ಅಕ್ಕ ಅನುಗೆ ತೊಂದ್ರೆ ಕೊಡ್ಬೇಡಿ, ಸರಿ ಇರಲ್ಲ, ರೊಚ್ಚಿಗೆದ್ದ ಬಿಗ್ಬಾಸ್ ವಿನಯ್ ಗೌಡ

 | 
ಗ್ಗಾ

ಸೋಷಿಯಲ್‌ ಮೀಡಿಯಾದ ಬೆಳೆದಂತೆ, ಧನಾತ್ಮಕ ಪರಿಣಾಮ ಬೀರಿದಷ್ಟೇ ನೆಗೆಟಿವಿಟಿಯ ಪ್ರಭಾವವೂ ಹೆಚ್ಚಾಗಿದೆ. ಹೊಗಳುವವರು ಒಂದೆಡೆಯಾದರೆ, ಟೀಕಿಸುವವರೂ ಇಲ್ಲಿದ್ದಾರೆ. ಅದರಲ್ಲೂ ಇಲ್ಲ ಸಲ್ಲದ ಪದ ಬಳಕೆಯೂ ಇಲ್ಲಿ ಎಲ್ಲವೂ ನೇರಾನೇರ! ನಕಲಿ ಖಾತೆಗಳ ಮೂಲಕ ಅಥವಾ ಫೇಕ್‌ ಹೆಸರಿನ ಮೂಲಕ ಜಾಲತಾಣಗಳಲ್ಲಿ ನಿಂದಿಸುವವರ ಸಂಖ್ಯೆಗೇನು ಕಡಿಮೆಯಿಲ್ಲ. 

ಇದೀಗ ತನ್ನ ಸಹೋದರಿಗೆ ನಿಂದಿಸಿದವರಿಗೆ ಸರಿಯಾಗಿಯೇ ವಾರ್ನಿಂಗ್‌ ಮಾಡಿದ್ದಾರೆ ಬಿಗ್‌ ಬಾಸ್‌ ಖ್ಯಾತಿಯ ವಿನಯ್‌ ಗೌಡ.ವಿನಯ್‌ ಗೌಡ ಎಷ್ಟು ಅಗ್ರೆಸ್ಸಿವ್‌ ಎಂಬುದು ಅವರನ್ನು ಬಿಗ್‌ಬಾಸ್‌ನಲ್ಲಿ ನೋಡಿದವರಿಗೆ ಗೊತ್ತಿರುತ್ತದೆ. ಒಳ್ಳೆಯ ವಿಚಾರಕ್ಕೆ ಪ್ರೀತಿಯಿಂದಲೇ ಪ್ರತಿಕ್ರಿಯಿಸುವ ಅವರು, ತಮ್ಮ ವಿರುದ್ಧ ಬಂದವರಿಗೆ ಮಾತಲ್ಲೇ ತಿವಿದ ಸಾಕಷ್ಟು ಉದಾಹರಣೆಗಳಿವೆ.

 ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗಿರುವ, ಸಾಮಾಜಿಕ ಕಳಕಳಿಯ ಕೆಲಸಗಳತ್ತ ತೊಡಗಿಸಿಕೊಂಡಿರುವ ಅಕ್ಕ ಅನು ಬಗ್ಗೆಯೂ ಕೆಲವರು ನೆಗೆಟಿವ್‌ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ವಿಚಾರ ವಿನಯ್‌ ಗೌಡ ಅವರ ಗಮನಕ್ಕೆ ಬರುತ್ತಿದ್ದಂತೆ, ಅಕ್ಕ ಅನು ಬೆನ್ನಿಗೆ ನಿಂತಿದ್ದಾರೆ.ಕರ್ನಾಟದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳ ಕುರಿತು ನಡೆಯುವ ಕೆಟ್ಟ ಟ್ರೋಲ್‌ಗಳು ಹಾಗೂ ಪೇಡ್ ಪ್ರಚಾರಗಳು ನಿಷೇಧವಾಗಬೇಕು.

 ಸೋಷಿಯಲ್‌ ಮೀಡಿಯಾ ಎಂಬ ಕಾರಣಕ್ಕೆ ಯಾರ್ಯಾರನ್ನೋ ಕೆಟ್ಟದಾಗಿ ಬಿಂಬಿಸಲಾಗುತ್ತಿದೆ. ಮರ್ಯಾದೆ ಹತ್ಯೆಯಾಗುವಂತ ಪ್ರಕರಣಗಳು ನಿಲ್ಲಬೇಕು. ಈ ರೀತಿಯ ಕೆಟ್ಟತನವೇ ಹೆಚ್ಚಾಗುತ್ತ ಹೋದರೆ, ಸ್ವಹತ್ಯೆಗಳು ಆಗುವುದು ಖಂಡಿತ. ಇನ್ನೊಬ್ಬರ ಬಗ್ಗೆ ಗೊತ್ತಿಲ್ಲದಿದ್ದರೂ, ಅವರ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುವ ಮನಸ್ಥಿತಿ ನಾಶವಾಗಬೇಕು ಎಂದು ಕೆಚ್ಚೆದೆಯ ಕನ್ನಡತಿ ಅಕ್ಕ ಅನು ವಿಡಿಯೋ ಶೇರ್‌ ಮಾಡಿ ಕಣ್ಣೀರಿಟ್ಟಿದ್ದರು.

ಅಕ್ಕ ಅನು ಅಪ್‌ಲೋಡ್‌ ಮಾಡಿರೋ ವಿಡಿಯೋ ನೋಡಿ ಸಿಕ್ಕಾಪಟ್ಟೆ ಬೇಜಾರಾಯ್ತು. ಅಕ್ಕ ಅನು ಒಳ್ಳೊಳ್ಳೆ ಕೆಲಸ ಮಾಡ್ತಿದ್ದಾರೆ. ಸರ್ಕಾರಿ ಶಾಲೆಗಳನ್ನು ಬೆಳೆಸಲು ತಾವೇ ಹಣ ಹಾಕಿ ಸೇವೆ ಮಾಡ್ತಿದ್ದಾರೆ. ಅವರ ಆರೋಗ್ಯ ಸರಿಯಿಲ್ಲದಿದ್ದರೂ ನಮ್ಮ ಮಕ್ಕಳ ಭವಿಷ್ಯಕ್ಕೋಸ್ಕರ ಈ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಈ ಕಾಮೆಂಟ್‌ ಮಾಡೋದು, ಕೆಟ್ಟದಾಗಿ ಬೈಯೋದು. ಅಸಭ್ಯವಾಗಿರೋ ಪದಗಳನ್ನು ಬಳಕೆ ಮಾಡೋದು. ಇದರಿಂದ ಏನು ಸಿಗುತ್ತೆ ನಿಮಗೆ? ನಾನು ಹೇಳ್ತಿರೋದು ಈ ಫೇಕ್‌ ಪ್ರೋಫೈಲ್‌ ಇಟ್ಟುಕೊಂಡು ಕಾಮೆಂಟ್‌ ಮಾಡ್ತಾರಲ್ಲ ಅವರ ಬಗ್ಗೆ ಎಂದಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.