ಬಿಗ್ ಬಾಸ್ ವಿನಯ್ ಬೆಂಬಲಕ್ಕೆ ನಿಂತ ಸೂಪರ್ ಸ್ಟಾರ್ ನಟಿ, ಮೆಚ್ಚಿಕೊಂಡ ಕನ್ನಡಿಗರು

 | 
Bcg
ಕಿರುತೆರೆಯಲ್ಲಿ ಅತಿದೊಡ್ಡ ಷೋ ಎಂದೇ ಹೆಸರು ಪಡೆದ ಬಿಗ್‌ಬಾಸ್ ಕನ್ನಡ ಸೀಸನ್‌ 10ಶೋದಲ್ಲಿ ದಿನೇ ದಿನೇ ಕ್ರೇಜ್ ಹೆಚ್ಚಿಸುತ್ತಿದ್ದು, ನೂರು ದಿನಗಳ ಪಯಣದಲ್ಲಿ ಇನ್ನೊಂದು ತಿಂಗಳು ಕಳೆದರು ಸಾಕು, ಬಿಗ್‌ಬಾಸ್ ಕಪ್ ಎತ್ತಿಕೊಂಡು ವಿನ್ನರ್ ಖುಷಿಯಲ್ಲಿ ತೇಲುತ್ತಾ ಇರುತ್ತಾರೆ. ಗೆಲುವು ಒಬ್ಬರದ್ದೇ ಆಗಬೇಕಾದರೆ ಆಟದ ರೀತಿಯಲ್ಲೂ ಬದಲಾವಣೆ ಆಗಲಿದ್ದು, ಶಕ್ತಿ ಮತ್ತು ಯುಕ್ತಿ ಇದ್ದವರಷ್ಟೇ ಗೆಲ್ಲುವಂತಹ ಆಟಗಳನ್ನೇ ಬಿಗ್‌ಬಾಸ್ ನೀಡುತ್ತಾ ಹೋಗುತ್ತದೆ.
ಈಗಾಗಲೇ ಬಿಗ್‌ಬಾಸ್ ಮನೆಯಲ್ಲಿ ಗೆಲುವಿಗಾಗಿ ಆಟ ಶುರುವಾಗಿದ್ದು, ಅದಕ್ಕೆ ಕಾರ್ತಿಕ್ ವರಸೆಯೇ ಬದಲಾಗಿ ಹೋಗಿದೆ. ತನಗೆ ಮೈನಸ್ ಪಾಯಿಂಟ್ ಆಗಬಹುದು ಎನಿಸುವ ನಡವಳಿಕೆಯನ್ನೇ ಬದಲಾಯಿಸಿಕೊಂಡು, ಸದ್ಯ ಸಂಗೀತಾನಾ ದೂರ ಮಾಡಿಕೊಂಡಿದ್ದಾರೆ. ಇದೀಗ ಸ್ಟಾರ್ ಸುವರ್ಣದಲ್ಲಿ ಪ್ರಸುತ್ತ ಪ್ರಸಾರವಾಗುತ್ತಿರುವ ಕಾವೇರಿ ಕನ್ನಡ ಮೀಡಿಯಂ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್‌ನ ಅನಿಕಾ ಪಾತ್ರ ಮಾಡುತ್ತಿರುವ ನಟಿ ಅನು ಪೂವಮ್ಮ, ಬಿಗ್‌ಬಾಸ್‌ ಸ್ಪರ್ಧಿ ವಿನಯ್ ಗೌಡಗೆ ಬೆಂಬಲಕ್ಕೆ ನಿಂತಿದ್ದಾರೆ. 
ನಟಿ ಅನು, ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೋ ಮೂಲಕ ಶುಭಕೋರಿದ್ದಾರೆ ಅದರಲ್ಲಿ ಹಾಯ್, ಎಲ್ಲರೂ ಹೇಗಿದ್ದೀರಾ..? ವಿನಯ್ ಬಿಗ್ ಬಾಸ್‌ನಲ್ಲಿ ಚೆನ್ನಾಗಿಯೇ ಆಡುತ್ತಾ ಇದ್ದೀಯಾ. ನಾನು ಪ್ರತಿ ದಿನ ಬಿಗ್ ಬಾಸ್ ನೋಡುತ್ತೇನೆ. ನಿನ್ನ ಎಪಿಸೋಎಡ್‌ ನೋಡುತ್ತೇನೆ. ನಿಜಕ್ಕೂ ಖುಷಿ ಆಗುತ್ತಿದೆ. ಫಿನಾಲೆಯಲ್ಲಿ ನಿನ್ನ ನೋಡುತ್ತೀನಿ ಅಂತ ವಿನಯ್‌ಗೆ ಟ್ಯಾಗ್ ಮಾಡಿ ಅವರ ಗೆಲುವನ್ನು ನೋಡಲು ಬಯಸುತ್ತಿರುವುದಾಗಿ ಹೇಳಿದ್ದಾರೆ. 
ಕಿರುತೆರೆ ನಟಿ ಅನು ಪೂವಮ್ಮ ಈ ವಿಡಿಯೋ ಹಾಕಿದ ಮೇಲೆ ಸಾಕಷ್ಟು ನೆಗೆಟಿವ್ ಕಮೆಂಟ್‌ಗಳು ಬರುತ್ತಿದ್ದು, ಕೆಲವರಂತೂ ಅನು ಪೂವಮ್ಮಗೂ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಮೆಂಟ್‌ಗಳಲ್ಲಿ ಈ ರೀತಿ ಹೇಳುವುದಕ್ಕೆ ಎಷ್ಟು ಹಣ ತೆಗೆದುಕೊಂಡಿದ್ದೀರಿ.ಯಾವ ಬಾಯಿಂದ ಹೇಳುತ್ತಿದ್ದೀಯಾ ತಾಯಿ. ನಿನ್ನ ಕಣ್ಣಿಗೆ ಅವನು ಚೆನ್ನಾಗಿ ಆಡುತ್ತಿದ್ದಾನೆ ಅನ್ಸುತ್ತಾ. 
ನಾವೇನು ಬಿಗ್‌ಬಾಸ್ ನೋಡೋದಿಲ್ವಾ ಎಂದೆಲ್ಲಾ ನೆಗೆಟಿವ್ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಇನ್ನು ಅದೇ ಪೋಸ್ಟ್ ಅನ್ನು ವಿನಯ್ ಬೆಂಬಲಿಗರು ನೋಡಿ, ವಿನಯ್ ಬೆಂಕಿ, ವಿನಯ್ ಗೆದ್ದೇ ಗೆಲ್ಲುತ್ತಾರೆ ಅಂತೆಲ್ಲಾ ಪಾಸಿಟಿವ್ ಕಮೆಂಟ್ ಹಾಕುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