ನಿನ್ನೆ ಅಂದರ್ ಆಗಿದ್ದ ಬಿಜೆಪಿ ಕಾರ್ಯಕರ್ತೆ ಇವತ್ತು ರಿಲೀಸ್, ಬಂದ ತಕ್ಷಣ ರೊಚ್ಚಿಗೆದ್ದ ಮಹಿಳೆ

 | 
Hhg

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ನಿನ್ನೆಯಷ್ಟೆ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಅವರು ಅರೆಸ್ಟ್ ಆಗಿದ್ದರು. ಉಡುಪಿ ಕಾಲೇಜಿನ ಟಾಯ್ಲೆಟ್ ವಿಡಿಯೋ ವಿಚಾರಕ್ಕೆ ಧ್ವನಿ ಎತ್ತುವ ಸಂಧರ್ಭದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನ ಟ್ವಿಟ್ ಮಾಡಿದ ವಿಚಾರಕ್ಕೆ ಅಂದರ್ ಆಗಿದ್ದರು ಶಕುಂತಲಾ. 

ಆದರೆ ಇವತ್ತು ರಿಲೀಸ್ ಆಗಿ ಹೊರಬಂದಿದ್ದಾರೆ. ನಿನ್ನೆ ಸಂಜೆ ಶಕುಂತಲಾ ಅವರ ಮನೆಗೆ ನುಗ್ಗಿದ ಮಹಿಳಾ ಪೊಲೀಸರು, ಶಕುಂತಲಾ ಅವರ ಬಳಿ ಯಾವುದೇ ಮಾಹಿತಿ ನೀಡದೆ ಠಾಣೆಗೆ ಬರುವಂತೆ ಒತ್ತಾಯ ಮಾಡಿದ್ದಾರೆ. ತನ್ನ ಮಕ್ಕಳ ಜೊತೆಗೆ ಊಟ ಮಾಡುತ್ತಿದ್ದ ಶಕುಂತಲಾ ಅವರನ್ನು ಪೊಲೀಸರು ಅಲ್ಲಿಂದಲೇ ಎಳೆದುಕೊಂಡು ಹೋಗಿದ್ದಾರೆ. 

ಇನ್ನು ಇವತ್ತು ಹೊರಬಂದ ಶಕುಂತಲಾ ಅವರು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಹಿಟ್ಲರ್ ಸರ್ಕಾರ ಎಂದು ರೊಚ್ಚಿಗೆದ್ದಿದ್ದಾರೆ. ಭಾರತದ ಪ್ರಜೆಗಳಿಗೆ ವಾಕ್ ಸ್ವಾತಂತ್ರ್ಯ ಇದೆ, ಹಾಗಾಗಿ ನಮ್ಮನ್ನು ಈ ರೀತಿಯಲ್ಲಿ ಅರೆಸ್ಟ್ ಮಾಡುವುದು ಸರಿಯಲ್ಲ ಎಂದಿದ್ದಾರೆ ಬಿಜೆಪಿ ಕಾರ್ಯಕರ್ತೆ ಶಕುಂತಲಾ.

ಇನ್ನು ಉಡುಪಿಯಲ್ಲಿ ಹೆಣ್ಣುಮಕ್ಕಳ ಟಾಯ್ಲೆಟ್ ವಿಡಿಯೋ ಮಾಡಿದ್ದ ಆ ಅನ್ಯಧರ್ಮಿಯ ಹೆಣ್ಣುಮಕ್ಕಳಿಗೆ ಯಾವುದೇ ಕಠಿಣ ಕ್ರಮ ನೀಡದೆ ಇರುವುದು ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಗಿದೆ. ಕಾಲೇಜಿನ ಮುಖ್ಯ ಉಪಾಧ್ಯಾಯ ಕೂಡ ಆ ವಿಡಿಯೋ ಇಟ್ಟ ವಿದ್ಯಾರ್ಥಿನಿಯರಿಗೆ ಯಾವುದೇ ಕ್ರಮ ಜಾರಿಗೊಳಿಸದ್ದು ಹಿಂದೂ ವಿದ್ಯಾರ್ಥಿನಿಯರಿಗೆ ದುಃಖದ ವಿಚಾರವಾಗಿದೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.