ಬಿಗ್ ಬಾಸ್ ಟ್ರೋಫಿ ನನ್ನ ಕೈ ಸೇರಬೇಕು, ಅಪ್ಪನಿಗೆ ಆಪರೇಷನ್ ಇದೆ, ಅಕ್ಕನಿಗೆ ಮದುವೆ ಇದೆ ಎಂದು ಕಣ್ಣಿರು ಹಾಕಿದ ಭವ್ಯಾ
Jan 23, 2025, 06:54 IST
|

ಸ್ನೇಹಿತರೇ... ಈ ಆರು ಮಂದಿ ಪೈಕಿ ಒಬ್ಬರಿಗೆ ಮಾತ್ರ ಬಿಗ್ಬಾಸ್ ಟ್ರೋಫಿ ಕೈಸೇರಲಿದೆ. ಕಿಚ್ಚನ ಕೈಯಿಂದ ಟ್ರೋಫಿ ಎತ್ತಿ ಹಿಡಿಯೋರು ಯಾರು ಅನ್ನೋದು ವೀಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಹೀಗಾಗಿ ವೀಕ್ಷಕರು ಮುಂದಿನ ಶನಿವಾರ ಹಾಗೂ ಭಾನುವಾರ ನಡೆಯಲಿರುವ ಫಿನಾಲೆಗಾಗಿ ಕಾದು ಕೂತಿದ್ದಾರೆ.
ಸ್ನೇಹಿತರೇ...ಇದರ ಮಧ್ಯೆ ಸ್ಪರ್ಧಿಗಳ ಕಣ್ಣು ಮುಂದೆ ಬಿಗ್ಬಾಸ್ ಸೀಸನ್ 11ರ ಟ್ರೋಫಿಯನ್ನು ತಂದು ಇಟ್ಟಿದ್ದಾರೆ. ಕೈಯಲ್ಲಿ ಹಿಡಿಯಲಿರೋ ಟ್ರೋಫಿ ನೋಡೋ ಅವಕಾಶ ಇದಾಗಿದೆ. ಇದರ ಮುಂದೆ ಕುಳಿತು ಮನದ ಮಾತುಗಳನ್ನ ಹೇಳುವ ಅವಕಾಶ ಕೂಡ ಇದಾಗಿದೆ ಎಂದಿದ್ದಾರೆ. ಬಿಗ್ಬಾಸ್ ಮಾತನ್ನು ಕೇಳಿ ಮನೆ ಮಂದಿ ಫುಲ್ ಶಾಕ್ ಆಗಿದ್ದಾರೆ.
ಸ್ನೇಹಿತರೇ...ಮೊದಲು ಟ್ರೋಫಿ ನೋಡಲು ಌಕ್ಟಿವಿಟಿ ರೂಂಗೆ ಹೋಗಿದ್ದಾರೆ. ಬಿಗ್ಬಾಸ್ ಟ್ರೋಫಿಯನ್ನು ಅಷ್ಟು ಹತ್ತಿರದಿಂದ ನೋಡಿ ಮೋಕ್ಷಿತಾ ಫುಲ್ ಶಾಕ್ ಆಗಿದ್ದಾರೆ. ಅಲ್ಲದೇ ಮಾತಾಡುತ್ತಾ ಕಣ್ಣೀರು ಸಹ ಹಾಕಿದ್ದಾರೆ. ಇನ್ನೂ, ಟ್ರೋಫಿ ನೋಡುತ್ತಾ ಮಾತಾಡಿದ ಮೋಕ್ಷಿತಾ, ಬಿಗ್ಬಾಸ್ ಯೋಚನೆನೇ ನನ್ನ ತಲೆಯಲ್ಲಿ ಇರಲಿಲ್ಲ. ನಟನೆ ಕಡೆ ನನಗೆ ಆಸಕ್ತಿ ಇತ್ತು. ಬಿಗ್ಬಾಸ್ಗೆ ಹೋಗಬೇಕು ಅನ್ನೋದು ಅಮ್ಮನ ಕನಸ್ಸಾಗಿತ್ತು. ಅವರ ಕನಸ್ಸನ್ನು ಈಡೇಸಬೇಕು ಅಂತ ನಾನು ಇಲ್ಲಿಗೆ ಬಂದಿದ್ದೀನಿ. ದೇವರ ಹಾಗೂ ಜನರ ಆರ್ಶೀವಾದದಿಂದ ನಾನು ಇಲ್ಲಿಗೆ ಬಂದಿದ್ದೀನಿ ಎಂದು ಕಣ್ಣೀರು ಹಾಕಿದ್ದಾರೆ.
