ಅಜ್ಜಿ ಬಾಯಲ್ಲಿ ಬಿಗ್ ಬಾಸ್ ವಿನ್ನರ್ ಹೆಸರು, ವೀಕ್ಷಕರಿಗೆ ಮತ್ತಷ್ಟು ಖುಷಿ ವಿಚಾರ
ಬಹುನಿರೀಕ್ಷಿತ ಬಿಗ್‌ಬಾಸ್ ಕನ್ನಡ ಸೀಸನ್ 10 ಬಹುದೊಡ್ಡ ಯಶಸ್ಸಿನೊಂದಿಗೆ ಅಂತಿಮ ಹಂತಕ್ಕೆ ಬಂದು ತಲುಪಿದೆ. ಇದೇ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಒಬ್ಬರ ಕೈಯನ್ನು ಎತ್ತಿ ಹಿಡಿಯಲಿದ್ದಾರೆ. ಬಿಗ್‌ಬಾಸ್ ಮನೆಯೊಳಗೆ ರಾರಾಜಿಸುತ್ತಿರುವ ಕಪ್ ಅವರ ಕೈ ಸೇರಲಿದೆ. ಈ ಫಿನಾಲೆ ವಾರದಲ್ಲಿ ಬಿಗ್‌ಬಾಸ್ ಮನೆಯೊಳಗೆ ಸಂಗೀತಾ, ವಿನಯ್, ಕಾರ್ತಿಕ್, ಪ್ರತಾಪ್, ತುಕಾಲಿ ಸಂತೋಷ್, ವರ್ತೂರು ಸಂತೋಷ್ ಹೀಗೆ ಒಟ್ಟು ಆರು ಸದಸ್ಯರು ಇದ್ದಾರೆ.
ಅಷ್ಟೇ ಅಲ್ಲ, ಮಿಡ್ ವೀಕ್ ಎಲಿಮಿನೇಷನ್ ಇರುವುದಿಲ್ಲ ಎಂದು ನಿನ್ನೆಯ ಎಪಿಸೋಡಿನಲ್ಲಿ ಬಿಗ್‌ಬಾಸ್ ಹೇಳಿದ್ದಾರೆ. ಹಾಗಾಗಿ ಕುತೂಹಲ ಇನ್ನಷ್ಟು ಗರಿಗೆದರಿದೆ. ಈ ಸಲ ಯಾರು ಬಿಗ್‌ಬಾಸ್ ಗೆಲ್ಲುತ್ತಾರೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದೆ. ವಾಗ್ವಾದಗಳು ನಡೆಯುತ್ತಿವೆ. ಪ್ರತಿಯೊಬ್ಬ ಸದಸ್ಯರ ಅಭಿಮಾನಿಗಳೂ ತಮ್ಮ ನೆಚ್ಚಿನ ಸ್ಪರ್ಧಿಯ ಪರವಾಗಿ ಜೋರಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಹೌದು ಇದೀಗ ಅಜ್ಜಿಯೊಬ್ಬರು ವರ್ತೂರ್ ಸಂತೋಷ್ ಗೆಲುವನ್ನು ಸಾಧಿಸಿ ಬರಲಿ ಎಂದು ಹಾರೈಸಿದ್ದಾರೆ. ಹೌದು ಮಾತು ಬರದ ಮೂಕ ಪ್ರಾಣಿಗಳೇ ಅವರನ್ನು ಅಷ್ಟು ಹಚ್ಚಿಕೊಂಡು ಪ್ರೀತಿಸಿದಮೆಲೆ ನಾವು ಸಾಮಾನ್ಯ ಜನರಿಗೆ ಅವರು ಇಷ್ಟವಾಗದೆ ಇರುತ್ತಾರೆಯೇ ಅವರ ಬಗ್ಗೆ ಈಗಾಗಲೇ ಹಲವು ಜನ ಗುಲ್ಲೆಬ್ಬಿಸಿದ್ದಾರೆ. ಅವರು ಹೆಂಡತಿಯನ್ನು ಹೊಡೆದಿದ್ದಾರೆ. ಮನೆಯಿಂದ ಆಚೆಗೆ ಹಾಕಿದ್ದಾರೆ ಎಂದರೆ ನಂಬಲಾಗದು. ಅವರು ಈವರೆಗೆ ಉತ್ತಮ ಆಟ ಆಡಿದ್ದಾರೆ.
ಅಭಿಮಾನಿಗಳ ಮನ ಗೆದ್ದಿದ್ದಾರೆ. ವಿನಯ್ ತರಹ ಜಗಳವಾಡಿಲ್ಲ. ಸಂಗೀತಾ ತರಹ ಬೆನ್ನಿಗೆ ಚೂರಿ ಹಾಕಿಲ್ಲ. ಪ್ರತಾಪ್ ತರ ಅತ್ತು ಕರೆದು ನಾಟಕ ಮಾಡಿಲ್ಲ. ಸಂತು ಪಂತು ಎಂದೇ ಜೊತೆಯಾಗಿ ಆಟ ಆಡಿದ್ದಾರೆ ಎಂದು ಅಜ್ಜಿ ವರ್ತೂರ್ ಸಂತೋಷ್ ಅವರನ್ನು ಹಾಡಿ ಹೊಗಳಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.