ಬಿಟ್ಟಿ ಶೋಕಿ ವಾಲಾ ಅರುಣ್ ಕಟಾರೆ ಜೈಲುಪಾಲು; ರೀಲ್ಸ್ ರಾಜನ ಅಸಲಿಮುಖ ಬ ಯಲಿಗೆ

ರೀಲ್ಸ್ ಗೀಳಿಗಾಗಿ ಗನ್ ಮ್ಯಾನ್ಗಳಿಗೆ ನಕಲಿ ಎಕೆ47 ಗನ್ ಕೊಡಿಸಿ, ಸಾರ್ವಜನಿಕರಲ್ಲಿ ಭಯ ಮೂಡಿಸುತ್ತಿದ್ದ ಅರುಣ್ ಕಟಾರೆ ಎಂಬಾತನನ್ನು ನಗರದ ಕೊತ್ತನೂರು ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಜೂನ್ 9ರಂದು ಆರೋಪಿ, ನಕಲಿ ಗನ್ ಹಿಡಿದು ಬಾಡಿಗಾರ್ಡ್‌ಗಳೊಂದಿಗೆ ಕೊತ್ತನೂರು ಠಾಣಾ ವ್ಯಾಪ್ತಿಯ ಚೊಕ್ಕನಹಳ್ಳಿಯ ಲೀಲಾ ಹೋಟೆಲ್ ಬಳಿ ಬಂದಿದ್ದಾನೆ.
ಆತನನ್ನು ಕಂಡು ಆತಂಕಗೊಂಡ ಸಾರ್ವಜನಿಕರು ಹೊಯ್ಸಳ ಗಸ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಚಿತ್ರದುರ್ಗ ಮೂಲದ ಆರೋಪಿ, ಮೈ ತುಂಬಾ ನಕಲಿ ಚಿನ್ನಾಭರಣ ಧರಿಸುತ್ತಾನೆ. ನಕಲಿ ಗನ್ ಹಿಡಿದ ಬಾಡಿಗಾರ್ಡ್‌ಗಳೊಂದಿಗೆ ಸುತ್ತಾಡುತ್ತಾನೆ. ಯುವತಿಯರು, ಐಷಾರಾಮಿ ಕಾರುಗಳು, ಬೈಕ್‌ಗಳೊಂದಿಗೆ ರೀಲ್ಸ್ ಮಾಡುವುದನ್ನೇ ಹವ್ಯಾಸ ಮಾಡಿಕೊಂಡಿದ್ದಾನೆ. ಈ ಮೂಲಕ ಬಿಲ್ಡಪ್ ಕೊಟ್ಟು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹಿಂಬಾಲಕರನ್ನೂ ಸಂಪಾದಿಸಿದ್ದಾನೆ.
ದುಬಾರಿ ಕಾರು ಹಾಗೂ ಹುಡುಗಿಯರ ಜೊತೆ ರೀಲ್ಸ್ ಮಾಡುತ್ತಾ ಜೀವನದ ಬಗ್ಗೆ ಮಸ್ತ್ ಡೈಲಾಗ್ ಹೊಡೆಯುತ್ತಿದ್ದ ಅರುಣ್ ಕಟಾರೆಗೆ ಈಗ ರೀಲ್ಸ್‌ಯೇ ಕಂಟಕವಾಗಿದೆ. ರೀಲ್ಸ್‌ಗಾಗಿ ಮಾಡಿದ ಶೋಕಿ ಈಗ ಜೈಲುಪಾಲಾಗುವಂತೆ ಮಾಡಿದೆ. ಅರುಣ್ ಕಟಾರೆ ಬೆಂಗಳೂರಿನಲ್ಲಿ ಶೋ ಕೊಡಲು ಹೋಗಿ ಜೈಲು ಸೇರುವಂತಾಗಿದೆ.
ರೀಲ್ಸ್‌ಗಾಗಿ ಫುಲ್ ರಿಚ್ ಆಗಿ ಕಾಣಿಸಿಕೊಳ್ಳಲು ಮೈಮೇಲೆ ಕೆಜಿಗಟ್ಟಲೇ ಚಿನ್ನ ಧರಿಸಿಕೊಂಡು ಜೊತೆಗೆ ವಿತ್ ವೆಪನ್ ಬಾಡಿಗಾರ್ಡ್ ಇಟ್ಟುಕೊಂಡಿದ್ದ ಅರುಣ್ ಕಟಾರೆ, ಬಾಡಿ ಗಾರ್ಡ್ ಕೈಯಲ್ಲಿ ಎಕೆ 47 ಮಾದರಿಯ ನಕಲಿ ಗನ್ ಹಿಡಿಸಿ ರಸ್ತೆಯಲ್ಲಿ ಶೋ ಆಫ್ ಮಾಡುತ್ತಿದ್ದ. ಈತನ ಶೋನಿಂದ ಅನೇಕರಿಗೆ ಗಾಬರಿಯಾಗಿದೆ ಎನ್ನಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.