ಇನ್ನು ಜೀವನಲ್ಲಿ ತುಂಬ ಆಸೆ ಕೈ ತಪ್ಪಿ ಹೋಗಿತ್ತು. ಈ ಶೋನಿಂದ ನನಗೆ ಆರ್ಥಿಕವಾಗಿ ಸಹಾಯ ಆಗುತ್ತದೆ ಎಂಬ ಆಲೋಚನೆಯಲ್ಲೇ ನಾನು ಬಂದಿದ್ದು. ವಯಸ್ಸಿಗೂ ಮೀರಿ ಜವಾಬ್ದಾರಿ ನಿಭಾಯಿಸಿದ್ದೀನಿ. ದೊಡ್ಡವರಿಗೆ ಪೈಪೋಟಿ ನೀಡಿ ಫಿನಾಲೆಗೆ ಬಂದಿದ್ದೇನೆ. ಅಪ್ಪ, ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಇಷ್ಟು ವರ್ಷ ಅವರು ನಮಗಾಗಿ ದುಡಿದಿದ್ದಾರೆ. ನಾನು ದುಡಿದು ಅವರನ್ನು ಮನೆಯಲ್ಲಿ ಆರಾಮಾಗಿ ಇರುವಂತೆ ನೋಡಿಕೊಳ್ಳಬೇಕು’ ಎಂದು ಭವ್ಯಾ ಗೌಡ ಹೇಳಿದ್ದಾರೆ...
ಇನ್ನು ಹನುಮಂತ ಅವರು ಟ್ರೋಫಿ ಮೇಲೆ ಹೆಚ್ಚು ಏನನ್ನೂ ಮಾತನಾಡಲಿಲ್ಲ. ಸ್ವಾರ್ಥದ ಬೇಡಿಕೆಯನ್ನೂ ಇಡಲಿಲ್ಲ. ‘ನಿನ್ನ ಆಶೀರ್ವಾದ ಇರಲಿ ತಾಯಿ. ನನಗೆ ಕಪ್ ನೋಡಿ ಮಾತು ಬರುತ್ತಿಲ್ಲ. ಎಲ್ಲರೂ ಮನೆಯಲ್ಲಿ ಚೆನ್ನಾಗಿ ಆಟ ಆಡಿದ್ದಾರೆ. ಯಾರಿಗೆ ಸೇರಬೇಕೋ ಅವರಿಗೆ ಕಪ್ ಸೇರಲಿ’ ಎಂದು ಅವರು ಹೇಳಿದರು. ಸ್ನೇಹಿತರೇ ತ್ರಿವಿಕ್ರಮ್ ಅವರು ಟ್ರೋಫಿ ಮುಂದೆ ಕುಳಿತು ಮಾತನಾಡಿದರು. ನಾಟಕದಿಂದ ನಿನ್ನನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ. ಯೋಗ್ಯತೆ ಇರುವವರಿಗೆ ಮಾತ್ರ ಟ್ರೋಫಿ ಹೋಗೋದು. ಡ್ರೈವರ್ ಮಕ್ಕಳನ್ನು ಎಲ್ಲರೂ ಚಿಕ್ಕದಾಗಿ ನೋಡಿದ್ದರು. ನಾನು ಸ್ಟಾರ್ ಆಗಿ ಬೆಳೆಯಬೇಕು’ ಎಂದು ತ್ರಿವಿಕ್ರಮ್ ಹೇಳಿ ಗೆಲುವಿನ ಆಸೆಯನ್ನು ಹೊರಹಾಕಿದ್ದಾರೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Thu,13 Mar 2025