ಬಿಸ್ಮಿಲ್ಲಾ ಬಿಸ್ಮಿಲ್ಲಾ ಅಂದಿದ್ದಕ್ಕೆ ಜೀವ ಉಳಿಸಿದ್ದಾರೆ, ಪಹಲ್ಗಾಮ್ ನಲ್ಲಿ ನಡೆದ ಘಟನೆ ಹಂಚಿಕೊಂಡ ಮಹಿಳೆ
Apr 25, 2025, 10:50 IST
|

ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿಯಲ್ಲಿ ರಾಜ್ಯದ ಇಬ್ಬರು ಸೇರಿದಂತೆ 28 ಜನರು ಮೃತಪಟ್ಟಿದ್ದಾರೆ. ಶಿವಮೊಗ್ಗದ ನಿವಾಸಿ ಆಗಿರುವ ಮಂಜುನಾಥ್ ರಾವ್ ಮತ್ತು ಬೆಂಗಳೂರಿನ ಮತ್ತಿಕೆರೆ ನಿವಾಸಿ ಭರತ್ ಭೂಷಣ್ ಅವರು ದಾಳಿಯಲ್ಲಿ ಮೃತಪಟ್ಟಿದ್ದಾರೆ. ಘಟನೆಯಿಂದ ಇಬ್ಬರ ಕುಟುಂಬಗಳು ಸುರಕ್ಷಿತವಾಗಿವೆ ಎಂದು ವರದಿಗಳು ಉಲ್ಲೇಖಿಸಿವೆ.
ಘಟನೆ ನಂತರ ಮಾಧ್ಯಮಗಳ ಜೊತೆಗೆ ಪಹಲ್ಗಾಮ್‌ನಿಂದ ಮಾತನಾಡಿದ್ದ ಮಂಜುನಾಥ್ ಅವರ ಪತ್ನಿ ಪಲ್ಲವಿ, ಭಯೋತ್ಪಾದಕರು ತನ್ನ ಪತಿಯ ಮೇಲೆ ಗುಂಡು ಹಾರಿಸಿದಾಗ, ತಾನು ಮತ್ತು ತನ್ನ ಮಗ ಅಲ್ಲೇ ಇದ್ದೆವು. ನಾವು ಕುದುರೆ ಸವಾರಿಯ ಮೂಲಕ ಸ್ಥಳಕ್ಕೆ ತಲುಪಿದ್ದೆವು. ನನ್ನ ಪತಿ ನನ್ನ ಮಗನಿಗೆ ತಿಂಡಿ ಖರೀದಿಸಲು ತೆರಳಿದ್ದರು ಈ ವೇಳೆ ದಾಳಿ ನಡೆಸಿದೆ ಎಂದು ಅವರು ಹೇಳಿದ್ದಾರೆ.
ಕೆಲವೇ ನಿಮಿಷಗಳಲ್ಲಿ, ನನ್ನ ಪತಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಬಂತು. ಅವರು ನನ್ನ ಕಣ್ಣ ಮುಂದೆಯೇ ನಿಧನರಾದರು, ಮತ್ತು ನಾನು ಅಸಹಾಯಕಳಾಗಿದ್ದೆ. ತನ್ನನ್ನೂ ಕೊಲ್ಲುವಂತೆ ಉಗ್ರಗಾಮಿಗಳಿಗೆ ಕೇಳಿಕೊಂಡೆ. ನನ್ನ ಮಗ ಮತ್ತು ನಾನು ಇಬ್ಬರೂ ಉಗ್ರಗಾಮಿಗಳನ್ನು ನಮ್ಮನ್ನೂ ಕೊಲ್ಲುವಂತೆ ಕೇಳಿಕೊಂಡೆವು ಎಂದು ಅವರು ಹೇಳಿದ್ದಾರೆ.ಅದಾಗ್ಯೂ, ಭಯೋತ್ಪಾದಕ ನಮ್ಮನ್ನು ಕೊಲ್ಲುವುದಿಲ್ಲ, ಇದನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸಬೇಕೆಂದು ಹೇಳಿದ ಎಂದು ಅವರು ಹೇಳಿದ್ದಾರೆ. ದಾಳಿಯ ಸಮಯದಲ್ಲಿ ಯಾವುದೇ ಸೇನಾ ಸಿಬ್ಬಂದಿ ಇರಲಿಲ್ಲ ಎಂದು ಅವರು ಹೇಳಿದ್ದಾರೆ.
ದಾಳಿಯಿಂದ ನಮ್ಮನ್ನು ರಕ್ಷಿಸುವಲ್ಲಿ ನಮ್ಮ ಚಾಲಕ ಹಾಗೂ ಸ್ಥಳೀಯ ಮೂವರು ಮುಸ್ಲಿಮರು ಸಹಾಯ ಮಾಡಿದ್ದಾರೆ. ಘಟನೆ ನಡೆದಾಗಿನಿಂದ ಚಾಲಕ ನಮ್ಮೊಂದಿಗಿದ್ದಾರೆ. ಮೂವರು ಸ್ಥಳೀಯ ಮುಸ್ಲಿಮರು ಬಿಸ್ಮಿಲ್ಲಾ… ಬಿಸ್ಮಿಲ್ಲಾ… ಎಂದು ಹೇಳುತ್ತಾ ದಾಳಿ ನಡೆದ ಸ್ಥಳದಿಂದ ಸುರಕ್ಷಿತವಗಿ ಕೆಳಗೆ ಬರಲು ನಮಗೆ ಸಹಾಯ ಮಾಡಿದರು” ಎಂದು ಅವರು ಹೇಳಿದ್ದಾರೆ.ಅವರು ನನ್ನ ಸಹೋದರರಂತೆ ಇದ್ದರು. ಅವರಲ್ಲಿ ಒಬ್ಬರು ನನ್ನ ಮಗನನ್ನು ಎತ್ತಿಕೊಂಡು ಬಂದರು. ಇನ್ನಿಬ್ಬರು ಕಠಿಣ ಭೂಪ್ರದೇಶವನ್ನು ದಾಟಲು ನನಗೆ ಸಹಾಯ ಮಾಡಿದರು ಎಂದು ಪಲ್ಲವಿ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023