ಭಯಬಿದ್ದು ದಿಕ್ಕಾಪಾಲಾಗಿ ಓಡಿದ ಬಿಜೆಪಿ ಮುಖಂಡರು, ಯಾಕೆ ಏನಾಯಿತು ಗೊತ್ತಾ

 | 
ರಿ

ಕೋಲಾರ: ಸ್ನೇಹಿತರೆ ನಮಸ್ಕಾರ, ಕೋಲಾರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಬಿಜೆಪಿ ಮುಖಂಡರು ದೊಡ್ಡ ಮಟ್ಟದ ಪ್ರತಿಭಟನೆ ಮಾಡಿದ್ದರು. ಜೊತೆಗೆ ಹಲವಾರು ಸಾರ್ವಜನಿಕರು ಸೇರಿದ್ದರು. ಈ ವೇಳೆ ಕೋಲಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಜ್ಜೇನು ಗೂಡು ಕಟ್ಟಿದ ಪರಿಣಾಮ ದೊಡ್ಡ ಎಡವಟ್ಟಿಗೆ ಕಾರಣವಾಗಿದೆ. 

ಹೌದು, ಭವ್ಯ ಬಂಗಲೆಯಂತಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಜ್ಜೇನು ಗೂಡು ಕಟ್ಟಿಕೊಂಡು ವಾಸವಾಗಿತ್ತು. ಈ ವೇಳೆ ಬಿಜೆಪಿ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂದೆ ಕೆಲ ವಿಚಾರವಾಗಿ ಪ್ರತಿಭಟನೆ ಮಾಡುತ್ತಿದ್ದರು. ಜೊತೆಗೆ ಸಾರ್ವಜನಿಕರು ಕೂಡ ನೆರೆದಿದ್ದರು‌.

ಇವರ ಜೊತೆಗೆ ಪೊಲೀಸ್ ಅಧಿಕಾರಿಗಳು ಕೂಡ ಅಲ್ಲಿಯೇ ನೆರೆದಿದ್ದರು. ಈ ವೇಳೆ ಗೂಡಿನಲ್ಲಿದ್ದ ಹೆಜ್ಜೇನು ಒಮ್ಮೆಲೇ ಹೊರಬಂದು ಅಲ್ಲಿದ್ದ ಬಿಜೆಪಿ ಮುಖಂಡರಿಗೆ ಹಾಗೂ ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ಮಾಡಿದೆ. ಹೆಜ್ಜೇನು ದಾಳಿಗೆ, ಬಿಜೆಪಿ ಮುಖಂಡರು ಹಾಗೂ ಪೊಲೀಸರು ಅಲ್ಲಿಂದ ದಿಕ್ಕಾಪಾಲಾಗಿ ಓಡಿದ ಘಟನೆ ಇದೀಗ ಬೆಳಕಿಗೆ ಬಂದಿದೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