ಬಿಗ್ ಬಾಸ್ ವಿನಯ್ ಗೌಡ ಅವರು ‌ನಿಜ ಜೀವನದಲ್ಲಿ ಏನಾಗಿದ್ದರು ಗೊ.ತ್ತಾ

 | 
ರಪ

ಅವರು ಸನ್ಯಾಸಿ ಆಗಲು ಹೋಗಿ ಸಂಸಾರಿ ಆದವರು ಹೌದು ಬಿಗ್ ಬಾಸ್ ಮನೆಯಲ್ಲಿ ಟಫ್ ಕಾಂಪಿಟೇಟರ್ ಅನಿಸಿ ಕೊಂಡ ವಿನಯ್ ಗೌಡ ಅವರ ಬದುಕಿನ ಕಥೆ. ವಿನಯ್ ಗೌಡರವರ ಪತ್ನಿಯ ಹೆಸರು ಅಕ್ಷತಾ, ವಿನಯ್ ಗೌಡರವರ ಅತ್ತೆ ಮಗಳೆ ಅಕ್ಷತಾ ಗೌಡ ಇವರು. ಚಿಕ್ಕವಯಸ್ಸಿನಿಂದಲೇ ಸ್ನೇಹಿತರಾಗಿ ನಂತರ ಸ್ನೇಹ, 
ಪ್ರೀತಿಗೆ ತಿರುಗಿ ಮದುವೆ ಮಾಡಿಕೊಂಡವರು. 

ಕುಟುಂಬದವರಾದ್ದರಿಂದ ಕೆಲವು ಭಿನ್ನಾಭಿಪ್ರಾಯಗಳಿಂದ ಅವರ ಮನೆಗಳಲ್ಲಿ ವಿನಯ್ ಗೌಡ ಹಾಗೂ ಅಕ್ಷತಾ ಮದುವೆಗೆ ಒಪ್ಪಿಗೆ ಸಿಗದೆ, ವಲ್ಲದ ಮನಸ್ಸಿನಿಂದಲೇ ಅವರ ಮದುವೆಯಾಯಿತು. ಅಕ್ಷತಾ ಗೌಡರವರ ಅಕ್ಕ ಕೂಡ ಕನ್ನಡ ಕಿರುತೆರೆಯ ಜನಪ್ರಿಯ ನಟಿ ಅವರೇ ನಿಶ್ಚಿತ ಗೌಡ. ವಿನಯ್ ಗೌಡರವರಿಗೆ ವಿನಿ ಅಥವಾ ವಿನು ಎಂಬ ಹೆಸರಿನಿಂದ ಕರೆಯುತ್ತಾರೆ. 

ವಿನಯ್ ಗೌಡರವರು ತಮ್ಮ ಪ್ರೌಢಶಿಕ್ಷಣವನ್ನು 1997 ರಂದು ಅನ್ನಸ್ ಹೈಸ್ಕೂಲ್ ರಾಜಾಜಿನಗರ ಬೆಂಗಳೂರಿನಲ್ಲಿ ಮುಗಿಸಿದ್ದಾರೆ. ನಂತರ ಕಾಲೇಜ್ ಶಿಕ್ಷಣವನ್ನು ಕೆಎಲ್ಇ ನಿಜಲಿಂಗಪ್ಪ ಕಾಲೇಜಿನಲ್ಲಿ ಮುಗಿಸಿದ್ದಾರೆ. ವಿನಯ್ ಗೌಡ ಅವರೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಂತೆ ಅವರಿಗೆ ಕಾಲೇಜ್ ದಿನಗಳಲ್ಲಿ ಧೂಮಪಾನವನ್ನು ಮಾಡುತ್ತಿದ್ದರಂತೆ ಒಂದು ದಿನ ಅವರ ಅಮ್ಮನೊಂದಿಗೆ ಸಿಕ್ಕಿಹಾಕಿ ಕೆನ್ನೆಯ ಮೇಲೆ ಹೊಡೆತವನ್ನು ಕೂಡ ತಿಂದಿದ್ದರಂತೆ ಹಾಗೆ ನಂತರ ಧೂಮಪಾನವನ್ನು ಮಾಡುವುದು ಬಿಟ್ಟಿದ್ದರಂತೆ.

