'ಬಿಗ್ ಬಾಸ್ ವಿನ್ನರ್ ಬೀದಿಯಲ್ಲಿ ಭಿಕ್ಷೆ ಎತ್ತುವ ಪರಿಸ್ಥಿತಿ' ಉರಿದು ಬಿದ್ದ ವೀಕ್ಷಕರು

 | 
Js

ಅನೇಕ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತವೆ. ಅದರಲ್ಲೂ ಪ್ರ್ಯಾಂಕ್ ವಿಡಿಯೋಗಳು ಸಾಕಷ್ಟು ಸೆಲ್ ಆಗುತ್ತವೆ. ಇದನ್ನು ಯಾವುದೋ ಯೂಟ್ಯೂಬರ್  ಮಾಡಿದರೆ ಸಾಮಾನ್ಯ ಎನ್ನಬಹುದು. ಆದರೆ, ಸಾಕಷ್ಟು ಜನಪ್ರಿಯತೆ ಪಡೆದವರೇ ಹೀಗೆ ಮಾಡಿದರೆ ಫ್ಯಾನ್ಸ್​ಗೆ ಶಾಕ್ ಆಗೋದು ಗ್ಯಾರಂಟಿ. 

ಈಗಲೂ ಅಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ನಂತರ ಅನೇಕರಿಗೆ ಶಾಕ್ ಆಗಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿರುವುದು ಕಂಡು ಬಂದಿದೆ. ಈ ರೀತಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿರುವ ವ್ಯಕ್ತಿ ಪ್ರಸಿದ್ಧ ಮತ್ತು ಜನಪ್ರಿಯ ಸೆಲೆಬ್ರಿಟಿ. ಅವರನ್ನು ನೋಡಿ ರಸ್ತೆಯಲ್ಲಿ ಓಡಾಡುವ ಜನರು ಭಯಗೊಂಡಿದ್ದಾರೆ ಈ ವಿಡಿಯೋ ವೈರಲ್ ಆಗಿ ಚರ್ಚೆ ಆಗುತ್ತಿದೆ.

ವಿಡಿಯೋದಲ್ಲಿ ಇರುವ ವ್ಯಕ್ತಿಯ ಮುಖಕ್ಕೆ ದೊಡ್ಡ ಗುಳ್ಳೆಗಳಿವೆ. ಅನೇಕ ಜನರು ನಟನ ಮುಖವನ್ನು ನೋಡಿ ಹೆದರಿದ್ದಾರೆ, ಅನೇಕರು ಓಡಿಹೋಗಿದ್ದಾರೆ. ಆದರೆ ರಿಕ್ಷಾ ಚಾಲಕನು ನಟನಿಗೆ ಧನ ಸಹಾಯ ಮಾಡಿದರು. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ನಟ ಬೇರೆ ಯಾರೂ ಅಲ್ಲ, ಬಿಗ್ ಬಾಸ್ ಮರಾಠಿ ಸೀಸನ್ 2ನ ವಿನ್ನರ್ ಜನಪ್ರಿಯ ನಟ ಶಿವ್ ಠಾಕ್ರೆ.

ಶಿವ್ ಠಾಕ್ರೆ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವರು ಮಾಡಿರೋ ಪ್ರ್ಯಾಂಕ್ ವಿಡಿಯೋ ಯಶಸ್ವಿಯಾಗಿದೆ. ಕೆಲವರು ನೆಚ್ಚಿನ ನಟ ಎದುರಿಗೆ ಬಂದರೂ ಗುರುತಿಸಲಾಗಲೇ ಇಲ್ಲವಲ್ಲ ಎಂದು ಬೇಸರ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಇದು ಸರಿ ಅಲ್ಲ ಎಂದಿದ್ದಾರೆ. ಇದರ ಮೇಕಿಂಗ್ ವಿಡಿಯೋನ ಅವರು ಹಂಚಿಕೊಂಡಿದ್ದಾರೆ.

ಶಿವ್ ಠಾಕ್ರೆ ವಿಡಿಯೋದಲ್ಲಿ ಕಂಡ ಆಟೋ ಚಾಲಕನ ಎಲ್ಲರೂ ಹೊಗಳುತ್ತಿದ್ದಾರೆ. ರಿಕ್ಷಾ ಚಾಲಕ ನಮ್ಮ ಹೃದಯವನ್ನು ಗೆದ್ದಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಶಿವ್ ಇದೇನು ಇಂತಹ ಲುಕ್ ಎಂದು ಕೆಲವರು ಹೇಳಿದ್ದಾರೆ. ಸದ್ಯ ಶಿವ್ ಠಾಕ್ರೆ ಅವರ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. 

ಶಿವ್ ಅಭಿಮಾನಿ ಬಳಗ ದೊಡ್ಡದಿದೆ. ಹಿಂದಿ ಮಂದಿಗೂ ಅವರು ಚಿರಪರಿಚಿತರಾಗಿದ್ದಾರೆ. ಹಿಂದಿ ಬಿಗ್ ಬಾಸ್ ಸೀಸನ್ 16ರ ಮೊದಲ ರನ್ನರ್ ಅಪ್ ಆಗಿದ್ದರು. ಎಂಸಿ ಸ್ಟಾನ್ ಅವರು ಈ ಸೀಸನ್ ಗೆದ್ದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.