ಬ್ರೇಕಿಂಗ್ ನ್ಯೂಸ್, ಬಿಗ್ ಬಾಸ್ ಮನೆಯಿಂದ ಭವ್ಯ ಗೌಡ ಔಟ್
Dec 24, 2024, 18:41 IST
|
ಮೊನ್ನೆಯಷ್ಟೆ ತ್ರಿವಿಕ್ರಮ್ ಬಿಗ್ ಬಾಸ್ ಮನೆಯಿಂದ ಹೊರಬಂದು ದೊಡ್ಡ ಸುದ್ದಿಯಾಗಿತ್ತು. ತದನಂತರ ತ್ರಿವಿಕ್ರಮ್ ಅವರು ಮನೆ ಒಳಗಡೆ ಎಂಟ್ರಿ ಕೊಟ್ಟ ವೀಕ್ಷಕರಿಗೆ ಶಾಕ್ ಕೊಟ್ಟಿದ್ದಾರೆ.
ಹೌದು, ತ್ರಿವಿಕ್ರಮ್ ಅವರು ಮತ್ತೆ ಮನೆ ಒಳಗಡೆ ಬಂದಿದ್ದು ಬಿಗ್ ಬಾಸ್ ವೀಕ್ಷಕರಿಗೆ ಜೀವ ಬಂದಂತಾಗಿದೆ. ಒಬ್ಬ ಉತ್ತಮ ಆಟಗಾರನನ್ನು ಒಮ್ಮೆಲೇ ಮನೆಯಿಂದ ಹೊರಹಾಕುವುದು ಎಷ್ಟು ಸರಿ ಎಂದು ಬಿಗ್ ಬಾಸ್ ವೀಕ್ಷಕರು ಬಿಗ್ ಬಾಸ್ ಗೆ ಪ್ರಶ್ನೆ ಮಾಡಿದ್ದಾರೆ.
ಇನ್ನು ತ್ರಿವಿಕ್ರಮ್ ಮತ್ತೆ ಮನೆ ಒಳಗಡೆ ಬಂದ ಬಳಿಕ, ಇದೀಗ ಭವ್ಯ ಗೌಡ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ಎಂಬ ವಿಚಾರ ಹೊರ ಬಿದ್ದಿದೆ. ಇದು ಯಾವ ಕಾರಣಕ್ಕೆ ಈ ರೀತಿ ಸುದ್ದಿಯಾಗಿದೆ ಎಂಬುವುದು ತಿಳಿದಿಲ್ಲ.
ಒಟ್ಟಾರೆಯಾಗಿ ಬಿಗ್ ಬಾಸ್ ಮನೆಯಲ್ಲಿ ಭವ್ಯ ಗೌಡ ಆಟ ಕಾಣುತ್ತಿಲ್ಲ. ಆಕೆ ಎಲ್ಲಿಯೂ ಇಲ್ಲ ಎಂಬ ಮಾಹಿತಿ ಇದೀಗ ಬಹಿರಂಗವಾಗುತ್ತಿದೆ.