ಅವರಿಗೆ ಪಾರ್ಟಿಗಳಲ್ಲಿ ಮಧ್ಯಪಾನವನ್ನು ಕೂಡ ಮಾಡುವ ಅಭ್ಯಾಸವಿತಂತೆ. ವಿನಯ್ ಗೌಡ ರವರು 21ನೇ ವಯಸ್ಸಿಗೆ ತಂದೆಯ ಜೊತೆ ಜಗಳ ಮಾಡಿಕೊಂಡು ಮನೆಯಿಂದ ದೂರವಾಗಿ ಮುಂಬೈಗೆ ತಮ್ಮ ಪ್ರಯಾಣವನ್ನು ಬೆಳೆಸುತ್ತಾರೆ. ಮುಂಬೈಗೆ ಹೋದಾಗ ಏನು ಮಾಡಬೇಕೆಂದು ತೋಚದೆ ಜೀವನಕ್ಕಾಗಿ ಹೋಟೆಲ್ ಒಂದರಲ್ಲಿ ಮ್ಯಾನೇಜರ್ ಆಗಿ ತಮ್ಮ ಕೆಲಸವನ್ನು ಪ್ರಾರಂಭಿಸುತ್ತಾರೆ ನಂತರದ ದಿನಗಳಲ್ಲಿ ತಮ್ಮ ನಟನೆಯ ಜೀವನವನ್ನು ಪ್ರಾರಂಭಿಸುತ್ತಾರೆ.

ವಿನಯ್ ಗೌಡ ರವರು ಅತಿ ವೈಭೋಗದಲ್ಲಿಯೂ ಅಲ್ಲ ಮತ್ತು ಅತ್ಯಂತ ಬಡತನದಲ್ಲಿಯೂ ಅಲ್ಲದೆ ಮಧ್ಯಮ ಕುಟುಂಬದಲ್ಲಿ ಜನಿಸಿದವರು. ಇವರ ತಂದೆಯವರು ಕೊಡು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದರು ಇವರ ಚಿಕ್ಕಪ್ಪ ಚಿಕ್ಕಮ್ಮ ಕುಟುಂಬದಲ್ಲಿ ಹಲವಾರು ಜನ ಚಿತ್ರರಂಗದಲ್ಲಿಯೇ ಕೆಲಸ ಮಾಡುತ್ತಿದ್ದರು. ಇವರಿಗೆ ಇವರು ನಟಿಸಿದ ಅಂಬಾರಿ, ಅಮ್ಮ , ಬಯಸದೆ ನೀ ಬಳಿ ಬಂದೆ ಧಾರಾವಾಹಿ ಒಂದಿಷ್ಟು ಜನಪ್ರಿಯತೆಯನ್ನು ತಂದುಕೊಟ್ಟರೆ 2016ರಲ್ಲಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದಂತ ಹರ ಹರ ಮಹಾದೇವ ಎನ್ನುವ ಪೌರಾಣಿಕ ಧಾರವಾಹಿಯಲ್ಲಿ ಶಿವನ ಪಾತ್ರದ ಮೂಲಕ ಕಾಣಿಸಿಕೊಂಡು ಬೇರೆ ರೀತಿಯಲ್ಲಿಯೇ ತಮ್ಮನ್ನು ತಾವು ಗುರುತಿಸಿಕೊಂಡು ಅಪಾರ ಅಭಿಮಾನಿ ಬಳಗವನ್ನು ಕೂಡ ಹೊಂದುತ್ತಾರೆ. 

ನಂತರ ಪೌರಾಣಿಕ ಧಾರವಾಹಿಗಳ ಮೂಲಕ ಅಂದರೆ 2018ರಲ್ಲಿ ಜೈ ಹನುಮಾನ್ ಧಾರಾವಾಹಿಯಲ್ಲಿ ರಾವಣ ಪಾತ್ರದಾರಿಯಲ್ಲಿ ಹಾಗೂ 2020ರ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಎನ್ನುವ ಪೌರಾಣಿಕ ಧಾರವಾಹಿ ಕೂಡ ಶಿವನ ಪಾತ್ರವನ್ನು ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಕೇವಲ ನಾಯಕ ನಟನಾಗಿ ಅಲ್ಲದೆ ಖಳನಾಯಕನಾಗಿಯೂ ಕೂಡ ಇವರು ಜನಪ್ರಿಯತೆಯನ್ನು ಹೊಂದಿದ್ದಾರೆ ಅದುವೇ ಸ್ಟಾರ್ ಸುವರ್ಣದಲ್ಲಿ 2023ರಲ್ಲಿ ಪ್ರಸಾರವಾಗುತ್ತಿರುವ ನಮ್ಮ ಲಚ್ಚಿ ಸೀರಿಯಲ್ ನಲ್ಲಿ ಬದರಿನಾಥ್ ಪಾತ್ರದ ಮೂಲಕ. ಹಾಗೂ ಪ್ರಸ್ತುತದಲ್ಲಿ ಪ್ರಸಾರವಾಗುತ್ತಿರುವ ಶಾಂಭವಿ ಧಾರಾವಾಹಿಯಲ್ಲೂ ಕೂಡ ಇವರು ಕಳೆ ನಟನಾಗಿ ಪಾತ್ರವನ್ನು ನಿರ್ವಹಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.