ಬ್ರೇಕಿಂಗ್ ನ್ಯೂಸ್, ಸಾಲದ ಸುಳಿಗೆ ಬಿದ್ದು ಬಿಗ್ ಬಾಸ್ ಮನೆಯಿಂದ ಹೊರಬಂದ ಗೋಲ್ಡ್ ಸುರೇಶ್
Dec 17, 2024, 13:14 IST
|
ನಿನ್ನೆಯಷ್ಟೆ ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದು ಇದೀಗ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದಾರೆ. ಹೌದು, ಗೋಲ್ಡ್ ಸುರೇಶ್ ಅವರ ಮನೆಯಲ್ಲಿ ತುರ್ತುಪರಿಸ್ಥಿತಿ ಎದುರಾಗಿದೆ ಅಂತ ಬಿಗ್ ಬಾಸ್ ಮನೆಯಿಂದ ಗೋಲ್ಡ್ ಹೊರಬಂದಿದ್ದಾರೆ.
ಆದರೆ, ಇದೀಗ ಅಸಲಿ ಕಥೆನೇ ಬೇರೆ ಇದೆ. ಗೋಲ್ಡ್ ಸುರೇಶ್ ಅವರು ಕಷ್ಟಪಟ್ಟು ಜೀವನದಲ್ಲಿ ಮೇಲೆ ಬಂದವರು. ಹಾಗಾಗಿ ಜೀವನಕ್ಕೆ ಬೇಕಾದಷ್ಟು ಸಂಪತ್ತು ಮಾಡಿಕೊಂಡವರು. ಆದರೆ ಇತ್ತಿಚೆಗೆ ಗೋಲ್ಡ್ ಸುರೇಶ್ ಅವರು ತಮ್ಮ ವ್ಯಾಪಾರ ಉದ್ಯಮದಲ್ಲಿ ಸೋಲಿನ ರುಚಿ ಕಾಣುತ್ತಿದ್ದಾರೆ ಎನ್ನಲಾಗಿದೆ.
ಅತಿಯಾದ ಸಾಲ ಇವತ್ತು ಸುರೇಶ್ ಅವರನ್ನು ಕಾಡುತ್ತಿದೆ ಎನ್ನಲಾಗಿದೆ. ಇತ್ತಿಚೆಗೆ ಬಿಗ್ ಬಾಸ್ ಮನೆಯಲ್ಲಿ ಮಂಕಾಗಿ ಕೂತ ದೃಶ್ಯ ಕೂಡ ಕಾಣಬಹುದು. ಈ ಎಲ್ಲಾ ವಿಚಾರ ಗಮನಿಸಿದಾಗ ಗೋಲ್ಡ್ ಸುರೇಶ್ ಅವರಿಗೆ ಸಾಲದ ಬಾದೆ ಇದೆ ಎಂಬ ಮಾತು ಕೂಡ ಸುರೇಶ್ ಅವರ ಆಪ್ತರ ವಲಯದಲ್ಲಿ ಕೇಳಿಬರುತ್ತಿದೆ.
ಇನ್ನು ಸುರೇಶ್ ಅವರು ಈ ಬಿಗ್ ಬಾಸ್ ಮನೆಯಿಂದ ನೇರ ಅವರ ಮನೆ ಕಡೆ ಪ್ರಯಾಣ ಬೆಳೆಸಿದ್ದಾರೆ. ಸಾಲದ ಸುಳಿಯಿಂದ ಹೊರಬರಲು ಮತ್ತೆ ವ್ಯಾಪಾರ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.