// custom css

ಬಿಗ್ ಬಾಸ್ ವಿನ್ನರ್ ವಿನಯ್, ಸುದೀಪ್ ಸ್ನೇಹಿತನಿಗೆ ಸಿಗಲಿದೆ ಬಿಗ್ ಬಾಸ್ ಟ್ರೋಫಿ

 | 
H

ಬಿಗ್ ಬಾಸ್ ಮನೆಯಲ್ಲಿ ಇನ್ನೇನು ಕೆಲವು ದಿನಗಳ ಜರ್ನಿಯನ್ನು ಮುಗಿಸಿ, ಫೈನಲ್ ಹಂತಕ್ಕೆ ತಲುಪಲಿದ್ದಾರೆ. ಟ್ರೋಫಿ ತೆಗೆದುಕೊಂಡು ಖುಷಿಯಿಂದ ನಡೆಯುತ್ತಾರೆ. ಅಷ್ಟೇ ಅಲ್ಲ 50 ಲಕ್ಷ ಅಮೌಂಟ್ ಕೂಡ ಗೆದ್ದವರ ಪಾಲಾಗುತ್ತದೆ. ಆ ದಿನಕ್ಕೋಸ್ಕರ ಮನೆಯೊಳಗಿನ ಸ್ಪರ್ಧಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಊಹೆಗಳ ಜೊತೆಗೆ ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರಾಗಬಹುದು ಎಂಬ ಕುತೂಹಲವೂ ಇದೆ.

ಈ ಬಾರಿಯ ಸೀಸನ್‌ನಲ್ಲಿರುವ ಸ್ಪರ್ಧಿಗಳೇ ನೋಡುಗರಿಗೆ ಬೇಸರ ತರಿಸಿದ್ದಾರೆ. ಎಷ್ಟೋ ಸಲ ರೂಲ್ಸ್ ಬ್ರೇಕ್, ಎಷ್ಟೋ ಸಲ ಸೀರಿಯಸ್ ನೆಸ್ ಇಲ್ಲದೆ ಇರುವುದು. ಅದರಲ್ಲೂ ಒಮ್ಮೆಯೂ ಲಕ್ಸುರಿ ಬಜೆಟ್ ಅನ್ನು ಗೆಲ್ಲದೆ ಇರುವುದು. ಹೀಗಾಗಿ ಗೆಲುವು ಯಾರ ಮುಡಿಗಪ್ಪ ಎಂಬ ಕಾಡುವ ಪ್ರಶ್ನೆಯ ಜೊತೆಗೆ ಈ ಬಾರಿ ವಿನಯ್ ಗೆಲ್ಲಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ಜೊತೆಗೆ ವಿನಯ್ ಮೈಕ್ ಕೂಡ ಅವರೇ ವಿನ್ನರ್ ಅಂತಿದೆ. ಇದು ಬಿಗ್ಬಾಸ್ ನೀಡಿರುವ ಸುಳಿವೂ ಇಲ್ಲ ತಪ್ಪಾಗಿದಿಯೋ ತಿಳಿದಿಲ್ಲ.

ಆರಂಭದಿಂದಾನೂ ವಿನಯ್ ಸ್ಟ್ರಾಂಗೆಸ್ಟ್ ಕಂಟೆಸ್ಟೆಂಟ್ ಆಗಿ ಹೊರ ಹೊಮ್ಮಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಆನೆ ಅಂತಾನೇ ಗುರುತಿಸಿಕೊಂಡಿದ್ದಾರೆ. ಅದಷ್ಟೇ ಅಲ್ಲ ಮನೆಯಲ್ಲಿರುವ ಹಲವರು ಕೂಡ ವಿನಯ್ ಗೆಲ್ಲುವಂತೆ ಜೊತೆಯಾಗಿದ್ದಾರೆ. ಕಿಚ್ಚನ ಎಚ್ಚರದಿಂದ ಆಗೊಮ್ಮೆ ಈಗೊಮ್ಮೆ ಎಂಬಂತೆ ಸರಿಯಾಗುತ್ತಿದ್ದವರು, ಮತ್ತೆ ಮತ್ತೆ ಅದೇ ತಪ್ಪನ್ನೇ ಮಾಡಿದ್ದಾರೆ.

ವಿನಯ್ ಗೆಲ್ಲಲೇಬೇಕೆಂದು ಮನೆ ಮಂದಿ, ಸ್ನೇಹಿತರೆಲ್ಲರೂ ಆಸೆ ಪಟ್ಟಿದ್ದಾರೆ. ಅದಕ್ಕೆ ತಕ್ಕ ಹಾಗೇ ಪ್ರತಿ ವಾರ ಹೆಚ್ಚೆಚ್ಚು ವೋಟಿಂಗ್ ಮಾಡಿಸುತ್ತಾರೆ. ಅಷ್ಟೇ ಅಲ್ಲ ಬೇರೆಯವರ ಬೆಂಬಲವನ್ನು ಕೇಳಿದ್ದಾರೆ. ಇದರ ನಡುವೆ ವಿನಯ್ ಅಭಿಮಾನಿಗಳೇನು ಸುಮ್ಮನೆ ಕೂತಿಲ್ಲ. ಪ್ರಚಾರ ಮಾಡುವುದರ ಜೊತೆಗೆ ವಿನಯ್ ಗೆಲುವಿಗಾಗಿ ಪೋಸ್ಟರ್ ಹಾಕುವ ಮೂಲಕ, ಶುಭಕೋರುತ್ತಿದ್ದಾರೆ. ವಿನಯ್ ಗೆಲ್ಲಿಸಲು ಲೈಕ್ ಮಾಡಿ ಅಂತೆಲ್ಲ ಕಮೆಂಟ್ಸ್ ಮಾಡುತ್ತಿದ್ದಾರೆ.

ಈಗಾಗಲೇ ಬಿಗ್ ಬಾಸ್ ಮನೆಯಿಂದ ಬಂದ ಪ್ರತಿಯೊಬ್ಬರು ವಿನಯ್ ಕೂಡ ಗೆಲುವಿನ ಓಟದಲ್ಲಿದ್ದಾರೆ ಎಂದಿದ್ದಾರೆ. ಕಳೆದ ವಾರ ಬಂದಂತ ಸ್ವಾಮೀಜಿ ಬೇರೆ ರಾಜಯೋಗ ಇದೆ ಎಂದಿದ್ದಾರೆ. ಈಗ ವಿನಯ್ ಹಾಕಿರುವ ಮೈಕ್ ಕೂಡ ವಿನ್ ಎಂದೇ ಘೋಷಣೆ ಮಾಡಿದೆ. ಬಿಗ್ ಬಾಸ್ ಮನೆಯೊಳಗೆ ಪ್ರತಿ ಸೆಕೆಂಡ್ ಕೂಡ ಮೈಕ್ ಹಾಕಿರಲೇಬೇಕು. ಈ ಮೈಕ್ ಮೇಲೆ ಈ ಮೊದಲು ಇಂಗ್ಲಿಷ್ ನಲ್ಲಿ ಹೆಸರು ಬರೆಯಲಾಗಿತ್ತು. ಆದರೆ ಈ ಸಲ ಕನ್ನಡದಲ್ಲಿ ಹೆಸರನ್ನು ಬರೆಯಲಾಗಿದೆ. ಅಧಿಕೃತವಾಗಿ ವಿನ್ನರ್ ಬಗ್ಗೆ ತಿಳಿದುಕೊಳ್ಳಲು ಕೆಲ ದಿನಗಳ ಕಾಲ ಕಾಯಬೇಕಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.