ಖಾಸಗಿ ಬಸ್ ವೇಗಕ್ಕೆ ಮುದ್ದಾದ ವಿದ್ಯಾರ್ಥಿನಿ ಬ.ಲಿ, ಬಸ್ ವೇಗ ಎಷ್ಟರಮಟ್ಟಿಗೆ ಇತ್ತು ಗೊತ್ತಾ

 | 
ಹಹ

ಯಮರಾಯ ಯಾವಾಗ ಯಾವ ರೂಪದಲ್ಲಿ ಎದುರಾಗುತ್ತಾನೋ ಯಾರಿಗೂ ತಿಳಿದಿಲ್ಲ. ಹೌದು ತುಳಸಿ ಎನ್ನುವ ಪುಟ್ಟ ಹುಡುಗಿಗೆ ಮಾತ್ರ ಬಸ್ ರೂಪದಲ್ಲಿ ಬಂದು ಪ್ರಾಣ ತೆಗೆದುಕೊಂಡಿದ್ದಾನೆ. ಹೌದು ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ರಸ್ತೆ ಬದಿಯಲ್ಲಿದ್ದ ಅಂಗಡಿಗೆ ಗುದ್ದಿದ ಪರಿಣಾಮ ಸ್ಥಳದಲ್ಲಿ ಬಸ್​ಗೆ ಕಾಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ದುಗ್ಲಾಪುರ ಗ್ರಾಮದಲ್ಲಿ ನಡೆದಿದೆ. 

8ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ತುಳಸಿ ಮೃತ ಳಾಗಿದ್ದಾಳೆ ಅಲ್ಲದೆ ಅವಳೊಂದಿಗಿದ್ದ ನಾಲ್ವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಾಲಕನ ವೇಗದ ಚಾಲನೆಯೇ ದುರ್ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ. ಶಾಲೆಗೆ ತೆರಳಲು ಬಸ್​ಗಾಗಿ ವಿದ್ಯಾರ್ಥಿಗಳು ಅಂಗಡಿ ಬಳಿ ಕಾಯುತ್ತಿದ್ದರು. 

ಈ ವೇಳೆ ತರೀಕೆರೆಯಿಂದ ಲಿಂಗದಹಳ್ಳಿಗೆ ಕಡೆಗೆ ವೇಗವಾಗಿ ಬಂದ ಖಾಸಗಿ ಬಸ್​ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ವಿದ್ಯಾರ್ಥಿಗಳು ನಿಂತಿದ್ದ ಸಮೀಪದ ಅಂಗಡಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಐವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಈ ಪೈಕಿ ತುಳಸಿಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಉಳಿದ ನಾಲ್ವರಿಗೆ ಚಿಕಿತ್ಸೆ ಮುಂದುವರಿದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.