗಿ ಎಂಟ್ರಿ ಕೊಟ್ಟಿದ್ದ ಸ್ನೇಹಿತ್​ ಯಾರಿಗೂ ಗೊತ್ತಿಲ್ಲದಂತೆ ಮದುವೆಯಾದ್ರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ಹೌದು, ಬಿಗ್​ಬಾಸ್​ ಸ್ಪರ್ಧಿಯಾದ ಸ್ನೇಹಿತ್​ ಗೌಡ ಅವರು ಮದುವೆ ವಸ್ತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಯುವತಿಯ ಕೊರಳಿಗೆ ಹಾರವನ್ನು ಹಾಕುತ್ತಿರೋ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.ಇನ್ನೂ ಸ್ನೇಹಿತ್​ ಗೌಡ ಅವರು  ನಮ್ಮ ಮನೆ ಯುವರಾಣಿ ಸೀರಿಯಲ್​ನಲ್ಲಿ ನಟಿಸುತ್ತಿದ್ದರು. 

ಈ ಸೀರಿಯಲ್​ನಲ್ಲಿ ಸ್ನೇಹಿತ್​ ಗೌಡ ಮದುವೆಯಾಗಿದ್ದರು. ಇದೇ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ನಿಜವಾಗಲು ಸ್ನೇಹಿತ್​ ಗೌಡ ಅವರ ಮದುವೆ ಆಯ್ತಾ ಎಂದು ಭಾವಿಸುತ್ತಿದ್ದಾರೆ. ಆದರೆ ಸ್ನೇಹಿತ್​ ಗೌಡ ಅವರು ಮದುವೆಯಾಗಿಲ್ಲ. ಇದು ಕೇವಲ ಸೀರಿಯಲ್​ನ ಶೂಟಿಂಗ್​ನಲ್ಲಿ ನಡೆದ ಮದುವೆ ಕಾರ್ಯಕ್ರಮವಾಗಿದೆ.

ಇನ್ನು ಸ್ನೇಹಿತ್ ಬಿಗ್ ಬಾಸ್ ಮನೆಯಲ್ಲಿ ಇರಬೇಕಾದಲೇ ಕಾರ್ತಿಕ್ ಮಹೇಶ್ ಅವರು ಬೇಕಂತಲೇ ನಮ್ರತಾ ಅವರನ್ನು ಆಗಾಗ ಪ್ಲರ್ಟ್ ಮಾಡುತ್ತಿದ್ದರು. ಸ್ನೇಹಿತ್ ಮನೆಯಿಂದ ಹೊರ ನಡೆದ ನಂತರ ನಮ್ರತಾ ಮತ್ತು ಕಾರ್ತಿಕ್ ಅವರು ಹೆಚ್ಚು ಸಮಯ ಒಟ್ಟಿಗೆ ಕಳೆಯುತ್ತಿದ್ದರು. ಇವರಿಬ್ಬರ ಜೋಡಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದರು.

 ಕಾರ್ತಿಕ್ ಹಾಗೂ ನಮ್ರತಾ ಬಹಳ ಕ್ಲೋಸ್ ಆಗಿ ಇದ್ದರು. ಇದು ಸ್ನೇಹಿತ್ ಅವರಲ್ಲೂ ಬೇಸರ ಮೂಡಿಸಿತ್ತು. ಈ ವಿಚಾರಕ್ಕೆ ಮನೆಯಲ್ಲಿ ವಿನಯ್ ಕೂಡ ಆಗಾಗ ನಮ್ರತಾ ಅವರನ್ನು ರೇಗಿಸುತ್ತಿದ್ದರು. ಇನ್ನು ಬಿಗ್ ಬಾಸ್ ಮನೆಯಿಂದ ಹೊರ ನಡೆದ ಬಳಿಕ ನಮ್ರತಾ, ಸ್ನೇಹಿತ್, ವಿನಯ್, ಕಾರ್ತಿಕ್, ತನಿಷಾ ಎಲ್ಲರೂ ಕೂಡ ಒಂದೆರಡು ಬಾರಿ ಭೇಟಿಯಾಗಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.